For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ 'ನೋ' ಎಂದ ಯಶ್ : ಕಾರಣ ಏನು?

  |
  ಹುಟ್ಟುಹಬ್ಬಕ್ಕೆ 'ನೋ' ಎಂದ ಯಶ್ : ಕಾರಣ ಏನು? | FILMIBEAT KANNADA

  ನಾಳೆ ಜನವರಿ 8 ಅಂದರೆ, ರಾಕಿಂಗ್ ಸ್ಟಾರ್ ಹುಟ್ಟುಹಬ್ಬ. ನಟ ಯಶ್ ಅಭಿಮಾನಿಗಳು ನಾಳೆಯ ಸಂತೋಷಕ್ಕಾಗಿ ಬಹಳ ದಿನಗಳಿಂದ ತಯಾರಿ ಮಾಡಿಕೊಳ್ಳುತಿರುತ್ತಾರೆ. ಆದರೆ, ಅಂತಹ ಅಭಿಮಾನಿಗಳಿಗೆ ಈ ವರ್ಷ ಕೊಂಚ ನಿರಾಸೆ ಆಗಬಹುದು.

  ಹೌದು, ಯಶ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾತನಾಡಿರುವ ಅವರು ಅಭಿಮಾನಿಗಳಿಗೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ಪ್ರತಿ ವರ್ಷ ಅಭಿಮಾನಿಗಳು ಅದ್ದೂರಿಯಾಗಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಿರುತ್ತಿದ್ದರು. ಇನ್ನು, 'ಕೆಜಿಎಫ್' ಸಿನಿಮಾ ಸೂಪರ್ ಹಿಟ್ ಆದ ಕಾರಣ ಈ ವರ್ಷ ಯಶ್ ಹುಟ್ಟುಹಬ್ಬ ಇನ್ನು ಜೋರಾಗಿ ಇರಬಹುದು ಎನ್ನುವ ಲೆಕ್ಕಾಚಾರ ಕೆಲವರಿಗೆ ಇರಬಹುದು.

  ಹುಟ್ಟುಹಬ್ಬ ಆಚರಣೆ 'ನೋ' ಎಂದ ಪ್ರಭಾಕರ್ ಪುತ್ರ, ಕಾರಣ ಏನು?

  ಆದರೆ, ಈ ವರ್ಷ ಯಶ್ ಸಂಭ್ರಮದ ಪಡುವ ಮನಸ್ಥಿತಿಯಲ್ಲಿ ಇಲ್ಲವಂತೆ. ಏಕೆ ಕಾರಣ ಮುಂದಿದೆ ಓದಿ....

  ಅಂಬರೀಶ್ ನಿಧನದ ಕಾರಣ ಹುಟ್ಟುಹಬ್ಬ ಇಲ್ಲ

  ಅಂಬರೀಶ್ ನಿಧನದ ಕಾರಣ ಹುಟ್ಟುಹಬ್ಬ ಇಲ್ಲ

  ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನವಾದ ಕಾರಣ ನಟ ಯಶ್ ಈ ವರ್ಷದ ತಮ್ಮ ಹುಟುಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಈ ಮೂಲಕ ಚಿತ್ರರಂಗದ ಹಿರಿಯ ನಟ ಹಾಗೂ ತಮ್ಮ ಪ್ರೀತಿಯ ಅಣ್ಣನಿಗೆ ರಾಕಿಂಗ್ ಸ್ಟಾರ್ ಗೌರವ ಸಮರ್ಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ನಿನ್ನೆ ಸಂಜೆ ಯಶ್ ತಿಳಿಸಿದ್ದಾರೆ.

  ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಿದ ವಿಜಯ್ ಕಿರಗಂದೂರ್

  ಯಶ್ ಮನವಿ

  ಯಶ್ ಮನವಿ

  ಈ ಬಗ್ಗೆ ಮಾತನಾಡಿರುವ ಯಶ್ ''ಜನವರಿ 8 ನನ್ನ ಹುಟ್ಟುಹಬ್ಬ. ನನಗೆ ಗೊತ್ತು ಸಾಕಷ್ಟು ಅಭಿಮಾನಿಗಳು ಪ್ರೀತಿಯಿಂದ ನನ್ನನ್ನು ಭೇಟಿ ಮಾಡಬೇಕು ಅಂತ ಕಾಯುತ್ತಿರುತ್ತೀರಿ. ಆದರೆ, ಈ ಬಾರಿ ನಾನು ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಇಷ್ಟ ಇಲ್ಲ. ನಮ್ಮ ಕುಟುಂಬದ ಹಿರಿಯರಾದ ಅಂಬರೀಶ್ ಅವರು ನಮ್ಮ ಜೊತೆಗೆ ಇಲ್ಲ. ಅವರಿಗೆ ಗೌರವ ಸೂಚಿಸುವ ಮೂಲಕ ನಾನು ಬರ್ತ್ ಡೇ ಆಚರಿಸುತ್ತಿಲ್ಲ.'' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಐಟಿ ದಾಳಿ ಬಗ್ಗೆ ಯಶ್-ವಿಜಯ್ ಕಿರಗಂದೂರ್ ಇಬ್ಬರಿಗೂ ಒಂದೇ ಅನುಮಾನ.!

  ಯಶೋ ಯಾತ್ರೆ

  ಯಶೋ ಯಾತ್ರೆ

  ''ನಿಮ್ಮ ಪ್ರೀತಿ ನೋಡಿ ನನಗೆ ಬಹಳ ಖುಷಿಯಾಗಿದೆ. ಆದರೆ, ನನಗೆ ಈ ಬಾರಿ ಹುಟ್ಟುಹಬ್ಬ ಮಾಡಿಕೊಳ್ಳುವ ಬಯಕೆ ಇಲ್ಲ. ಯಾರು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮ್ಮನ್ನು ಪ್ರತಿ ವರ್ಷ ಭೇಟಿ ಮಾಡಲು ನಾನು ಇಷ್ಟ ಪಡುತ್ತೇನೆ. ನಿಮ್ಮ ನಿಮ್ಮ ಊರುಗಳಿಗೆ ನಾನೇ 'ಕೆಜಿಎಫ್' ಯಶಸ್ಸಿನ ಹಿನ್ನಲೆ 'ಯಶೋ ಯಾತ್ರೆ' ಮೂಲಕ ಬರುತ್ತಿದ್ದೇನೆ.'' - ಯಶ್, ನಟ

  ಈ ನಟರು ಸಹ ಹುಟ್ಟುಹಬ್ಬ ಮಾಡಿಕೊಳ್ಳಲಿಲ್ಲ

  ನಟ ಯಶ್ ಅವರಿಗೂ ಹಿಂದೆ ವಿನೋದ್ ಪ್ರಭಾಕರ್ ಹಾಗೂ ಮನೋರಂಜನ್ ಕೂಡ ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಲಿಲ್ಲ. ಅಂಬರೀಶ್ ಅವರ ನಿಧನದ ಹಿನ್ನಲೆ ವಿನೋದ್ ಪ್ರಭಾಕರ್ ಮತ್ತು ಮನೋರಂಜನ್ ಸಹ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿ ಅಂಬಿಗೆ ಗೌರವ ಸೂಚಿಸಿದರು.

  English summary
  Kannada actor Yash is not celebrating his birthday this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X