»   » ಮೂವರು ಮಕ್ಕಳ ಕೊನೆ ಆಸೆ ಈಡೇರಿಸಿದ ವಿಜಯ್

ಮೂವರು ಮಕ್ಕಳ ಕೊನೆ ಆಸೆ ಈಡೇರಿಸಿದ ವಿಜಯ್

Posted By:
Subscribe to Filmibeat Kannada

ತೆರೆಮೇಲೆ ವಿಲನ್ ಗಳನ್ನ ಬಗ್ಗು ಬಡಿದರೆ ಸಾಲದು, ನಿಜ ಜೀವನದಲ್ಲೂ 'ನಾಯಕ'ರಾದಮೇಲೆ ಹೃದಯವಂತಿಕೆ ಮೆರೆಯಬೇಕು. ಅಂತಹ ಹೃದಯವಂತಿಕೆ ಇರುವ ಸಜ್ಜನ ನಟರಲ್ಲಿ ಕಾಲಿವುಡ್ ಹೀರೋ ವಿಜಯ್ ಕೂಡ ಒಬ್ಬರು.

'ವಿಜಯ್ ಮಕ್ಕಳ್ ಇಯಕ್ಕಮ್' ಅನ್ನುವ ಸಮಾಜ ಕಲ್ಯಾಣ ಸಂಸ್ಥೆ ಮೂಲಕ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿರುವ ವಿಜಯ್, ನಿನ್ನೆ ಮೂವರು ಮಕ್ಕಳ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಚೆನ್ನೈನ ಅನಾಥಾಶ್ರಮವೊಂದರಲ್ಲಿರುವ ಮೂವರು ಮಕ್ಕಳು ನಿನ್ನೆ (ಫೆಬ್ರವರಿ 14) ವಿಜಯ್ ರನ್ನ ಭೇಟಿ ಮಾಡಿದ್ದಾರೆ. ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಈ ಮಕ್ಕಳಿಗೆ ಸಾವು ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು ಅನ್ನುವ ಭೀತಿ. [ಕ್ಯಾನ್ಸರ್ ರೋಗಿಗೆ ಮರು ಜೀವ ಕೊಟ್ಟ ರಾಜ್ ಕುಟುಂಬ]

Actor Vijay

ಅನಾಥಾಶ್ರಮದ ಪರಿಶ್ರಮದಿಂದ ಎಲ್ಲಾ ಅಗತ್ಯ ಚಿಕಿತ್ಸೆಗಳನ್ನ ನೀಡಿದರೂ ಅದು ಫಲಕಾರಿಯಾಗಿಲ್ಲ. ಬ್ಲಡ್ ಕ್ಯಾನ್ಸರ್ ನ ಫೈನಲ್ ಸ್ಟೇಜ್ ನಲ್ಲಿ ಈ ಪುಟಾಣಿ ಮಕ್ಕಳಿದ್ದಾರೆ. ಇವರಿಗೆ ನಟ ವಿಜಯ್ ಅಂದ್ರೆ ಅಚ್ಚುಮೆಚ್ಚು.

ಸಾಯುವ ಮುನ್ನ ಒಮ್ಮೆ ವಿಜಯ್ ರನ್ನ ನೋಡಿ, ಅವರೊಂದಿಗೆ ಫೋಟೋ ಹಿಡಿಸಿಕೊಳ್ಳಬೇಕೆನ್ನುವುದು ಮಕ್ಕಳ ಕೊನೆ ಆಸೆಯಾಗಿತ್ತು. ಇದಕ್ಕೆ ಸ್ಪಂದಿಸಿರುವ ನಟ ವಿಜಯ್, ನಿನ್ನೆ ಇಡೀ ದಿನ ಮಕ್ಕಳೊಂದಿಗೆ ಸಮಯ ಕಳೆದು, ಅವರನ್ನ ಖುಷಿ ಪಡಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಹಕ್ಕು, ಮಕ್ಕಳ ಆರೋಗ್ಯದ ಬಗ್ಗೆ ಸದಾ ದನಿಯೆತ್ತುವ ವಿಜಯ್, ಈ ಪುಟಾಣಿಗಳನ್ನ ಕಂಡು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವೈದ್ಯರೇ ಕೈಚೆಲ್ಲಿ ಕೂತಿರುವ ಕಾರಣ, ಮಕ್ಕಳ ಭವಿಷ್ಯಕ್ಕೆ ದೇವರು ನೆರವಾಗಲಿ ಅಂತ ಪ್ರಾರ್ಥಿಸಿದ್ದಾರೆ.

English summary
Three Children affected by blood cancer and are living their last few days. They had expressed their last desire to meet the actor. Hearing this Vijay Immediately invited them and spent time with the kids.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada