For Quick Alerts
  ALLOW NOTIFICATIONS  
  For Daily Alerts

  "60 ವರ್ಷ ಆದರೂ ಮದುವೆ ಆಗಿಲ್ಲ ಅಂದ್ರೆ, ಹೀರೊಯಿನ್ ರೋಲ್‌ ಕೊಡ್ತೀರಾ?" ಅದಿತಿ ಪ್ರಭುದೇವ !

  |

  2022ರಲ್ಲಿ ಸ್ಯಾಂಡಲ್‌ವುಡ್‌ ಯಶಸ್ಸಿನ ಉತ್ತುಂಗದಲ್ಲಿದೆ. ಒಂದರ ಹಿಂದೊಂದು ಅದ್ಭುತ ಸಿನಿಮಾಗಳನ್ನು ಕೊಟ್ಟಿರೋ ಚಿತ್ರರಂಗ ಖುಷಿಯಲ್ಲಿ ತೇಲಾಡುತ್ತಿದೆ. ಅದೇ ಇನ್ನೊಂದು ಕಡೆ ಒಬ್ಬೊಬ್ಬರೇ ನಾಯಕಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮತ್ತೆ ಕೆಲವರು ಕೌಟುಂಬಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

  ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಫಿ ಬೆಳೆಗಾರ ಹಾಗೂ ಉದ್ಯಮಿ ಶ್ರೇಯಸ್ ಎಂಬುವವರ ಕೈ ಹಿಡಿದಿದ್ದಾರೆ. ಹೀಗಾಗಿ ಮದುವೆ ಬಳಿಕ ಸಿನಿಮಾಗಳನ್ನು ಮಾಡುತ್ತಾರಾ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು.

  'ಪರ್ಫೆಕ್ಟ್ ಗರ್ಲ್' ಅದಿತಿ ಪ್ರಭುದೇವ ಮದುವೆಯ ಅಲ್ಬಮ್: ಹಸೆಮಣೆಯಲ್ಲೇ ಮುತ್ತಿಟ್ಟ ಪತಿ!'ಪರ್ಫೆಕ್ಟ್ ಗರ್ಲ್' ಅದಿತಿ ಪ್ರಭುದೇವ ಮದುವೆಯ ಅಲ್ಬಮ್: ಹಸೆಮಣೆಯಲ್ಲೇ ಮುತ್ತಿಟ್ಟ ಪತಿ!

  ಅದಿತಿ ಪ್ರಭುದೇವ ವಿವಾಹದ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ 'ಜಮಾಲಿಗುಡ್ಡ' ಬಿಡುಗಡೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರದ ವೇಳೆ ಮದುವೆ ಬಳಿಕ ಸಿನಿಮಾ ಮಾಡುತ್ತಾರೋ ಇಲ್ಲವೋ ಅನ್ನೋದನ್ನು ಫಿಲ್ಮಿಬೀಟ್ ಜೊತೆ ರಿವೀಲ್ ಮಾಡಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ.

  'ಮದುವೆಗೂ ಸಿನಿಮಾಗೂ ಏನು ಸಂಬಂಧ?

  'ಮದುವೆಗೂ ಸಿನಿಮಾಗೂ ಏನು ಸಂಬಂಧ?

  ಮದುವೆ ಬಳಿಕ ನಾಯಕಿಯರು ಸಿನಿಮಾದಿಂದ ದೂರ ಉಳಿಯುತ್ತಾರೆ ಅನ್ನೋ ಮಾತಿದೆ. ಈ ಹಿಂದೆ ಮದುವೆ ಆದವರೂ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ತೀರಾ ವಿರಳ. ಈಗ ಅದೇ ಪ್ರಶ್ನೆ ಅದಿತಿ ಪ್ರಭುದೇವಗೂ ಎದುರಾಗಿದೆ. ಅದಕ್ಕೆ ಅದಿತಿ ಉತ್ತರವಿದು. "ಮದುವೆ ಬಳಿಕ ಸಿನಿಮಾ ಮಾಡಲ್ಲ ಅನ್ನೋದು ಈಗಿಲ್ಲ, ಹೋಗಿದೆ ಅಂತ ಅನಿಸುತ್ತೆ. ಈಗ ವೈಯಕ್ತಿಕ ಜೀವನಕ್ಕೂ ವೃತ್ತಿ ಬದುಕಿಗೂ ಸಂಬಂಧವಿಲ್ಲ. ಈಗ ಜನರು ತುಂಬಾನೇ ಪ್ರಬುದ್ಧರಾಗಿದ್ದಾರೆ. ಆಮೇಲೆ ನಮ್ಮ ಮದುವೆಗೂ ನಾವು ಸಿನಿಮಾ ಮಾಡುವುದಕ್ಕೂ ಏನು ಸಂಬಂಧ ಅಲ್ವಾ? 60 ವರ್ಷ ಆದರೂ ಮದುವೆ ಆಗಿಲ್ಲ ಅಂದ್ರೆ, ಇನ್ನೂ ಹೀರೊಯಿನ್ ರೋಲ್‌ ಅನ್ನೇ ಕೊಡುತ್ತಾರಾ?" ಎಂದು ಅದಿತಿ ಪ್ರಭುದೇವ ಪ್ರಶ್ನೆ ಮಾಡಿದ್ದಾರೆ.

  'ಒಳ್ಳೊಳ್ಳೆ ಪಾತ್ರ ಮಾಡ್ಬೇಕು ಅನ್ನೋ ಗುಂಗಿನಲ್ಲಿದ್ದೀನಿ'

  'ಒಳ್ಳೊಳ್ಳೆ ಪಾತ್ರ ಮಾಡ್ಬೇಕು ಅನ್ನೋ ಗುಂಗಿನಲ್ಲಿದ್ದೀನಿ'

  "ನಾನು ಹೀರೊಯಿನ್ ಆಗಬೇಕು ಅನ್ನೋ ಗುಂಗಿನಲ್ಲಿ ಇಲ್ಲ. ಒಳ್ಳೊಳ್ಳೆ ಪಾತ್ರಗಳನ್ನು ಮಾಡಬೇಕು ಅನ್ನೋ ಗುಂಗಿನಲ್ಲಿ ಇದ್ದೀನಿ. ಇಲ್ಲಿವರೆಗೂ ನನ್ನ ಕೈಯಲ್ಲಿ ಎಷ್ಟು ಒಳ್ಳೊಳ್ಳೆ ಪಾತ್ರಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತೋ ಅಷ್ಟು ಪಾತ್ರಗಳನ್ನು ಮಾಡಿದ್ದೇನೆ. ಅಷ್ಟೇ ನನ್ನ ತಲೆಯಲ್ಲಿ ಇರೋದು. ಕೊಟ್ಟರೆ ತುಂಬಾ ಪ್ರೀತಿಯಿಂದ ಮಾಡುತ್ತೇನೆ. ಇಲ್ಲಾ ಅಂದ್ರೆ, ನಾನೇ ಸಿನಿಮಾ ಮಾಡಿಕೊಳ್ತೀನಿ."

  ಬದುಕು ಅನ್ನೋದು ಸಂಭ್ರಮ'

  ಬದುಕು ಅನ್ನೋದು ಸಂಭ್ರಮ'

  "ಬದುಕು ಅನ್ನೋದು ಸಂಭ್ರಮ.. ಬದುಕು ಅನ್ನೋದು ನೆನಪುಗಳ ಸಾಗರ.. ಬದುಕು ಅನ್ನೋದು ಹೋರಾಟ.. ಈ ಮೂರೂ ನಿಜ. ಬದುಕು ಅನ್ನೋದು ಸಂಭ್ರಮನೂ ಹೌದು. ನೆನಪುಗಳಲ್ಲೇ ಜೀವನ ಮಾಡುತ್ತಿದ್ದೇವೆ. ಇನ್ನು ಬದುಕು ಅನ್ನೋದು ಹೋರಾಟ ಕೂಡ ಹೌದು. ನೀವು ನಾವು ಎಲ್ಲರೂ ಪ್ರತಿದಿನ ಅದನ್ನೇ ಮಾಡುತ್ತಿದ್ದೇವೆ." ಎಂದು ಅದಿತಿ ಪ್ರಭುದೇವ ಜಮಾಲಿಗುಡ್ಡದ ಪಾತ್ರದ ಬಗ್ಗೆ ಹೇಳಿದ್ದಾರೆ.

  'ಜಮಾಲಿಗುಡ್ಡ' ಪ್ರಮೋಷನ್‌ನಲ್ಲಿ ಬ್ಯುಸಿ

  'ಜಮಾಲಿಗುಡ್ಡ' ಪ್ರಮೋಷನ್‌ನಲ್ಲಿ ಬ್ಯುಸಿ

  ಅದಿತಿ ಪ್ರಭುದೇವ ಮದುವೆ ಬಳಿಕ ರಿಲೀಸ್ ಆಗುತ್ತಿರೋ ಮೊದಲ ಸಿನಿಮಾ 'ಜಮಾಲಿಗುಡ್ಡ'. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. "ಜಮಾಲಿಗುಡ್ಡ ಪ್ರಮೋಷನ್ ತುಂಬಾನೇ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಜನರಿಗೆ ತಲುಪಿಸೋ ಪ್ರಯತ್ನ ನಾವು ಮಾಡಲೇಬೇಕು. ವರ್ಷದ ಅಂತ್ಯಕ್ಕೆ ಸಿನಿಮಾ ಬರುತ್ತಿದೆ. ಹಾಗಾಗಿ ಸ್ವಲ್ಪ ಜಾಸ್ತಿನೇ ನಿರೀಕ್ಷೆನೇ ಇದೆ. ಯಾಕಂದ್ರೆ ಮುಂದಿನ ವರ್ಷದ ಎಂಟ್ರಿ ಕೂಡ ಇದೇ ಸಿನಿಮಾದಿಂದ ಆಗುತ್ತೆ. ಖುಷಿ ಇದೆ. ಭಯ ಇದೆ." ಎನ್ನುತ್ತಾರೆ ಅದಿತಿ ಪ್ರಭುದೇವ.

  English summary
  Actress Aditi Prabhudeva Will Continue Acting After Marriage?, Know More.
  Wednesday, December 21, 2022, 17:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X