For Quick Alerts
  ALLOW NOTIFICATIONS  
  For Daily Alerts

  ನಟ ವಿನೋದ್ ರಾಜ್ ಕಾರು ಡಿಕ್ಕಿ; ಇಬ್ಬರು ಗಂಭೀರ

  By ಉದಯರವಿ
  |

  ಕನ್ನಡ ಚಿತ್ರರಂಗದ ಖ್ಯಾತ ತಾರೆ ಡಾ.ಲೀಲಾವತಿ ಅವರ ಪುತ್ರ, ನಟ ವಿನೋದ್ ರಾಜ್ ಅವರ ಬೊಲೆರೋ (KA52 M1678) ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ (ಫೆಬ್ರವರಿ 2) ಬೆಳಗ್ಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನೆಲಮಂಗಲದ ಮೊದಲನೇ ಟೋಲ್ ಬಳಿ ಈ ಘಟನೆ ಸಂಭವಿಸಿದೆ.

  ಈ ಸಂಬಂಧ ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬೊಲೆರೋ ಚಾಲಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆದರೆ ಡ್ರೈವರ್ ಹೆಸರನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಿಲ್ಲ. ಪೊಲೀಸರ ಪ್ರಕಾರ ನಟ ವಿನೋದ್ ರಾಜ್ ಅವರು ವಾಹನವನ್ನು ಚಲಾಯಿಸುತ್ತಿರಲಿಲ್ಲ. ಘಟನೆ ನಡೆದಾಗ ಅವರು ಮನೆಯಲಿದ್ದರು ಎಂದು ಪೊಲೀಸರು ವಿವರ ನೀಡಿದ್ದಾರೆ.

  ಪೀಣ್ಯಾದದಲ್ಲಿ ಕೆಲಸ ಮಾಡುತ್ತಿರುವ ಟಿ ಸುನಿಲ್ ಹಾಗೂ ಆತನ ಸ್ನೇಹಿತ ಸುಜಯ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರಬೇಕಾದರೆ ಬೊಲೆರೋ ವಾಹನ ಬೆಳಗ್ಗೆ ಸುಮಾರು 9.30ರ ಸಮಯದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹೊಡೆದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು ಈಗ ಎಂಎಸ್ ರಾಮಯ್ಯ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ.

  ಅಪಘಾತ ನಡೆದಾಗ ಮತ್ತೊಂದು ವಾಹನದಲ್ಲಿ ಬರುತ್ತಿದ್ದ ಸುನಿಲ್ ಗೆಳೆಯರು ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಅಷ್ಟರಲ್ಲ್ಲಾಗಲೆ ಬೊಲೆರೋ ವಾಹನ ಪೊಲೀಸ್ ಠಾಣೆ ಬಳಿ ಇತ್ತು. ಅಪಘಾತವಾಗಿರುವ ಬಗ್ಗೆ ಅದಾಗಲೆ ಪೊಲೀಸರಿಗೆ ಚಾಲಕ ಮಾಹಿತಿ ನೀಡಿ ಹೊರಟು ಹೋಗಿದ್ದರು ಎನ್ನುತ್ತವೆ ಮೂಲಗಳು.

  ಬಳಿಕ ಸಬ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಅವರು ವಾಹನ ಅಪಘಾತಕ್ಕೆ ಒಳಗಾಗಿರುವ ಬಗ್ಗೆ ವಿನೋದ್ ರಾಜ್ ಅವರಿಗೆ ವಿಷಯ ತಿಳಿಸಿದ್ದಾರೆ. ಆದರೆ ವಿನೋದ್ ರಾಜ್ ಅವರು ಇದುವರೆಗೂ ಆಸ್ಪತ್ರೆಗಾಗಲಿ, ತಮ್ಮ ಕರೆಗಾಗಲಿ ಸ್ಪಂದಿಸುತ್ತಿಲ್ಲ. ತಮ್ಮ ಗೆಳೆಯರು ಮಾತ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು 'ಬೆಂಗಳೂರು ಮಿರರ್' ಪತ್ರಿಕೆ ಜೊತೆ ಮಾತನಾಡುತ್ತಾ ಸುನಿಲ್ ಗೆಳೆಯ ಉದಯ್ ನೋವು ತೋಡಿಕೊಂಡಿದ್ದಾರೆ.

  English summary
  Bangalore Mirror reports that, Kannada actor Vinod Raj's Bolero vehicle was involved in an accident that injured two motorists critically on Sunday morning.The accident took place on National Highway 48 just before the first toll booth in Nelamangala,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X