Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಬ್ಬಿಂಗ್, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಉಪೇಂದ್ರ ಅಭಿಪ್ರಾಯ
ಹಿರಿಯ ನಟ ಜಗ್ಗೇಶ್ ಅವರ ಹೇಳಿಕೆಯೊಂದರಿಂದ ಡಬ್ಬಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದೆ.
ಆದರೆ ಈ ಚರ್ಚೆಯಲ್ಲಿ ನಟ ಜಗ್ಗೇಶ್ ಹೊರತುಪಡಿಸಿದರೆ ಬಹುತೇಕ ನೆಟ್ಟಿಗರಷ್ಟೆ ಪಾಲ್ಗೊಂಡು ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಯಾವ ಸ್ಟಾರ್ ನಟರಾಗಲಿ, ನಿರ್ದೇಶಕರಾಗಲಿ ಈ ಚರ್ಚೆಯಿಂದ, ಜಗ್ಗೇಶ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
''ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ, ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು''- ಜಗ್ಗೇಶ್
ಆದರೆ ನಟ ಉಪೇಂದ್ರ ಅವರು ಡಬ್ಬಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಚರ್ಚೆಗೆ ಧುಮುಕಿದ್ದಾರೆ. ತಮ್ಮ ಅಣ್ಣನ ಮಗನ ಮೊದಲ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪೇಂದ್ರ, ಪತ್ರಕರ್ತರೊಂದಿಗೆ ಮಾತಿಗೆ ಕೂತಾಗ ಡಬ್ಬಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದ ಪ್ರಶ್ನೆಗಳು ಅವರಿಗೆ ಎದುರಾಗಿವೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ ನಟ ಉಪೇಂದ್ರ.

'ರಿಮೇಕ್ ಆಗುವ ಬದಲು ನೇರವಾಗಿ ಬಿಡುಗಡೆ ಆಗುತ್ತಿವೆ'
'ಪ್ಯಾನ್ ಇಂಡಿಯಾ ಇರುವವರೆಗೂ ಪ್ಯಾನ್ ಇಂಡಿಯಾ ಸಿನಿಮಾಗಳು ಇದ್ದೇ ಇರುತ್ತವೆ. ಮೊದಲಿಗೆ ಸಿನಿಮಾಗಳು ರೀಮೇಕ್ ಆಗಿ ಬೇರೆ ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದವು, ಈಗ ನೇರವಾಗಿ ಅವರದ್ದೇ ಭಾಷೆಯಲ್ಲಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ' ಎಂದರು ಉಪೇಂದ್ರ.

ಜನರ ನಿರ್ಣಯವೇ ನನ್ನ ನಿರ್ಣಯ: ಉಪೇಂದ್ರ
'ಜನಗಳು ನಮ್ಮ (ಕನ್ನಡ) ಸಿನಿಮಾಗಳಿಗೆ ಬೆಲೆ ಕೊಡ್ತಾರೆ. ಡಬ್ಬಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ವಿಚಾರದಲ್ಲಿ ಜನಗಳ ತೀರ್ಮಾನವೇ ನಮ್ಮ ತೀರ್ಮಾನ. ಒಬ್ಬ ವ್ಯಕ್ತಿಯ ಅಭಿಪ್ರಾಯ ಎಲ್ಲರ ವಿಚಾರ ಆಗಬಾರದು. ಎಲ್ಲಾ ಕನ್ನಡಿಗರು ಸೇರಿ ಇದು ಸರಿ ಅಂದರೆ ಸರಿ, ತಪ್ಪು ಎಂದರೆ ಅದು ತಪ್ಪು, ಇಲ್ಲಿ ನನ್ನೊಬ್ಬನ ವೈಯಕ್ತಿಕ ನಿರ್ಧಾರ ಮುಖ್ಯವಲ್ಲ' ಎಂದರು ಉಪೇಂದ್ರ.
'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ

ಕಬ್ಜ ಸಿನಿಮಾ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ
ನಟ ಉಪೇಂದ್ರ ಅವರ ಕಬ್ಜ ಸಿನಿಮಾ ಸಹ ಬೇರೆ-ಬೇರೆ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದಾರೆ. ಇದೇ ಸಿನಿಮಾದ ಎರಡನೇ ಭಾಗವೂ ನಿರ್ಮಾಣವಾಗಲಿದೆ.

ಉಪೇಂದ್ರ ಅಣ್ಣನ ಮಗನ ಸಿನಿಮಾ
ಇನ್ನು ಉಪೇಂದ್ರ ಅವರ ಅಣ್ಣನ ಮಗ ನಿರಂಜನ ನಟನಾಗುತಿತ್ತಿದ್ದು, ಮೊದಲ ಸಿನಿಮಾ 'ಸೂಪರ್ ಸ್ಟಾರ್'ನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಇಂದಷ್ಟೆ ನಡೆದಿದ್ದು, ಸಿನಿಮಾವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಲಿದ್ದಾರೆ. ಸಿನಿಮಾದಲ್ಲಿ ಪ್ರಭುದೇವಾ ತಂದೆ ಮೂಗೂರು ಸುಂದರಂ ಸಹ ನಟಿಸುತ್ತಿದ್ದಾರೆ.