»   » 'ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ

'ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ

Posted By:
Subscribe to Filmibeat Kannada

ಕಾಲಿವುಡ್, ಮಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಖ್ಯಾತಿ ಗಳಿಸಿ ಇದೀಗ 'ಹೆಬ್ಬುಲಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿರುವ ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ವೈವಾಹಿಕ ಜೀವನ ಅಂತ್ಯ ಕಂಡಿದೆ.[ನಟಿ ಅಮಲಾ ಪೌಲ್ ಸಂಸಾರದಲ್ಲಿ ಬಿರುಗಾಳಿ..! ಕಾರಣ ಯಾರು.?]

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಎ.ಎಲ್.ವಿಜಯ್ ಮತ್ತು ಅಮಲಾ ಪೌಲ್ ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಿಂದು ವಿವಾಹ ಕಾಯ್ದೆ ಸೆಕ್ಷನ್ 13(b) ಪ್ರಕಾರ, ನಿನ್ನೆ (ಫೆಬ್ರವರಿ 21) ಅಮಲಾ ಪೌಲ್-ವಿಜಯ್ ವಿಚ್ಛೇದಿತರಾಗಿದ್ದಾರೆ. ಮುಂದೆ ಓದಿ....

ವಿಚ್ಛೇದನಕ್ಕೆ ಕಾರಣ ಏನು.?

ಮದುವೆ ಆದ ಬಳಿಕ ಅಮಲಾ ಪೌಲ್ ನಟಿಸುವುದು ವಿಜಯ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದರಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ವಿಚ್ಛೇದನ ಪಡೆಯಲು ಮುಂದಾದರು ಎಂಬ ಗುಸುಗುಸು ಕಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು.[ಸೊಸೆ ಅಮಲಾ ಪೌಲ್ ವಿರುದ್ಧ ವಿಜಯ್ ತಂದೆ ಕಿಡಿ.! ಯಾಕೆ.?]

ವಿಜಯ್ ಹೇಳಿದ್ದೇನು.?

''ಮದುವೆ ನಂತರ ಕೂಡ ಅಮಲಾ ಪೌಲ್ ನಟಿಸುವ ಬಗ್ಗೆ ನಮ್ಮ ಕುಟುಂಬಕ್ಕೆ ಏನೂ ಅಭ್ಯಂತರವಿರಲಿಲ್ಲ. ಆದರೆ ದಾಂಪತ್ಯ ಜೀವನದಲ್ಲಿ ಸತ್ಯ ಮತ್ತು ನಂಬಿಕೆ ಅನ್ನೋದು ಮುಖ್ಯ'' ಎಂದು ಎ.ಎಲ್.ವಿಜಯ್ ಒಗಟಾಗಿ ಹೇಳಿದ್ದರು. ಹೀಗಾಗಿ ಇಬ್ಬರ ನಡುವಿನ ವಿರಸಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಲಿಲ್ಲ.[ನಟಿ ಅಮಲಾ ಪೌಲ್ - ವಿಜಯ್ ಗಲಾಟೆ ಸಂಸಾರದ ಗುಟ್ಟು ರಟ್ಟು.!]

ಪ್ರೀತಿಸಿ ಮದುವೆ ಆಗಿದ್ದ ಜೋಡಿ

ವಿಕ್ರಮ್ ನಾಯಕನಾಗಿ ಅಭಿನಯಿಸಿದ್ದ ಸೂಪರ್ ಡ್ಯೂಪರ್ ಹಿಟ್ 'ದೈವ ತಿರುಮಗಳ್' ಚಿತ್ರವನ್ನ ನೀವು ನೋಡಿರಬಹುದು. 'ದೈವ ತಿರುಮಗಳ್' ಚಿತ್ರಕ್ಕೆ ಎ.ಎಲ್.ವಿಜಯ್ ಆಕ್ಷನ್ ಕಟ್ ಹೇಳಿದ್ರೆ, ಅದೇ ಸಿನಿಮಾದಲ್ಲಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಅಲ್ಲಿಂದ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ ನಂತರ ಕುಟುಂಬದವರ ಸಮ್ಮತಿ ಪಡೆದು ಮದುವೆ ಆದರು.[ನಟಿ ಅಮಲಾ ಪೌಲ್ ಗೆ ವಿಚ್ಛೇದನ: ಪತಿ ವಿಜಯ್ ಬಾಯ್ಬಿಟ್ಟ ಸತ್ಯ ಏನು.?]

ಹಿಂದು ಸಂಪ್ರದಾಯದಂತೆ ಮದುವೆ

ಮಲ್ಲು ಬೆಡಗಿ ಅಮಲಾ ಪೌಲ್ ರವರ ನಿಶ್ಚಿತಾರ್ಥ ಕ್ರೈಸ್ತ ಸಂಪ್ರದಾಯದಂತೆ ನಡೆದರೆ, ವಿವಾಹ ಹಿಂದೂ ಸಂಪ್ರದಾಯದಂತೆ ಜೂನ್ 12, 2014 ರಲ್ಲಿ ಚೆನ್ನೈನಲ್ಲಿ ನಡೆದಿತ್ತು.[ವಿಚ್ಛೇದನ ಪಡೆದ್ರೆ ಏನಂತೆ, ಅಮಲಾ ಪೌಲ್ ಗೆ ಸಿನಿಮಾಗಳು ಸಿಗ್ಬೇಕಲ್ಲ.!]

ಒಂದೇ ವರ್ಷದಲ್ಲಿ ಮನಸ್ತಾಪ

ಇಬ್ಬರ ನಡುವೆ ವೈಮನಸ್ಯ ಒಂದೇ ವರ್ಷಕ್ಕೆ ತಾರಕಕ್ಕೆ ಏರಿ ಮಾರ್ಚ್ 2, 2015 ರಿಂದ ಅಮಲಾ ಪೌಲ್ ಹಾಗೂ ಎ.ಎಲ್.ವಿಜಯ್ ಬೇರೆ-ಬೇರೆಯಾಗಿ ವಾಸ್ತವ್ಯ ಹೂಡಿದರು.[ಅಮಲಾ ಪೌಲ್ ವಿಚ್ಛೇದನ: ಆಕೆಯ ತಾಯಿಯೇ ಮೇನ್ ವಿಲನ್?]

ಮೂರೇ ವರ್ಷದಲ್ಲಿ ದಾಂಪತ್ಯ ಅಂತ್ಯ

ಮದುವೆ ಆದ ಮೂರೇ ವರ್ಷಗಳಲ್ಲಿ ಅಮಲಾ ಪೌಲ್-ವಿಜಯ್ ದಾಂಪತ್ಯ ಮುರಿದು ಬಿದ್ದಿದೆ.[ತಮಿಳಿನಲ್ಲಿ ಅಮಲಾ ಪೌಲ್ ಬ್ಯಾನ್ ಹಿಂದೆ 'ಸೂಪರ್ ಸ್ಟಾರ್' ಕೈವಾಡ?]

ಚಿತ್ರರಂಗದಲ್ಲಿ ಬಿಜಿ

ದಾಂಪತ್ಯ ಜೀವನದಲ್ಲಿ ತಾಳ ತಪ್ಪಿದ್ದರೂ, ನಟಿ ಅಮಲಾ ಪೌಲ್ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. ಕನ್ನಡದಲ್ಲಿ ನಟಿ ಅಮಲಾ ನಟಿಸಿರುವ 'ಹೆಬ್ಬುಲಿ' ಚಿತ್ರ ನಾಳೆ (ಫೆಬ್ರವರಿ 23) ತೆರೆಗೆ ಬರಲಿದೆ.

English summary
Actress Amala Paul and Director A.L.Vijay were granted divorce by a Family Court, Chennai on Tuesday (Feb 21st) after being separated for less than a year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada