»   » ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿದ್ದ 'ಕೋಟಿಗೊಬ್ಬ 2' ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ಶುಕ್ರವಾರ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ದಿನ ಗ್ರ್ಯಾಂಡ್ ಆಗಿ ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಂಡಿತ್ತು.

ಅಂದಹಾಗೆ ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯಲ್ಲಿ 'ಕೋಟಿಗೊಬ್ಬ 2' ಒಂದು ಹೊಸ ಇತಿಹಾಸ ಬರೆದಿದೆ. ಇದನ್ನು ಸ್ವತಃ ಕಿಚ್ಚ ಅವರೇ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಸಿನಿ ಪಯಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ 'ಕೋಟಿಗೊಬ್ಬ 2' ಚಿತ್ರದ ಬಗ್ಗೆ ಸುದೀಪ್ ಅವರಿಗೂ ತುಂಬಾ ಖುಷಿ ಇದೆ.[ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]


ಇನ್ನು ಸಿನಿಮಾ ಬಿಡುಗಡೆ ಆದ ದಿನದಿಂದ ಬಾಕ್ಸಾಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋ ವಿಚಾರವನ್ನು, ಖುದ್ದು ಚಿತ್ರದ ನಿರ್ಮಾಪಕರು ಹಾಗೂ ಸುದೀಪ್ ಅವರು ಪತ್ರಿಕಾಗೋಷ್ಠಿ ಕರೆದು ಬಹಿರಂಗ ಪಡಿಸಿದ್ದಾರೆ.


ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ 'ಕೋಟಿಗೊಬ್ಬ 2' ಚಿತ್ರದ ನಾಲ್ಕು ದಿನದ ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....


ನಾಲ್ಕು ದಿನದ ಕಲೆಕ್ಷನ್

ಘಟಾನುಘಟಿಗಳು ಪ್ರಮುಖ ತಾರಾಗಣದಲ್ಲಿ ಮಿಂಚಿದ್ದ 'ಕೋಟಿಗೊಬ್ಬ 2' ನಾಲ್ಕು ದಿನದಲ್ಲಿ ಮಾಡಿದ್ದು, ಬರೋಬ್ಬರಿ 17 ರಿಂದ 18 ಕೋಟಿ ರೂಪಾಯಿ. ಇದು ಬರೀ ಕರ್ನಾಟಕದಲ್ಲಿ ಮಾತ್ರ.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ಕಲೆಕ್ಷನ್ ಜೋರಾಗೇ ಇದೆ

'ನಾಲ್ಕು ದಿನಗಳಲ್ಲಿ ಚಿತ್ರದ ಕಲೆಕ್ಷನ್ ಬಹಳ ಜೋರಾಗಿದೆ. ನಿರ್ಮಾಪಕರಿಗೆ ನಾವು ನೀಡಿದ ಹಣ ಏಳೆಂಟು ದಿನಗಳಲ್ಲಿ ವಾಪಸ್ ಬರುವ ಎಲ್ಲಾ ಸೂಚನೆ ಸಿಕ್ಕಿದೆ. ಚಿತ್ರಮಂದಿರದ ಮಾಲೀಕರಿಗೆ ಕೊಟ್ಟ ದುಡ್ಡು ಕೂಡ ಇನ್ನೇನು ಕೆಲವೇ ದಿನಗಳಲ್ಲಿ ವಾಪಸ್ ಬರುತ್ತೆ'.- ಜ್ಯಾಕ್ ಮಂಜು, ಚಿತ್ರದ ವಿತರಕ.['ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ]


ಖರ್ಚಾಗಿದ್ದೆಷ್ಟು.?

ಚಿತ್ರದ ಚಾನೆಲ್ ಹಕ್ಕು ಬಿಟ್ಟು, ಸಿನಿಮಾ ವಿತರಕರಿಗೆ ನಿರ್ಮಾಪಕ ಸೂರಪ್ಪ ಬಾಬು ಅವರು ಸೇಲ್ ಮಾಡಿದ್ದು ಸುಮಾರು 16 ಕೋಟಿ ರೂಪಾಯಿಗೆ. ಪ್ರಿಂಟ್ ಮತ್ತು ಪಬ್ಲಿಸಿಟಿ ಸೇರಿ ವಿತರಕರಿಗೆ ಖರ್ಚಾಗಿದ್ದು ಒಟ್ಟು 18 ಕೋಟಿ ರೂಪಾಯಿ ಎಂದು ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟಪಡಿಸಿದ್ದಾರೆ.[ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!]


ಎಲ್ಲರಿಗೂ ಧನ್ಯವಾದ

'ನನ್ನನ್ನ ನಂಬಿ, ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಕೊಂಡುಕೊಂಡ ವಿತರಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. - ಸೂರಪ್ಪ ಬಾಬು


ಕನ್ನಡದ ಮೊದಲ ಚಿತ್ರ

ಬರೋಬ್ಬರಿ 16 ಕೋಟಿಯಂತಹ ದೊಡ್ಡ ಮೊತ್ತಕ್ಕೆ ವಿತರಣೆ ಆಗಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ಕೋಟಿಗೊಬ್ಬ 2' ಪಾತ್ರವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಗರ್ವದಿಂದ ಹೇಳಿದ್ದಾರೆ.


English summary
Actor Sudeep and Actress Nithya menen starrer, KS Ravi Kumar directorial 'Kotigobba 2' 4 Day box office Collection is 17 to 18 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada