»   » ಡಾಕ್ಟರ್ ಆದ್ರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.!

ಡಾಕ್ಟರ್ ಆದ್ರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರು ಯಾವುದೇ ಪಾತ್ರಗಳಿಗೂ ಸೂಟ್ ಆಗುತ್ತಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದ್ದೇ ಬಿಡಿ. ಸುದೀಪ್ ಅವರನ್ನು ಪೊಲೀಸ್ ಪಾತ್ರದಲ್ಲಿ ನೋಡಿದ್ದೀರಾ, ರಿಯಲ್ ಎಸ್ಟೇಟ್ ಬಿಜಿನೆಸ್ ಮ್ಯಾನ್ ಆಗಿ ಕೂಡ ನೋಡಿರುತ್ತೀರಾ, ರೌಡಿ ಆಗಿ ಕೂಡ ನೋಡಿದ್ದೀರಾ. ಆದ್ರೆ ಡಾಕ್ಟರ್ ಆಗಿ ನೋಡಿದ್ದೀರಾ ಇಲ್ಲ ಅಲ್ವಾ.

ಇನ್ನೇನು ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ಅವರನ್ನು ಡಾಕ್ಟರ್ ರೂಪದಲ್ಲಿ ಕೂಡ ತೆರೆಯ ಮೇಲೆ ನೋಡಲಿದ್ದೀರಿ. ಅಂದಹಾಗೆ ಕಿಚ್ಚ ಸುದೀಪ್ ಅವರು ಈ ಮೊದಲು 'ವಿಷ್ಣುವರ್ಧನ' ಚಿತ್ರದಲ್ಲಿ ನಕಲಿ ಡಾಕ್ಟರ್ ಪಾತ್ರದಲ್ಲಿ ನೋಡಿದ್ರಿ. ಆದ್ರೆ ಮುಂಬರೋ ಚಿತ್ರದಲ್ಲಿ ಅಸಲಿ ಡಾಕ್ಟರ್ ಆಗಿ ಕಾಣಲಿದ್ದೀರಿ.[ಕಾಫಿ ಎಸ್ಟೇಟ್ ನಲ್ಲಿ ತುಪ್ಪದ ಹುಡುಗಿ ರಾಗಿಣಿಗೆ ಏನು ಕೆಲಸ?]

ಜೊತೆಗೆ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಸುದೀಪ್ ಅವರಿಗೆ ಸಾಥ್ ಕೊಡಲಿದ್ದಾರೆ. ಅಂತೂ 'ಕೆಂಪೇಗೌಡ' ಮತ್ತು 'ವೀರ ಮದಕರಿ' ಚಿತ್ರದ ನಂತರ ಸುದೀಪ್ ಮತ್ತು ರಾಗಿಣಿ ಮತ್ತೆ ಮೋಡಿ ಮಾಡಲಿದ್ದಾರೆ.

ಅಂದಹಾಗೆ ಯಾವ ಸಿನಿಮಾದಲ್ಲಿ ಸುದೀಪ್ ಅವರು ವೈದ್ಯರ ಪಾತ್ರ ವಹಿಸುತ್ತಿದ್ದಾರೆ, ಅನ್ನೋದನ್ನ ತಿಳಿಯೋ ಕುತೂಹಲವಿದ್ದರೆ, ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ಡಾಕ್ಟರ್ ಆದ್ರು ಸುದೀಪ್

ಕಾಲೇಜ್ ಬಾಯ್, ಪೊಲೀಸ್ ಆಫೀಸರ್, ಬಿಜಿನೆಸ್ ಮ್ಯಾನ್ ಹೀಗೆ ಹಲವು ಪಾತ್ರದಲ್ಲಿ ಸುದೀಪ್ ಅವರು ನಿಮ್ಮನ್ನೆಲ್ಲಾ ತೆರೆಯ ಮೇಲೆ ರಂಜಿಸಿದ್ದಾರೆ. ಆದರೆ ವೈದ್ಯರಾಗಿ ಇದೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಯಾವ ಚಿತ್ರದಲ್ಲಿ.?

ನಟಿ ರಾಗಿಣಿ ದ್ವಿವೇದಿ ಮತ್ತು ದ್ರುವ ಶರ್ಮಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕಿಚ್ಚು' ಚಿತ್ರದಲ್ಲಿ ನಟ ಸುದೀಪ್ ಅವರು ವೈದ್ಯರ ಪಾತ್ರ ವಹಿಸಿದ್ದಾರೆ.

ಅತಿಥಿ ಪಾತ್ರ

ಸುದೀಪ್ ಹಾಗೂ ನಟ ದ್ರುವ ಅವರು ಸಿಸಿಎಲ್ ಮ್ಯಾಚ್ ನಿಂದಾಗಿ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಆದ್ದರಿಂದ ಸ್ನೇಹಿತ ದ್ರುವ ಅವರಿಗೋಸ್ಕರ 'ಕಿಚ್ಚು' ಚಿತ್ರದಲ್ಲಿ ಸುದೀಪ್ ಅವರು ಡಾಕ್ಟರ್ ಆಗಿ ಅತಿಥಿ ಪಾತ್ರ ವಹಿಸಿದ್ದಾರೆ.

'ಹೆಬ್ಬುಲಿ' ಶೂಟಿಂಗ್ ನಲ್ಲಿ ಬಿಜಿ

ಕಿಚ್ಚ ಸುದೀಪ್ ಅವರು 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದರೂ ಕೂಡ ಆತ್ಮೀಯ ಗೆಳೆಯನಿಗೋಸ್ಕರ, ಹಾಗೂ ಚಿತ್ರತಂಡದ ಜೊತೆಗಿನ ಆತ್ಮೀಯ ಬಂಧದಿಂದ, ಬಿಡುವು ಮಾಡಿಕೊಂಡು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಕೂಲಿ ಮಾಡಲಿರುವ ರಾಗಿಣಿ

'ಕಿಚ್ಚು' ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಕಾಫಿ ತೋಟದಲ್ಲಿ ದುಡಿಯುವ ಕೂಲಿ ಕೆಲಸದಾಳು ಪಾತ್ರ ವಹಿಸಲಿದ್ದಾರೆ. ಆದ್ದರಿಂದ ನಿಮಗೆ ಬೇಕು ಅಂದ್ರೂ ರಾಗಿಣಿ ಅವರು ಈ ಚಿತ್ರದಲ್ಲಿ ಗ್ಲಾಮರ್ ಅವತಾರ ತಾಳೋದಿಲ್ಲ. ಪ್ರದೀಪ್ ರಾಜ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಟ ದ್ರುವ ಅವರು ವಾಕ್ ಮತ್ತು ಶ್ರವಣ ದೋಷ ಇರೋ ಪಾತ್ರ ವಹಿಸಿದ್ದಾರೆ. ಜೊತೆಗೆ ನಟಿ ರಾಗಿಣಿ ಅವರು ಕೂಡ ಈ ಚಿತ್ರಕ್ಕಾಗಿ ಸಂಕೇತ ಭಾಷೆಯನ್ನು ಕಲಿತುಕೊಂಡಿದ್ದಾರೆ.

English summary
Kannada Actor Sudeep furthers his benevolent streak by agreeing to make a guest appearance in Actor Dhruva and Actress Ragini Dwivedi starrer, Kannada Movie 'Kichchu'. This will be first time Sudeep will be seen playing the role of a doctor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada