»   » ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ ಮತ್ತೊಬ್ಬ ಕನ್ನಡದ ನಟ

ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ ಮತ್ತೊಬ್ಬ ಕನ್ನಡದ ನಟ

Posted By:
Subscribe to Filmibeat Kannada
ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ ತನುಷ್ ಶಿವಣ್ಣ | Filmibeat Kannada

ಕಳೆದ ವರ್ಷ ಅಂತ್ಯದಲ್ಲಿ ಕನ್ನಡ ಸಿನಿಮಾರಂಗದ ಸಾಲು ಸಾಲು ಕಲಾವಿದರು ಹಾಗೂ ತಂತ್ರಜ್ಞರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾದರು. ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್ ಸೇರಿದಂತೆ ಇನ್ನೂ ಅನೇಕರು ನಿಶ್ಚಿತಾರ್ಥ ಮಾಡಿಕೊಂಡು ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ.

ಈ ವರ್ಷದ ಆರಂಭದಲ್ಲೇ ಚಂದನವನದ ನಟರೊಬ್ಬರ ನಿಶ್ಚಿತಾರ್ಥ ನಡೆದಿದೆ. ಸ್ಯಾಂಡಲ್ ವುಡ್ ನಲ್ಲಿ 'ಅಲೆ' ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ನಟ ತನುಷ್ ಶಿವಣ್ಣ ಅವರ ನಿಶ್ಚಿತಾರ್ಥ ನಿನ್ನೆ(ಫೆ.4) ನಡೆದಿದೆ.

ಉಂಗುರ ಬದಲಿಸಿಕೊಂಡ ಬಾಲಿವುಡ್ ನಟ ಪ್ರತೀಕ್ ಬಬ್ಬರ್:

ನಿಶ್ಚಿತಾರ್ಥ ಮಾಡಿಕೊಂಡಿರುವ ತನುಷ್ ಶಿವಣ್ಣ ಮದುವೆ ಆಗುತ್ತಿರುವ ಹುಡುಗಿ ಯಾರು? ಮದುವೆ ಸಮಾರಂಭ ಎಲ್ಲಿ ನಡೆಯಲಿದೆ? ತನುಷ್ ಅಭಿನಯದ ಮುಂದಿನ ಚಿತ್ರ ಯಾವುದು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಮದುವೆ ಆಗಲು ಅಣಿಯಾದ ನಟ

ಹರ್ಷಿಕಾ ಪೂಣಚ್ಚ ಜೊತೆಯಲ್ಲಿ 'ಅಲೆ' ಸಿನಿಮಾ ಮೂಲಕ ಚಂದನವನದಲ್ಲಿ ನಾಯಕನಾಗಿ ಪರಿಚಯವಾದ ತನುಷ್ ಶಿವಣ್ಣ ಅವರ ನಿಶ್ಚಿತಾರ್ಥ ಸಮಾರಂಭ ನಿನ್ನೆ ನಡೆದಿದೆ.

ಟೀಚರ್ ಕೈ ಹಿಡಿಯಲಿರುವ ನಟ

ಬೆಂಗಳೂರು ನಿವಾಸಿ ಆಗಿರುವ ಇಂಚರಾ ಅವರನ್ನು ನಟ ತನುಷ್ ಮದುವೆ ಆಗಲಿದ್ದಾರೆ. ಗುರು-ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. ಏರ್ಪಿಲ್ 20 ರಂದು ತನುಷ್ ಹಾಗೂ ಇಂಚರಾ ಸಪ್ತಪದಿ ತುಳಿಯಲಿದ್ದಾರೆ.

ಇಂಚರಾ ವೃತ್ತಿಯಲ್ಲಿ ಟೀಚರ್

ಇಂಚರಾ ಎಂ ಕಾಂ ವಿದ್ಯಾಭ್ಯಾಸವನ್ನ ಮುಗಿಸಿದ್ದು ತಾನು ಓದಿದ ಶಾಲೆಯಲ್ಲೇ ಮಕ್ಕಳಿಗೆ ಟೀಚರ್ ಆಗಿ ಪಾಠ ಹೇಳುತ್ತಿದ್ದಾರೆ. ನೆಲಮಂಗಲ ಬಳಿ ಇರುವ ತಸ್ರುಘಟ್ಟದಲ್ಲಿ ಇಂಚರಾ ಹಾಗೂ ಅವರ ತಂದೆ ತಾಯಿ ವಾಸವಿದ್ದಾರೆ.

ತೆರೆಗೆ ಬರಲು ಸಿದ್ದವಾಗಿರುವ ಸಿನಿಮಾ

ಅಲೆ ಸಿನಿಮಾ ಮೂಲಕ ಚಿತ್ರರಂಗದ ಪ್ರಯಾಣವನ್ನ ಆರಂಭಿಸಿದ ತನುಷ್ ನಂತರ 'ಮಡಮಕ್ಕಿ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಸದ್ಯ ಶ್ರಾವ್ಯ ಹಾಗೂ ತನುಷ್ ಅಭಿನಯದ ನಂಜುಂಡಿ ಕಲ್ಯಾಣ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ದವಾಗಿದೆ.

English summary
Kannada actor Thanush Shivappa has been engaged yesterday, Tanush is engaged with Inchara,Thanush and Inchara will be married at Airpil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada