ರಾಧಿಕಾ ಪಂಡಿತ್ ಕಾಸ್ಟ್ಯೂಮ್ ಬಲು ದುಬಾರಿ: ನೀವೂ ಕೂಡ ಖರೀದಿಸಬಹುದು!

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸ್ಟಾರ್‌ ಆಗಿ ಮಿಂಚಿದ ಹಲವು ನಟಿಯರಲ್ಲಿ ನಟಿ ರಾಧಿಕಾ ಪಂಡಿತ್‌ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ನಾಯಕಿ ಆಗಿ ಎಂಟ್ರಿ ಕೊಟ್ಟ ಕೆಲವೇ ಕಡಿಮೆ ಸಮಯದಲ್ಲಿಯೇ ರಾಧಿಕಾ ಪಂಡಿತ್ ಸ್ಟಾರ್ ನಟಿ ಎನಿಸಿಕೊಂಡರು. ಸದ್ಯ ಬಿಗ್ ಸ್ಕ್ರೀನ್‌ನಿಂದ ನಟಿ ರಾಧಿಕಾ ಪಂಡಿತ್‌ ದೂರ ಉಳಿದಿದ್ದಾರೆ. ಹಾಗಂತ ರಾಧಿಕಾಗೆ ಇರುವ ಬೇಡಿಕೆ ಏನು ಕಡಿಮೆ ಆಗಿಲ್ಲ.

ರಾಧಿಕಾ ಪಂಡಿತ್‌ ಮದುವೆ ಬಳಿಕ ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಮನೆ, ಮಕ್ಕಳು ಅಂತ ಸದಾ ಬ್ಯುಸಿಯಾಗಿ ಇರುತ್ತಾರೆ. ರಾಧಿಕಾ ಪಂಡಿತ್ ತಮ್ಮ ನಿತ್ಯ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಸಿನಿಮಾ ತೆರೆಯಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಮತ್ತೆ ಯಾವಾಗ ಚಿತ್ರರಂಗಕ್ಕೆ ಬರುತ್ತಾರೆ ಎಂದು ಅಭಿಮಾನಿ ಬಳಗ ಕಾಯುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಸದಾ ಕ್ರಿಯಾವಾಗಿರುತ್ತಾರೆ. ಇನ್ನು ರಾಧಿಕಾ ಪಂಡಿತ್ ದುಬಾರಿ ವಸ್ತ್ರಗಳನ್ನು ಧರಿಸಿ, ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳುತ್ತಾರೆ. ರಾಧಿಕಾ ಪಂಡಿತ್ ದುಬಾರಿ ಕಾಸ್ಟ್ಯೂಮ್‌ಗಳ ವಿವರ ಇಲ್ಲಿದೆ ಮುಂದೆ ಓದಿ...

ರಾಧಿಕಾ ನಿತ್ಯ ಬಳಸುವ ಉಡುಪು ಕೂಡ ದುಬಾರಿ!

ರಾಧಿಕಾ ನಿತ್ಯ ಬಳಸುವ ಉಡುಪು ಕೂಡ ದುಬಾರಿ!

ನಟಿ ರಾಧಿಕಾ ಪಂಡಿತ್ ಪಾರ್ಟಿ ಅಥವಾ ಕಾರ್ಯಕ್ರಮಗಳಲ್ಲಿ ಮಾತ್ರ ದುಬಾರಿ ಬಟ್ಟೆ ತೊಟ್ಟು ಮಿಂಚುವುದಿಲ್ಲ. ನಿತ್ಯ ಸಿಂಪಲ್ ಆಗಿ ತೊಡುವ ಡ್ರೆಸ್‌ಗಳು ಕೂಡ ದುಬಾರಿ ಬೆಲೆಯ ಬಟ್ಟೆಗಳೇ ಆಗಿವೆ. ಹಳದಿ ಬಣ್ಣದ ಈ ಫ್ಲೋಲರ್ ಮ್ಯಾಕ್ಸಿ ಡ್ರೆಸ್ ತೊಟ್ಟು ರಾಧಿಕಾ ಪಂಡಿತ್ ಫೋಟೊ ಕ್ಲಿಕ್ಕಿಸಿದ್ದಾರೆ. ಈ ಡ್ರೆಸ್ ಬೆಲೆ 6,800 ರೂ. ಈ ಡ್ರೆಸ್‌ ಅನ್ನು ಡಿಸೈನ್ ಮಾಡಿದ್ದು, ರಿತು ಕುಮಾರ್ ಲೇಬಲ್ ಡ್ರೆಸ್.

ರಾಧಿಕಾ ತೊಟ್ಟ ಈ ಡ್ರೆಸ್ ಡ್ರೆಸ್ ಬೆಲೆ ಎಷ್ಟು?

ರಾಧಿಕಾ ತೊಟ್ಟ ಈ ಡ್ರೆಸ್ ಡ್ರೆಸ್ ಬೆಲೆ ಎಷ್ಟು?

ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಕುಟುಂಬದ ಜೊತೆಗೆ ಆಗಾಗ ಹಾಲಿಡೇಸ್ ಎಂಜಾಯ್ ಮಾಡುತ್ತಿರುತ್ತಾರೆ. ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ರಾಧಿಕಾ ಪಂಡಿತ್ ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆದರೆ ರಾಧಿಕಾ ಧರಿಸಿರುವ ಈ 'ಎಕ್ರೂ ಫ್ಲೋರಲ್ ಪ್ರಿಂಟ್ ಹಾಲ್ಟರ್ ಲಾಂಗ್ ಡ್ರೆಸ್' ಬೆಲೆ 3,250 ರೂ. ಈ ಡ್ರೆಸ್ ಡಿಸೈನರ್ ರಿತು ಕುಮಾರ್ ಲೇಬಲ್ ಡ್ರೆಸ್.

9999 ಸಾವಿರದ ಟಾಪ್‌ನಲ್ಲಿ ರಾಧಿಕಾ ಪಂಡಿತ್!

9999 ಸಾವಿರದ ಟಾಪ್‌ನಲ್ಲಿ ರಾಧಿಕಾ ಪಂಡಿತ್!

ರಾಧಿಕ ಪಂಡಿತ್, ನಟಿ ಅಮೂಲ್ಯ ಸೀಮಂತ ಪಾರ್ಟಿಯಲ್ಲಿ ದುಬಾರಿ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದರು. ಈ ಮ್ಯಾಕ್ಸಿಯ ಬೆಲೆ ಬರೋಬ್ಬರಿ 9999ರೂ. ಸಿಂಪಲ್ ಆಗಿ ಕಾಣುವ ರಾಧಿಕಾ ಪಂಡಿತ್ ಧರಿಸಿದ ಈ ಬಟ್ಟೆ ಬೆಲೆ ದುಬಾರಿಯಾಗಲು ಕಾರಣವಿದೆ. ಇದು ಬಾಲಿವುಡ್​ನ ಫೇಮಸ್​ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಡಿಸೈನ್ ಮಾಡಿದ್ದಾರೆ.

31 ಸಾವಿರ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಮಿಂಚು!

31 ಸಾವಿರ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಮಿಂಚು!

'ಕೆಜಿಎಫ್ 2' ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಹೈಲೈಟ್ ಆಗಿದ್ದರು. ರಾಧಿಕಾಳ ನ್ಯೂ ಲುಕ್ ಎಲ್ಲರ ಗಮನ ಸೆಳೆದಿತ್ತು. ರಾಧಿಕಾ ತೊಟ್ಟಿದ್ದ ಕಾಸ್ಟ್ಯೂಮ್ ಕೂಡ ಗಮನ ಸೆಳೆದಿತ್ತು. ಈ ಡ್ರೆಸ್ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ. ಇದು ಡಿಸೈನರ್ ರಿತುಕುಮಾರ್ ಲೇಬಲ್‌ನ ಎಮ್ರಾಯ್‌ಡರಿ ಡೆಸ್. ಈ ಡ್ರೆಸ್‌ನಲ್ಲಿ ರಾಧಿಕಾ ಪಂಡಿತ್ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಧಿಕಾ ಧರಿಸಿದ ಕಾಸ್ಟ್ಯೂಮ್ ಎಲ್ಲಿ ಸಿಗುತ್ತೆ?

ರಾಧಿಕಾ ಧರಿಸಿದ ಕಾಸ್ಟ್ಯೂಮ್ ಎಲ್ಲಿ ಸಿಗುತ್ತೆ?

ಗ್ಲಾಮರಸ್ ಆಗಿ ಮಿಂಚುವ ನಟಿ ರಾಧಿಕಾ ಪಂಡಿತ್ ರೀತಿ ಡ್ರೆಸ್ ಮಾಸ್ ಮಾಡಿಕೊಳ್ಳಲು ನಿಮಗೂ ಆಸೆ ಇದ್ದರೆ. ನೀವೂ ಕೂಡ ಈ ರೀಯ ಕಾಸ್ಟೂಮ್‌ಗಳನ್ನು ಖರೀದಿ ಮಾಡಬಹುದು. ಆನ್‌ ಲೈನ್‌ ಮೂಲಕವೂ ಈ ಬಟ್ಟೆಗಳನ್ನು ಖರೀದಿ ಮಾಡಬಹುದು. ಆದರೆ, ಅದಕ್ಕೆ ಕೈಯಲ್ಲಿ ಸಾಕಷ್ಟು ಬಜೆಟ್ ಇರಬೇಕು ಅಷ್ಟೇ. ಇದೆಲ್ಲವನ್ನೂ ಹೊರತು ಪಡಿಸಿದರೆ ನಟಿ ರಾಧಿಕಾ ಪಂಡಿತ್ ಕಮ್‌ ಬ್ಯಾಕ್‌ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Actor Yash Wife Radhika Pandit Shine In Costly Dress By Ritu Kumar Label, Know The Cost
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X