Don't Miss!
- News
Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ'ಯಲ್ಲಿ ಅಭಿನಯ, ಅಭಿರಾಮಿ ಮಾತು: ದರ್ಶನ್ ಭೇಟಿಯ ಕಾರಣ ಇಲ್ಲಿದೆ
ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದೆ. ಕ್ರಾಂತಿ ಚಿತ್ರಕ್ಕಾಗಿ ಎದುರು ನೋಡುತ್ತಾ ಇದ್ದಾರೆ. ಈ ಕ್ರಾಂತಿ ಚಿತ್ರದ ಹೊಸ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. ದರ್ಶನ್ ಜೊತೆಗೆ ನಟಿ ಅಭಿರಾಮಿ ಅಭಿನಯಿಸುತ್ತಾರೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.
ನಟ ಅಭಿರಾಮಿ ಕ್ರಾಂತಿ ಚಿತ್ರದ ಬಳಗ ಸೇರಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಭಿರಾಮಿ ನಟಿಸುತ್ತಿದ್ದಾರೆ. ಅಭಿರಾಮಿ ಕ್ರಾಂತಿ ಸೆಟ್ ನಲ್ಲಿ ನಟ ದರ್ಶನ್ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಾ ಇದೆ. ಇದ ಜೊತೆಗೆ ಅವರ ಪೋಟೋ ಕೂಡ ವೈರಲ್ ಆಗಿದೆ.
ಪ್ಯಾನ್
ಇಂಡಿಯಾ
ಸ್ಟಾರ್
ಆಗ್ತಾರಾ
ದರ್ಶನ್:
ದರ್ಶನ್
'ಹಿಂದಿ'
ಸಿನಿಮಾಗಳ
ಯಶಸ್ಸೆಷ್ಟು?
ಕ್ರಾಂತಿ ಚಿತ್ರದಲ್ಲಿ ಈಗಾಗಲೇ ದೊಡ್ಡ, ದೊಡ್ಡ ಕಲಾವಿದರು ತಾರಗಣದಲ್ಲಿ ಇದ್ದಾರೆ. ಸಿನಿಮಾದ ಶೂಟೀಂಗ್ ಕೂಡ ಬಹುತೇಕ ಮುಗಿದು ಬಿಟ್ಟಿದೆ. ಈಗ ಕ್ರಾಂತಿ ತಾರಾ ಬಳಗಕ್ಕೆ ಅಭಿರಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಾ ಇದೆ. ಈ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ನಟಿ ಅಭಿರಾಮಿ ಮಾತನಾಡಿದ್ದಾರೆ. ಕ್ರಾಂತಿ ಬಗ್ಗೆ ಅಭಿರಾಮಿ ಏನಂತಾರೆ ಎನ್ನುವುದನ್ನು ಮುಂದೆ ಓದಿ...

ಕ್ರಾಂತಿ ಚಿತ್ರದಲ್ಲಿ ಅಭಿರಾಮಿ ಅಭಿನಯ?
ಸದ್ಯ ಕ್ರಾಂತಿ ಚಿತ್ರದ ವಿಚಾರದಲ್ಲಿ ಹರಿದಾಡುತ್ತಿರುವ ಸುದ್ದಿ ಎಂದರೆ, ನಟಿ ಅಭಿರಾಮಿ 'ಕ್ರಾಂತಿ' ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು. ಈ ಹಿಂದೆ ನಟ ದರ್ಶನ್ ಜೊತೆಗೆ ಲಾಲಿ ಹಾಡು ಚಿತ್ರದಲ್ಲಿ ಅಭಿರಾಮಿ ಕಾಣಿಸಿಕೊಂಡಿದ್ದರು. ಈಗ ಎರಡು ದಶಕಗಳ ಬಳಿಕ ಅಭಿರಾಮಿ ದರ್ಶನ್ ಜೊತೆಗೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುಚ ಚರ್ಚೆ ಹುಟ್ಟಿದೆ. ಈ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಅಭಿರಾಮಿ ಮಾತನಾಡಿದ್ದಾರೆ.

ದರ್ಶನ್ ಬಗ್ಗೆ ಮಾತನಾಡಿದ ಅಭಿರಾಮಿ!
ಕ್ರಾಂತಿ ಚಿತ್ರದ ಬಗ್ಗೆ ಮಾತನಾಡಿದ ಅಭಿರಾಮಿ "ಕ್ರಾಂತಿ ಚಿತ್ರದಲ್ಲಿ ಅಭಿಸುವ ಬಗ್ಗೆ ಖಚಿತತೆ ಇಲ್ಲ. ಆದರೆ ನಾನು ಕ್ರಾಂತಿ ಸೆಟ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಹಲವರನ್ನು ಭೇಟಿ ಮಾಡಿದ್ದೇನೆ. ಜೊತೆಗೆ ದರ್ಶನ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಸಮಯ ಕಳೆದೆ. ಹಾಗಂತ ಇದು ಕ್ರಾಂತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಅರ್ಥ ಅಲ್ಲ. ಕ್ರಾಂತಿ ಚಿತ್ರದ ಬಗ್ಗೆ ಈಗಲೇ ಏನನ್ನೂ ಹೇಳಲು ಆಗುದಿಲ್ಲ" ಎಂದರು.
ಕನ್ನಡ
ನಟರ
ಟ್ರೋಲ್:
ಯಶ್
ಅಭಿಮಾನಿಗಳು
ಮಾಡ್ತಿರೋದು
ಸರಿಯೇ?

'ಲಾಲಿ ಹಾಡು' ದಿನಗಳನ್ನು ನೆನೆದ ಅಭಿರಾಮಿ!
ಇನ್ನು ದರ್ಶನ್ ಜೊತೆಗೆ ಮಾತನಾಡಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ. "ದರ್ಶನ್ ಭೇಟಿ ಮಾಡಿದ್ದು ಖುಷಿ ಆಯ್ತು. ಅವರೊಂದಿಗೆ ಹೆಚ್ಚು ಸಮಯ ಕಳೆದೆ. 'ಲಾಲಿ ಹಾಡು' ದಿನಗಳನ್ನು ನೆನಪಿಸಿಕೊಂಡೆವು. ಸಾಕಷ್ಟು ಹೊತ್ತು ಹಳೆ ವಿಚಾರಗಳ ಬಗ್ಗೆ ಮಾತನಾಡಿದೆವು. ಆ ಚಿತ್ರ ಬಂದು ಬಹುಶಃ ಎರಡು ದಶಕಗಳೆ ಆಗಿ ಬಿಟ್ಟಿವೆ. ಈಗ ದರ್ಶನ್ ಜೊತೆ ಕಾಲ ಕಳೆಯಲು ಸಮಯ ಸಿಕ್ಕಿತು."
ಅಭಿರಾಮಿ, ದರ್ಶನ್ ಪೋಸ್ಟ್ ವೈರಲ್!
ದೊಡ್ಡ ಬ್ರೇಕ್ ಬಳಿಕ ಅಭಿರಾಮಿ ಚಿತ್ರರಂಗಕ್ಕೆ ಮರಳಿದ್ದಾರೆ. ಮರಳಿ ಬಂದ ಅಭಿರಾಮಿಗೆ ಬೇಡಿಕೆ ಇದ್ದೇ ಇದೆ. ಈ ಹಿಂದೆ ಕೋಟಿಗೊಬ್ಬ 3 ಚಿತ್ರದಲ್ಲಿ ಅಮ್ಮನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಸದ್ಯ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರಂತೆ. ಇನ್ನು ಕನ್ನಡದಲ್ಲಿ ಕ್ರಾಂತಿ ಬಗ್ಗೆ ಖಾತರಿ ನೀಡಿಲ್ಲ. ಆದರೆ ಇವರು ಕ್ರಾಂತಿ ಬಳಗ ಸೇರಿದ್ದಾರೆ ಎನ್ನುವ ಸುದ್ದಿ ಹಬ್ಬಲು ಅಭಿರಾಮಿ ದರ್ಶನ್ ಜೊತೆಗೆ ಹಂಚಿಕೊಂಡ ಪೋಸ್ಟ್ ಕಾರಣ.
ದರ್ಶನ್
ಜೊತೆಗೆ
ಇಟ್ಟ
ಮೊದಲ
ಹೆಜ್ಜೆ
ನೆನೆದ
'ಬುಲ್
ಬುಲ್'
ರಚಿತಾ
ರಾಮ್!