»   » ಅಪಘಾತದಲ್ಲಿ ಕನ್ನಡ ಮೂಲದ ತೆಲುಗು ನಟ ಸಾವು

ಅಪಘಾತದಲ್ಲಿ ಕನ್ನಡ ಮೂಲದ ತೆಲುಗು ನಟ ಸಾವು

Posted By:
Subscribe to Filmibeat Kannada
Yasho Sagar
ತುಮಕೂರು, ಡಿ.19: ತೆಲುಗಿನ 'ಉಲ್ಲಾಸಂಗ ಉತ್ಸಾಹಂಗ' ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಬೆಂಗಳೂರು ಮೂಲದ ತೆಲುಗು ನಟ ಭರತ್ ಅಲಿಯಾಸ್ ಯಶೋ ಸಾಗರ್ ದುರಂತ ಸಾವನ್ನಪ್ಪಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಅವರ ಕಸಿನ್ (ತಾಯಿ ಕಡೆ ಸಂಬಂಧ) ಆಗಿರುವ ಯಶೋ ಸಾಗರ್ ಅವರ ಸಾವಿನಿಂದ ಕುಟುಂಬ ವರ್ಗ ತೀವ್ರವಾದ ದುಃಖದಲ್ಲಿ ಮುಳುಗಿದೆ.

ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಬುಧವಾರ (ಡಿ.19) ಬೆಳಗ್ಗೆ 8.30ಕ್ಕೆ ನಡೆದ ಭೀಕರ ಅಪಘಾತದಲ್ಲಿ ಯಶೋ ಸಾಗರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬಳಿ ಭರತ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಭರತ್ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಸುಮಾರು 100 ರಿಂದ 120 ಕಿ.ಮೀ/ಗಂ ವೇಗದಲ್ಲಿ ಚಲಿಸುತ್ತಿದ್ದ ಕಾರು ಸೇತುವೆಗೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ.

ಕಾರು ಚಾಲಕರಾಗಿದ್ದ ಭರತ್ ಹಾಗೂ ಅವರ ಪಕ್ಕದಲ್ಲಿ ಕೂತಿದ್ದ ಗೆಳೆಯ ವಿಶ್ವನಾಥ್ ರೆಡ್ಡಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಹಿಂಬದಿ ಸೀಟಿನಲ್ಲಿದ್ದ ಗೆಳೆಯನಿಗೆ ತೀವ್ರ ಗಾಯಗಳಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಬಾಂಬೆ ಕಡೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಭರತ್ ಅಭಿನಯದ ಪ್ರೇಮಿಕುಡು ಚಿತ್ರ ಇನ್ನೂ ಬಿಡುಗಡೆ ಯಾಗಬೇಕಿದೆ. ಉಲ್ಲಾಸಂಗ ಉತ್ಸಾಹಂಗ ಚಿತ್ರ ಕನ್ನಡದಲ್ಲಿ ಉಲ್ಲಾಸ ಉತ್ಸಾಹ ಹೆಸರಿನಲ್ಲಿ ರಿಮೇಕ್ ಆಗಿತ್ತು.

ತೆಲುಗಿಗೆ ಹಾರಿದ್ದ ಭರತ್: ನಾನು ಬೆಂಗಳೂರಿಗ ನಿಜ. ಸುಮಾರು 17 ವರ್ಷಗಳಿಂದ ಚಿತ್ರರಂಗವನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ತಂದೆ ಬಿ.ಸಿ.ಸೋಮು ಅವರು ಸುಮಾರು 20-25 ಚಿತ್ರಗಳನ್ನು ನಿರ್ಮಿಸಿದ್ದಾರೆ. ನನ್ನಮ್ಮನ ಇಚ್ಛೆ ನಾನು ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಬೇಕು ಎಂಬುದಾಗಿತ್ತು. ಅದರಂತೆ ಆಯಿತು.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ನಮ್ಮಪ್ಪ ಬಿಪಿ ಸೋಮು ಒಳ್ಳೆ ಹೆಸರು ಮಾಡಿದ್ದರೂ, ನನಗೆ ಚಿಕ್ಕಂದಿನಿಂದಲೂ ತೆಲುಗು ಚಿತ್ರರಂಗದ ಮೇಲೆ ಏನೋ ಒಲವು. ಮುಂಗಾರು ಮಳೆ ಬಿಟ್ಟರೆ ನಾನು ಯಾವುದೇ ಕನ್ನಡ ಚಿತ್ರಗಳನ್ನು ಈ ಹದಿನೇಳು ವರ್ಷಗಳಲ್ಲಿ ನೋಡಿಲ್ಲ. ನನಗೆ ಕ್ರೇಜ್ ಹುಟ್ಟಿ ಹಾಕಿದ್ದು ತೆಲುಗು ಸಿನಿಮಾಗಳು. ಅದು ಬಿಟ್ಟರೆ alternatives ಆಗಿ ಹಿಂದಿ, ಇಂಗ್ಲೀಷ್ ಸಿನಿಮಾಗಳು ಇದ್ದೇ ಇರುತ್ತಿದ್ದವು...ಎಂದಿದ್ದರು.

ತೆಲುಗಿನಲ್ಲಿ ಗೋದಾವರಿ, ಹ್ಯಾಪಿ ಡೇಸ್ ನಂತಹ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಶೇಖರ್ ಕಮೂಲ ಅವರ ಮುಂದಿನ ಚಿತ್ರಕ್ಕೆ ಸಾಗರ್ ಆಯ್ಕೆಯಾಗಿದ್ದರು.

English summary
Bangalore based Telugu Actor Yasho sagar of Ullasamga Utsahamga movie fame dies in road accident near Sira, Bangalore Tumkur Highway road today(Dec.19). Kannada producer BC Somu is Bharat's father.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada