For Quick Alerts
  ALLOW NOTIFICATIONS  
  For Daily Alerts

  ಪಾಂಡ್ಯಾ ಸಹೋದರರ ಭೇಟಿಯಾದ ನಟ ಯಶ್! 'ಕೆಜಿಎಫ್ 3' ಎಂದಿದ್ದೇಕೆ?

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಯಶ್‌ರ ಪ್ರತಿಯೊಂದು ಕದಲಿಕೆಯೂ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಕಳೆದ ತಿಂಗಳಷ್ಟೆ ವಿದೇಶಕ್ಕೆ ಹೋಗಿ ಅಲ್ಲಿನ ಸಾಹಸ ನಿರ್ದೇಶಕರನ್ನು ಭೇಟಿಯಾಗಿದ್ದ ನಟ ಯಶ್ ಇದೀಗ ಇಬ್ಬರು ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ.

  ನಟ ಯಶ್ ಇಂದು ಭಾರತ ತಂಡದ ಕ್ರಿಕೆಟರ್‌ಗಳಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೃನಾಲ್ ಪಾಂಡ್ಯಾ ಅವರುಗಳನ್ನು ಭೇಟಿಯಾಗಿದ್ದಾರೆ. ಇದಷ್ಟೆ ಆಗಿದ್ದಿದ್ದರೆ ಹೆಚ್ಚಿಗೇನೂ ವಿಶೇಷತೆ ಇರುತ್ತಿರುಲಿಲ್ಲವೇನೋ, ಆದರೆ ಈ ಭೇಟಿಯ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಪಾಂಡ್ಯಾ ಕೊಟ್ಟಿರುವ ಕ್ಯಾಪ್ಷನ್ ಕುತೂಹಲ ಮೂಡಿಸಿದೆ.

  ಯಶ್ ಜೊತೆಗಿನ ಭೇಟಿಯ ಚಿತ್ರಗಳನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಚಿತ್ರಕ್ಕೆ ಅವರು 'ಕೆಜಿಎಫ್ 3' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ.

  'ಕೆಜಿಎಫ್ 3'ಗೂ ಪಾಂಡ್ಯಾ ಸಹೋದರರಿಗೂ ಏನು ಸಂಬಂಧ. 'ಕೆಜಿಎಫ್ 3' ನಲ್ಲಿ ಪಾಂಡ್ಯಾ ಬ್ರದರ್ಸ್ ಏನಾದರೂ ನಟಿಸಲಿದ್ದಾರೆಯೇ? ಎಂಬ ಅನುಮಾನವನ್ನು ಕೆಲವು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಅಥವಾ ತಮಾಷೆ ವ್ಯಕ್ತಿತ್ವದ ಹಾರ್ದಿಕ್ ಪಾಂಡ್ಯಾ ಕೇವಲ ತಮಾಷೆಗಾಗಿ, ಸಿನಿಪ್ರಿಯರ ತಲೆಗೆ ಹುಳ ಬಿಡಲೆಂದೇ ಈ ರೀತಿ ಕ್ಯಾಪ್ಷನ್ ಹಾಕಿದ್ದಾರೆಯೇ ಭವಿಷ್ಯದಲ್ಲಿ ಗೊತ್ತಾಗಲಿದೆ.

  ಕೃನಾಲ್ ಪಾಂಡ್ಯಾ ಹಾಗೂ ಹಾರ್ದಿಕ್ ಪಾಂಡ್ಯಾ ಅವರುಗಳು ಯಶ್ ಅನ್ನು ಆತ್ಮೀಯವಾಗಿ ಅಪ್ಪಿಕೊಂಡಿರುವ ಚಿತ್ರದ ಜೊತೆಗೆ ಹಾರ್ದಿಕ್ ಪಾಂಡ್ಯಾ ಹಾಗೂ ಯಶ್ ಆತ್ಮೀಯತೆ ಪ್ರದರ್ಶಿಸುತ್ತಿರುವ ಮತ್ತೊಂದು ಚಿತ್ರ, ಒಟ್ಟು ಎರಡು ಚಿತ್ರಗಳನ್ನು ಹಾರ್ದಿಕ್ ಪಾಂಡ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹಾರ್ದಿಕ್ ಪಾಂಡ್ಯಾ ಈ ಚಿತ್ರವನ್ನು ಹಂಚಿಕೊಂಡ ಕೇವಲ ಎರಡೇ ಗಂಟೆಯಲ್ಲಿ ಸುಮಾರು 20 ಲಕ್ಷ ಲೈಕ್ಸ್‌ಗಳು ಈ ಚಿತ್ರಕ್ಕೆ ದೊರೆತಿವೆ. ಹಾರ್ದಿಕ್ ಪಾಂಡ್ಯಾರ ಅತಿ ಹೆಚ್ಚು ಲೈಕ್ಸ್ ಗಳಿಸಿದ ಚಿತ್ರ ಇದಾಗುವುದರಲ್ಲಿ ಸಂಶಯವಿಲ್ಲ.

  ಇನ್ನು ಯಶ್‌ರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, 'ಕೆಜಿಎಫ್' ಸರಣಿಯ ಸಿನಿಮಾಗಳ ನಂತರ ಯಶ್ ಇನ್ನಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಯಶ್‌ರ ಈ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾದ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ಯಶ್‌ರ ಹುಟ್ಟುಹಬ್ಬ ಜನವರಿ 8 ರಂದು ನಡೆಯಲಿದೆ.

  ಇನ್ನು ಹಾರ್ದಿಕ್ ಪಾಂಡ್ಯಾ ಭಾರತ-ಶ್ರೀಲಂಕಾ ಸರಣಿಯಲ್ಲಿ ಟಿ20 ಪಂದ್ಯಗಳಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್‌ನ ಕ್ಯಾಪ್ಟನ್ ಸಹ ಆಗಿದ್ದಾರೆ ಹಾರ್ದಿಕ್ ಪಾಂಡ್ಯಾ.

  English summary
  Actor Yash meets cricketer Hardik Pandya and Krunal Pandya. Hardik Pandya shared pic with Yash and said KGF 3.
  Thursday, December 29, 2022, 21:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X