»   » ನಟಿ ಐಂದ್ರಿತಾ ರೇ ಕಾರು ಅಪಘಾತದ ಚಿತ್ರಗಳು

ನಟಿ ಐಂದ್ರಿತಾ ರೇ ಕಾರು ಅಪಘಾತದ ಚಿತ್ರಗಳು

Posted By:
Subscribe to Filmibeat Kannada

ನಟಿ ಐಂದ್ರಿತಾ ರೇ ಪ್ರಯಾಣಿಸುತ್ತಿದ್ದ ಕಾರು ಗುಜರಾತ್ ನಲ್ಲಿ ಅಪಘಾತಕ್ಕೆ ಈಡಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಗೊತ್ತೇ ಇದೆ. ಅವರ ಕಾರಿನ ಅಪಘಾತದ ಚಿತ್ರಗಳು ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದ್ದು, ಅಪಘಾತದ ತೀವ್ರತೆಯನ್ನು ಚಿತ್ರಗಳಲ್ಲಿ ಕಾಣಬಹುದು.

ಈಗಷ್ಟೇ ಅವರು ಶಾಕ್ ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಸ್ನೇಹಿತೆಯೊಬ್ಬರ ಮದುವೆಗೆಂದು ಅವರು ಗುಜರಾತ್ ನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಶನಿವಾರ (ನವೆಂಬರ್ 8) ನಡೆದಿತ್ತು. ರಸ್ತೆ ತಿರುವೊಂದರಲ್ಲಿ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. [ಹೊಸ ದಾಖಲೆ ನಿರ್ಮಿಸಿದ ಶಿವಣ್ಣ ಚಿತ್ರ 'ಭಜರಂಗಿ']

ಅಪಘಾತದಲ್ಲಿ ಐಂದ್ರಿತಾ ಅವರ ಎಡ ಭುಜಕ್ಕೆ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ಅವರು ಮುಂಬೈ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಸಣ್ಣಪುಟ್ಟ ಗಾಯಗಳಿಂದ ಐಂದ್ರಿತಾ ರೇ ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಫೋಟೋ ನೋಡಿದರೆ ಎದೆ ಧಸಕ್ಕೆನ್ನುತ್ತದೆ

ಕಾರು ಈ ರೀತಿ ಉಲ್ಟಾಪಲ್ಟಾ ಆಗಿರುವುದನ್ನು ನೋಡಿದರೆ ಎಂಥವರಿಗೂ ಎದೆ ಧಸಕ್ಕೆನ್ನುತ್ತದೆ. ಐಂದ್ರಿತಾ ರೇ ಅವರು ನಿಜಕ್ಕೂ ಗಂಡಾಂತರದಿಂದ ಪಾರಾಗಿದ್ದಾರೆ.

ಒಂದು ವೇಳೆ ಇಲ್ಲಿ ನೀರಿದ್ದಿದ್ದರೆ ಏನು ಗತಿ?

ಕಾರು ಬಿದ್ದಿರುವ ರಭಸಕ್ಕೆ ಅದರ ಗಾಜು, ಚಕ್ರದ ಬಿಡಿಗಭಾಗಗಗಳು ಚೂರುಚೂರಾಗಿರುವುದನ್ನು ಕಾಣಬಹುದು. ಒಂದು ವೇಳೆ ಈ ಸೇತುವೆಯಲ್ಲಿ ನೀರು ಹರಿಯುತ್ತಿದ್ದಿದ್ದರೆ ಅಪಘಾತದ ತೀವ್ರತೆಯನ್ನು ಊಹಿಸಿವುದೂ ಕಷ್ಟ.

ಐಂದ್ರಿತಾ ರೇ ಅಕ್ಷರಶಃ ಪುನರ್ಜನ್ಮ ಪಡೆದಿದ್ದಾರೆ

ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ಸುಧಾರಿಸಿಕೊಳ್ಳುತ್ತಿರುವ ಐಂದ್ರಿತಾ ರೇ. ಅಪಘಾಟದ ತೀವ್ರತೆಯನ್ನು ನೋಡಿದರೆ ಅವರಿಗೆ ನಿಜಕ್ಕೂ ಪುನರ್ಜನ್ಮ ಸಿಕ್ಕಂತಾಗಿದೆ.

ಸದ್ಯಕ್ಕೆ ಮುಂಬೈನಲ್ಲಿ ಐಂದ್ರಿತಾ ವಿಶ್ರಾಂತಿ

ಐಂದ್ರಿತಾ ರೇ ಅವರ ಕಾರನ್ನು ಅವರ ಚಾಲಕ ಚಲಾಯಿಸುತ್ತಿದ್ದ. ಸದ್ಯಕ್ಕೆ ಅವರು ಮುಂಬೈನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾರಿನಲ್ಲಿ ಡ್ರೈವರ್ ಸೇರಿ ಒಟ್ಟು ಮೂರು ಮಂದಿ ಇದ್ದರು. ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗವೇ ಅಪಘಾತಕ್ಕೆ ಕಾರಣ

"ಕಾರನ್ನು ಚಾಲಕ ತುಂಬಾ ವೇಗವಾಗಿ ಚಲಾಯಿಸುತ್ತಿದ್ದ. ದಿಢೀರ್ ಎಂದು ರಸ್ತೆ ತಿರುವು ಬಂದಾಗ ಹಠಾತ್ ಆಗಿ ಬ್ರೇಕ್ ಚಲಾಯಿಸಿದ್ದಾನೆ. ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ" ಎಂದು ತಿಳಿಸಿದ್ದರು.

English summary
Kannada actress Aindrita Ray met with an accident recently in Gujarat, here are the accident photos. The actress had a miraculous escape, sustaining only minor injuries, after the SUV she was travelling in met with a major accident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada