»   » 'ಕೋಟಿಗೊಬ್ಬ 2'ನಲ್ಲಿ ಎಷ್ಟು ಹಾಡುಗಳಿವೆ, ಇಲ್ಲಿದೆ ಡೀಟೈಲ್ಸ್

'ಕೋಟಿಗೊಬ್ಬ 2'ನಲ್ಲಿ ಎಷ್ಟು ಹಾಡುಗಳಿವೆ, ಇಲ್ಲಿದೆ ಡೀಟೈಲ್ಸ್

Posted By:
Subscribe to Filmibeat Kannada

ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ಚಿತ್ರದ ಟೀಸರ್ ಮೊನ್ನೆ (ಜುಲೈ 2) ಬಿಡುಗಡೆ ಆಗಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಈಗಾಗಲೇ ಲಕ್ಷಗಟ್ಟಲೇ ಅಭಿಮಾನಿಗಳ ವೀಕ್ಷಣೆಗೆ ಒಳಗಾಗಿರುವ 'ಕೋಟಿಗೊಬ್ಬ 2' ಟೀಸರ್ ಎಲ್ಲಾ ಕಡೆ ವೈರಲ್ ಆಗಿದೆ.

ಅಂದಹಾಗೆ ಜುಲೈ 9 ರಂದು 'ಕೋಟಿಗೊಬ್ಬ 2' ಚಿತ್ರದ ಅದ್ದೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಲಿದ್ದು, ಇದೀಗ ಚಿತ್ರದ ಕಂಪ್ಲೀಟ್ ಆಡಿಯೋ ಲಿಸ್ಟ್ ಹೊರಬಂದಿದೆ. ಅಲ್ಲದೇ ಈಗಾಗಲೇ 'ಕೋಟಿಗೊಬ್ಬ' ಅನ್ನೋ ಟೈಟಲ್ ಟ್ರ್ಯಾಕ್ ನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ. ಚಿತ್ರದ ಟೀಸರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.[ಟೀಸರ್: ವ್ಹಾ.! ನಮ್ ಕಿಚ್ಚ ಅವ್ರುದ್ದು ಅದೇನ್ ಸ್ಟೈಲ್ ಅಂತೀರಾ]


Actor Sudeep's Kannada Movie 'Kotigobba 2' Album full details

ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ 'ಕೋಟಿಗೊಬ್ಬ 2' ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ಚಿತ್ರದ ಹಾಡುಗಳಿಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಡಿ.ಇಮ್ಮಾನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಮೊದಲನೆ ಹಾಡು, "ಕೋಟಿಗೊಬ್ಬ 2" ಹಾಡಿರುವವರು ಗಾಯಕ ವಿಜಯ ಪ್ರಕಾಶ್, ಸಾಹಿತ್ಯ ವಿ. ನಾಗೇಂದ್ರ ಪ್ರಸಾದ್.


ಎರಡನೇ ಹಾಡು, "ಸಾಲುತ್ತಿಲ್ಲವೇ", ಹಾಡಿರುವವರು: ಗಾಯಕಿ ಶ್ರೇಯಾ ಘೋಷಾಲ್ ಮತ್ತು ಗಾಯಕ ವಿಜಯ ಪ್ರಕಾಶ್, ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಜುಲೈನಲ್ಲಿ ಡಬಲ್ ಧಮಾಕಾ]


ಮೂರನೇ ಹಾಡು "ಹ್ಞೂನ ಹ್ಞೂನ", ಈ ಹಾಡಿಗೆ ಮೂವರು ಗಾಯಕರು ಧ್ವನಿ ನೀಡಿದ್ದಾರೆ. ಗಾಯಕ ಜಿತಿನ್ ರಾಜ್, ತಿರುಪತಿ ಮತ್ತು ಎಂ.ಸಿ ರೂಡೆ, ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್.


Actor Sudeep's Kannada Movie 'Kotigobba 2' Album full details

ನಾಲ್ಕನೇ ಹಾಡು, "ಪರಪಂಚ ನೀನೇ", ಹಾಡಿರುವವರು, ಗಾಯಕ ಶಂಕರ್ ಮಹದೇವನ್. ಸಾಹಿತ್ಯ ವಿ ನಾಗೇಂದ್ರ ಪ್ರಸಾದ್.


ಐದನೇ ಹಾಡು, "ಹೆಲ್ಲೋ ಮಿಸ್ಟರ್", ಹಾಡಿರುವವರು ನೀತಿ ಮೋಹನ್ ಮತ್ತು ಸ್ನಿಗ್ದ ಚಂದ್ರ. ಈ ಹಾಡಿಗೂ ವಿ ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದಾರೆ.[ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಚಿತ್ರದ ಬೊಂಬಾಟ್ ಫೋಟೋಗಳು]


ಚಿತ್ರದ ಟೈಟಲ್ ಹಾಡು ಬುಧವಾರದಂದು (ಜುಲೈ 6) ತೆರೆ ಕಾಣುತ್ತಿದ್ದು, ಡ್ಯುಯೆಟ್ ಸಾಂಗ್ 'ಹ್ಞೂನ ಹ್ಞೂನ' ಜುಲೈ 8 ರಂದು ತೆರೆ ಕಾಣುತ್ತಿದೆ. ಒಟ್ನಲ್ಲಿ ದಿನಕ್ಕೊಂದು ಹಾಡು ರಿಲೀಸ್ ಮಾಡಿ, ಜುಲೈ 9ರಂದು ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.


ಸದ್ಯಕ್ಕೆ ಆಗಲೇ ಬಿಡುಗಡೆ ಆಗಿರುವ 'ಕೋಟಿಗೊಬ್ಬ' ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ನೋಡಿ ಎಂಜಾಯ್ ಮಾಡಿ....


Actor Sudeep's Kannada Movie 'Kotigobba 2' Album full details

English summary
According to plan the audio launch of Kannada Movie 'Kotigobba 2' is on July 9th. Here are some details about the album. The album has 5 songs. The 1st song is the title song sung by Vijay Prakash. All the five songs in the film are penned by V Nagendra Prasad. Kannada Actor Sudeep, Actress Nithya menen in the lead role. The movie is directed by KS Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada