For Quick Alerts
  ALLOW NOTIFICATIONS  
  For Daily Alerts

  ನಟ ಯೋಗೀಶ್ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು

  By Rajendra
  |

  ಲೂಸ್ ಮಾದ ಯೋಗೀಶ್ ಅವರು 'ಡಾರ್ಲಿಂಗ್' ಚಿತ್ರೀಕರಣ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ (ನ.13) ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿ ನಡೆಯುತ್ತಿದ್ದ ಸಾಹಸ ಚಿತ್ರೀಕರಣ ವೇಳೆ ಯೋಗಿ ಗಾಯಗೊಂಡಿದ್ದಾರೆ.

  ಕೂಡಲೆ ಅವರನ್ನು ಚಿಕಿತ್ಸೆಗಾಗಿ ಜಯನಗರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಗೀಶ್ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

  ಸಂತು ನಿರ್ದೇಶನದ 'ಡಾರ್ಲಿಂಗ್' ಚಿತ್ರದ ಬೈಕ್ ಸ್ಟಂಟ್ ಸನ್ನಿವೇಶವನ್ನು ಕೆ.ಆರ್.ಮಾರುಕಟ್ಟೆ ಬಳಿ ಚಿತ್ರೀಕರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಯೋಗಿ ಆಯತಪ್ಪಿ ಬಿದ್ದಿದ್ದಾರೆ. ಇದೊಂದು ಚೇಸಿಂಗ್ ಸನ್ನಿವೇಶ ಎನ್ನಲಾಗಿದ್ದು ಡ್ಯೂಪ್ ಇಲ್ಲದೆ ಸ್ವತಃ ಯೋಗಿ ಸಾಹಸ ಮಾಡುತ್ತಿದ್ದರು.

  ಬೆಂಗಳೂರಿನಲ್ಲಿ ನಡೆಯುವ ಪ್ರೇಮಕಥೆ 'ಡಾರ್ಲಿಂಗ್‌' ಚಿತ್ರದ ವಸ್ತು. ಚಿತ್ರದಲ್ಲಿ ಲವ್, ಆಕ್ಷನ್ ಹಾಗೂ ಕಾಮಿಡಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಚಿತ್ರದಲ್ಲಿ ಯೋಗಿ ಅವರದು ಟ್ಯಾಟು ಸ್ಪೆಷಲಿಸ್ಟ್ ಪಾತ್ರ. ಅವನ ನಿಜವಾದ 'ಡಾರ್ಲಿಂಗ್' ಯಾರು ಎಂಬ ಪ್ರಶ್ನೆಗೆ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗುತ್ತದಂತೆ.

  ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂನ ಮುಕ್ತಾ (ಭಾನು) ಅಭಿನಯಿಸುತ್ತಿದ್ದಾರೆ. ಸಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿಪಿ ಸಿದ್ಧರಾಜು ನಿರ್ಮಿಸುತ್ತಿರುವ ಚಿತ್ರವಿದು. ಅರ್ಜುನ್ ಜನ್ಯ ಸಂಗೀತ, ಮಂಜುನಾಥ್ ನಾಯಕ ಹಾಗೂ ಟಿಪಿ ಸಿದ್ಧರಾಜು ಛಾಯಾಗ್ರಹಣ ಇದೆ. (ಒನ್ಇಂಡಿಯಾ ಕನ್ನಡ)

  English summary
  Loose Mada Yogesh injured his both legs during the shooting of an action sequence for his upcoming film, 'Darling', in KR Market, Bangalore. Yogesh was rushed to Sanjay Gandhi hospital. The actor is out of danger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X