»   » 12 ಲಕ್ಷ ಬೆಲೆಬಾಳುವ ಕಳೆದು ಹೋದ ನಿಶ್ಚಿತಾರ್ಥದ ಉಂಗುರ ಪತ್ತೆ

12 ಲಕ್ಷ ಬೆಲೆಬಾಳುವ ಕಳೆದು ಹೋದ ನಿಶ್ಚಿತಾರ್ಥದ ಉಂಗುರ ಪತ್ತೆ

Posted By: Suni
Subscribe to Filmibeat Kannada

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಮಗಳು ಅಕ್ಷಿತಾ ಅವರ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದೆ ಅಂತ ಇತ್ತೀಚೆಗಷ್ಟೇ ಕೇಸು ದಾಖಲಾಗಿತ್ತು. 'ಕೆವಿನ್ ಕೇರ್' ಮಾಲೀಕ ರಂಗನಾಥನ್ ಅವರ ಪುತ್ರ ಮನು ರಂಜಿತ್ ಅವರ ಜೊತೆ ಕೆಲವು ದಿನಗಳ ಹಿಂದೆ ಅಕ್ಷಿತಾ ಅವರ ನಿಶ್ಚಿತಾರ್ಥ ನೆರವೇರಿತ್ತು.

ಸುಮಾರು 12 ಲಕ್ಷ ಬೆಲೆಬಾಳುವ ನಿಶ್ಚಿತಾರ್ಥದ, ವಜ್ರದುಂಗುರವನ್ನು ಅಕ್ಷಿತಾ ಅವರು ಕಳೆದುಕೊಂಡಿದ್ದರು. ಆಗಸ್ಟ್ 2, ಮಂಗಳವಾರ ಮಧ್ಯಾಹ್ನದ ವೇಳೆ ಅಕ್ಷಿತಾ ಅವರು ಚೆನ್ನೈನ ಖಾದರ್ ನವಾಸ್ ಖಾನ್ ರಸ್ತೆ ಬಳಿ ಇರುವ ಐಸ್ ಕ್ರೀಮ್ ಪಾರ್ಲರ್ ಗೆ ತಮ್ಮ ಸ್ನೇಹಿತೆಯರ ಜೊತೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಉಂಗುರವನ್ನು ಕಳೆದುಕೊಂಡಿದ್ದರು.[12 ಲಕ್ಷ ಬೆಲೆಬಾಳುವ ನಿಶ್ಚಿತಾರ್ಥದ ಉಂಗುರ ನಾಪತ್ತೆ]

Actor Vikram's daughter gets lost engagement ring back from cab driver

ಈ ಬಗ್ಗೆ ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಗೆ ವಿಕ್ರಮ್ ಕುಟುಂಬದವರು ದೂರು ನೀಡಿದ್ದು, ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಐಸ್ ಕ್ರೀಮ್ ಪಾರ್ಲರ್ ನ ಸಿಸಿಟಿವಿ ಫುಟೇಜ್ ಗಳನ್ನು ಪಡೆದು ತನಿಖೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.[ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ]

Actor Vikram's daughter gets lost engagement ring back from cab driver

ಇದೀಗ ಸಂತಸ ವಿಚಾರ ಏನಪ್ಪಾ ಅಂದ್ರೆ, ಭಾರಿ ಬೆಲೆಬಾಳುವ ವಜ್ರದುಂಗುರ ಸದ್ಯ ಮತ್ತೆ ಅಕ್ಷಿತಾ ಅವರ ಕೈ ಸೇರಿದೆ. ಕ್ಯಾಬ್ ಡ್ರೈವರ್ ಲಕ್ಷ್ಮಣನ್ (36) ಎಂಬುವವರು ಖುದ್ದಾಗಿ ವಿಕ್ರಮ್ ಅವರ ಮನೆಗೆ ತೆರಳಿ, ಉಂಗುರ ವಾಪಸ್ ನೀಡುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ]

Actor Vikram's daughter gets lost engagement ring back from cab driver

'ಗಾಂಧಿ ಪೌಂಡೇಶನ್ ಎಂಬ ಸಂಸ್ಥೆಯವರಾದ ಲಕ್ಷ್ಮಣನ್ ಅವರು ಮಾಧ್ಯಮದ ಮೂಲಕ ಅಕ್ಷಿತಾ ಅವರ ರಿಂಗ್ ಕಳೆದುಕೊಂಡಿದ್ದ ವಿಚಾರವನ್ನು ತಿಳಿದುಕೊಂಡಿದ್ದರು. ತಮಗೆ ಸಿಕ್ಕ ರಿಂಗ್ ನ ಬೆಲೆ ತಿಳಿಯದ ಲಕ್ಷ್ಮಣನ್ ಅವರು, ಅದನ್ನು ತೆಗೆದುಕೊಂಡು ಹೋಗಿ ವಿಕ್ರಮ್ ಅವರ ಬಳಿ ನೀಡಿದ್ದಾರೆ.[10 ಎಣಿಸುವಷ್ಟರಲ್ಲೇ ಟೀಸರ್ ನೋಡಿ ಅನೂಪ್ ಗೆ ವಿಶ್ ಮಾಡಿ]

Actor Vikram's daughter gets lost engagement ring back from cab driver

ತಕ್ಷಣ ಅದನ್ನು ಗುರುತು ಹಿಡಿದ ಅಕ್ಷಿತಾ ಅವರು ತಮ್ಮದೆಂದು ಒಪ್ಪಿಕೊಂಡಿದ್ದಾರೆ. ಇದೀಗ ಬೆಲೆಬಾಳುವ ನಿಶ್ಚಿತಾರ್ಥದ ಉಂಗುರ ವಾಪಸ್ ದೊರೆತ ಖುಷಿಯಲ್ಲಿ ಡ್ರೈವರ್ ನ ಪ್ರಾಮಾಣಿಕತೆಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

English summary
Tamil Actor Vikram's daughter Akshita lost her engagement ring worth several lakhs in an ice-cream parlour on Khader Nawaz Khan Road in Chennai, it was returned to the groom’s family by 36-year-old, Lakshmanan, a cab driver. Akshita and Manu Ranjith, great-grandson of Kalaignar Karunanidhi, recently got engaged.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X