»   » ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸುದೀಪ್

ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸುದೀಪ್

Posted By:
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿ ವರ್ಷ ಕಳೆದರೂ ಕೂಡ ಅವರ ಸಮಾಧಿ ಬಗ್ಗೆ ಎದ್ದಿರುವ ವಿವಾದ ಮಾತ್ರ ಗಾಂಧಿನಗರದಲ್ಲಿ ಇಂದಿಗೂ ಜೀವಂತವಾಗಿದೆ.

ಈಗಾಗಲೇ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಿಂದ ಮೈಸೂರಿಗೆ ಸ್ಥಳಾಂತರ ಮಾಡಲಿದ್ದಾರೆ ಅಂತ ಎಲ್ಲಾ ಕಡೆ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ವಿಷ್ಣು ಅಭಿಮಾನಿಗಳು ಬೃಹತ್ ಪ್ರತಿಭಟನೆ ಕೂಡ ಕೈಗೊಂಡಿದ್ದರು.[ವಿಷ್ಣು ಸ್ಮಾರಕ ಸ್ಥಳಾಂತರ ಗುಲ್ಲು; ಅಭಿಮಾನಿಗಳ ಬೃಹತ್ ಪ್ರತಿಭಟನೆ]

Actor Sudeep Tweets about Dr.Vishnuvardhan memorial

ಆದರೆ ವಿಷ್ಣುದಾದಾ ಅವರ ಸ್ಮಾರಕದ ಬಗ್ಗೆ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಯಾರು ಮಾತನಾಡಿಲ್ಲ, ವಿಶೇಷವಾಗಿ ಸುದೀಪ್ ಅವರು ಏನೂ ಪ್ರತಿಕ್ರಿಯೆ ನೀಡಿಲ್ಲ, ಅಂತ ಇತ್ತೀಚೆಗೆ ಸುದ್ದಿಯಾಗಿತ್ತು.

ಇದೀಗ ನಟ ಕಿಚ್ಚ ಸುದೀಪ್ ಅವರ ವಿಷ್ಣು ಅವರ ಸ್ಮಾರಕದ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.[ವಿಡಿಯೋ: ಕಟ್ಟಕಡೆಯ ಸಂದರ್ಶನದಲ್ಲಿ ಡಾ.ವಿಷ್ಣುವರ್ಧನ್ ಹೇಳಿದ್ದೇನು?]

Actor Sudeep Tweets about Dr.Vishnuvardhan memorial

'ನಾನು ವಿಷ್ಣು ಸೇನಾ ಸಮಿತಿಯ ಸಂಘದವರನ್ನು ಭೇಟಿ ಮಾಡಿದ್ದೆ, ಲೆಜೆಂಡರಿ ನಟರ ಆತ್ಮಕ್ಕೆ ಶಾಂತಿ ದೊರಕಿಸುವ ಬಗ್ಗೆ ಮನಸ್ಸಿನಲ್ಲಿ ಇಟ್ಟುಕೊಂಡು ನನ್ನಿಂದಾಗುವಷ್ಟು ಪ್ರಯತ್ನ ಮತ್ತು ಅವರಿಗಾಗಿ ಪ್ರಾರ್ಥನೆ ಮಾಡುತ್ತೇನೆ' ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.


"ವಿಷ್ಣು ಸರ್ ಅವರು ಯಾವಾಗಲೂ ನನ್ನ ಆರಾಧ್ಯ ದೈವ ಆಗಿರುತ್ತಾರೆ, ಅವರಿಗೋಸ್ಕರ ನನ್ನ ಕೈಲಾದಷ್ಟು ಪ್ರಯತ್ನಗಳನ್ನು ನಾನು ಮಾಡುತ್ತಲೇ ಇದ್ದೇನೆ. ನನ್ನ ಪ್ರಯತ್ನವನ್ನು ನಾನು ಟ್ವಿಟ್ಟರ್ ಮೂಲಕ ಹೇಳಿಕೊಳ್ಳಬೇಕೆಂದೇನಿಲ್ಲ". ಎಂದು ಕಿಚ್ಚ ಅವರು ಸರಣಿ ಟ್ವೀಟ್ ಮಾಡಿದ್ದಾರೆ.


"ಒಬ್ಬ ಮನುಷ್ಯ ಸುಮ್ಮನೆ ಕುಳಿತಿದ್ದಾನೆ ಅಂದ್ರೆ ಅವನು ಏನೂ ಪ್ರಯತ್ನ ಮಾಡದೇ ಸುಮ್ಮನೆ ಇದ್ದಾನೆ ಅಂತ ಅಲ್ಲ. ಸುಮ್ಮನೆ ಕುಳಿತಿದ್ದರೂ ಅವರು ಏನೋ ಮಾಡುತ್ತಿದ್ದಾನೆ ಅಂತ ಅರ್ಥ. ನಾನು ಸಂಬಂಧಪಟ್ಟವರನ್ನು ಭೇಟಿ ಮಾಡಿ ವಿಷ್ಣು ಸರ್ ಅವರ ಸ್ಮಾರಕದ ಕುರಿತಾಗಿ ಮಾತನಾಡಿದ್ದೇನೆ. ನನ್ನ ಕೈಲಾದಷ್ಟು ನಾನು ಪ್ರಯತ್ನ ಮಾಡುತ್ತಿದ್ದೇನೆ" ಎಂದು ಖಡಕ್ ಆಗಿ ಕಿಚ್ಚ ಟ್ವೀಟ್ ಮಾಡಿದ್ದಾರೆ.


ಈ ಮೊದಲು ವಿಷ್ಣು ಅವರ ಕುಚಿಕು ಗೆಳೆಯ ಅಂಬರೀಶ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಕೊನೆಗೂ ಸುದೀಪ್ ಅವರು ಟ್ವಿಟ್ಟರ್ ಮೂಲಕ ಸ್ಮಾರಕದ ಕುರಿತಾಗಿ ಪ್ರತಿಕ್ರಿಯೆ ನೀಡಿರುವುದರಿಂದ ವಿಷ್ಣು ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

English summary
Kannada Actor Sudeep Tweets about against the shift of Dr.Vishnuvardhan memorial from Abhiman Studio, Bengaluru to Mysore (Mysuru).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada