For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಿಂದ ಮೈಸೂರಿನವರೆಗೆ ಯಾತ್ರೆ ಹೊರಟ 'ಬನಾರಸ್' ಹೀರೊ ಝೈದ್ ಖಾನ್!

  By ಫಿಲ್ಮಿಬೀಟ್ ಡೆಸ್ಕ್
  |

  ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಮೊದಲ ಸಿನಿಮಾ 'ಬನಾರಸ್' ಬಿಡುಗಡೆ ಸಜ್ಜಾಗಿ ನಿಂತಿದೆ. ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬೆನ್ನಲ್ಲೇ ಕೊನೆಯ ಹಂತದ ಪ್ರಚಾರದಲ್ಲಿ ಝೈದ್ ಖಾನ್ ನಿರತರಾಗಿದ್ದಾರೆ.

  'ಬನಾರಸ್' ಒಂದು ಪ್ಯಾನ್ ಇಂಡಿಯಾ ಸಿನಿಮಾ. ಮೊದಲ ಸಿನಿಮಾದಿಂದಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿರೋ ಝೈದ್ ಖಾನ್ ಕರ್ನಾಟಕದಲ್ಲಿ ಕೊನೆಯ ಹಂತದಲ್ಲಿ ವಿಶಿಷ್ಟವಾಗಿ ಪ್ರಚಾರ ಮಾಡುವುದಕ್ಕೆ ಸಜ್ಜಾಗಿದ್ದರು. ಬೆಂಗಳೂರಿನಿಂದ ಮೈಸೂರಿನವರೆಗೆ ಯಾತ್ರೆಗೆ ಮುಂದಾಗಿದ್ದರು. ಅದರ ಡಿಟೈಲ್ಸ್ ಇಲ್ಲಿದೆ.

  'ಬನಾರಸ್' ಯಾತ್ರೆ ಶುರುವಾಗಿದ್ದು ಎಲ್ಲಿಂದ?

  'ಬನಾರಸ್' ಯಾತ್ರೆ ಶುರುವಾಗಿದ್ದು ಎಲ್ಲಿಂದ?

  'ಬನಾರಸ್' ಸಿನಿಮಾ ನವೆಂಬರ್ 4ರಂದು ದೇಶಾದ್ಯಂತ ತೆರೆಗಾಣಲಿದೆ. ಐದೂ ಭಾಷೆಗಳಲ್ಲೂ ನೀಟ್ ಆಗಿ ಚಿತ್ರತಂಡ ಪ್ರಚಾರ ಮಾಡಿಕೊಂಡು ಬಂದಿದೆ. ಪ್ರಚಾರ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿಯೇ ಅದ್ಧೂರಿಯಾಗಿ ಮಾಡಲಾಗಿದೆ. ಇದೀಗ ಕಡೆಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ 'ಬನಾರಸ್ ಯಾತ್ರೆ'ಯನ್ನು ಶುರು ಮಾಡಿದ್ದರು. ಇಂದು (ಅಕ್ಟೋಬರ್ 30) ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಟೌನ್ ಹಾಲ್‌ನಿಂದ ಈ ಯಾತ್ರೆ ಆರಂಭವಾಗಿತ್ತು.

  ರಾಮನಗರ ಕಡೆ ಪಯಣ

  ರಾಮನಗರ ಕಡೆ ಪಯಣ

  ಟೌನ್‌ಹಾಲ್‌ನಿಂದ ಹೊರಟ 'ಬನಾರಸ್ ಯಾತ್ರೆ' ಮೈಸೂರು ರಸ್ತೆಯ ಮುಖಾಂತರ ಮುಂದಕ್ಕೆ ಸಾಗಿತ್ತು. ಗಾಳಿ ಆಂಜನೇಯ ದೇವಸ್ಥಾನಕ್ಕೆ ಝೈದ್ ತೆರಳಿ ನಮಸ್ಕರಿಸಿದ ಬಳಿಕ ರಾಜರಾಜೇಶ್ವರಿನಗರ, ಕೆಂಗೇರಿ ಹಿಡಿದು ಯಾತ್ರೆ ಮುಂದುವರೆದಿತ್ತು. ಅಂಚೆಪುರ, ಕಂಬಿಪಾಳ್ಯ ದಾರಿಯಲ್ಲಿ ಸಾಗಿದ 'ಬನಾರಸ್ ಯಾತ್ರೆ' ಬಿಡದಿಯಲ್ಲಿ ತಟ್ಟೆ ಇಡ್ಲಿ ಹೊಟೇಲಿನ ಬಳಿ ಸೇರಿಕೊಂಡಿತ್ತು. ಝೈದ್ ಖಾನ್ ತಮ್ಮ ಬೆಂಬಲಿಗರೊಂದಿಗೆ ತಿಂಡಿ ಮುಗಿಸಿ ರಾಮನಗರ ಜಿಲ್ಲೆಯತ್ತ ಪಯಣ ಬೆಳೆಸಿದ್ದರು. ರಾಮನಗರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬನಾರಸ್ ರೋಡ್ ಶೋ ನಡೀತು.

  ಚನ್ನಪಟ್ಟಣ ಕಡೆ ಯಾತ್ರೆ

  ಚನ್ನಪಟ್ಟಣ ಕಡೆ ಯಾತ್ರೆ

  ರಾಮನಗರದ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಝೈದ್ ದರ್ಶನ ಪಡೆದರು. ಆ ಬಳಿಕ 'ಬನಾರಸ್ ಯಾತ್ರೆ' ಚನ್ನಪಟ್ಟಣದ ಕಡೆಗೆ ಮುಂದುವರೆಯಿತು. ಅಲ್ಲಿ ಅದ್ಧೂರಿಯಾಗಿ ರೋಡ್ ಶೋ ನಡೀತು. ಝೈದ್ ಚನ್ನಪಟ್ಟಣದ ದೇವಸ್ಥಾನ ಹಾಗೂ ದರ್ಗಾಗಳಿಗೆ ಭೇಟಿ ನೀಡಿದರು. ಹೊಸಾ ಕಚೇರಿಯೊಂದರ ಆರಂಭ ಸಮಾರಂಭದಲ್ಲಿ ಭಾಗಿ ಚನ್ನಪಟ್ಟಣದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿಕೊಂಡು ಮತ್ತೆ ಬನಾರಸ್ ಯಾತ್ರೆ ಮೈಸೂರು ಕಡೆಗೆ ಮುಂದುವರೆದಿತ್ತು.

  ಮದ್ಧೂರು to ಮೈಸೂರು

  ಮದ್ಧೂರು to ಮೈಸೂರು

  ಮದ್ದೂರಿನಿಂದ ಮಂಡ್ಯಕ್ಕೆ ತೆರಳಿ ಅಲ್ಲಿ 'ಬನಾರಸ್' ರೋಡ್ ಶೋ ಮಾಡಲಾಯಿತು. ಅಲ್ಲೂ ದೇವಸ್ಥಾನ ಹಾಗೂ ದರ್ಗಾಗಳಿಗೂ ಭೇಟಿ ನೀಡಿದ್ರು. ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ತೆರಳಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದರ್ಶನ ಪಡೆದುಕೊಳ್ಳಲಾಯಿತು. ಆ ಬಿಳಿಕ ಮೈಸೂರು ನಗರದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆಸಲಾಗಿದೆ. ಹಾಗೇ ರಾತ್ರಿ ಬೆಂಗಳೂರು-ಮೈಸೂರು ಯಾತ್ರೆ ಮುಗಿಸಿ ಝೈದ್ ಅಭಿಮಾನಿಗಳೊಂದಿಗೆ ಬೆಂಗಳೂರಿಗೆ ಹಿಂತಿರುಗಿದ್ದಾರೆ.

  English summary
  Actor Zaid Khan Organizes Banaras Yathra From Bengaluru to Mysuru For Promotion, Know More.
  Sunday, October 30, 2022, 22:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X