»   »  ಕೊಚ್ಚಿಯಲ್ಲಿ ಸರಳವಾಗಿ ಅಮಲಾ ಪೌಲ್ ನಿಶ್ಚಿತಾರ್ಥ

ಕೊಚ್ಚಿಯಲ್ಲಿ ಸರಳವಾಗಿ ಅಮಲಾ ಪೌಲ್ ನಿಶ್ಚಿತಾರ್ಥ

By: ರವಿಕಿಶೋರ್
Subscribe to Filmibeat Kannada

ಮಲ್ಲು ಬೆಡಗಿ ಅಮಲಾ ಪೌಲ್ ಹಾಗೂ ತಮಿಳು ಚಲನಚಿತ್ರ ನಿರ್ದೇಶಕ ಎ.ಎಲ್.ವಿಜಯ್ ಅವರ ನಿಶ್ಚಿತಾರ್ಥ ಕೊಚ್ಚಿಯಲ್ಲಿ ಶನಿವಾರ (ಜೂ.7) ಚರ್ಚ್ ವೊಂದರಲ್ಲಿ ಸರಳ, ಸುಂದರವಾಗಿ ನೆರವೇರಿತು. ಒಬ್ಬರಿಗೊಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಇವರಿಬ್ಬರ ನಿಶ್ಚಿತಾರ್ಥ ನಡೆಯಿತು.

ಶ್ವೇತ ವರ್ಣದ ಗೌನ್ ನಲ್ಲಿ ಕಂಗೊಳಿಸುತ್ತಿದ್ದ ನಿಶ್ವಿತಾರ್ಥಕ್ಕೆ ಪರಿಮಿತ ಸಂಖ್ಯೆಯಲ್ಲಿ ಸ್ನೇಹಿತರು, ಬಂಧುಗಳ ಸಾಕ್ಷಿಯಾದರು. ಇದೇ ತಿಂಗಳ 12ರಂದು ಚೆನ್ನೈನ ಮೇಯರ್ ರಾಮನಾಥನ್ ಚೆಟ್ಟಿಯಾರ್ ಹಾಲ್ ನಲ್ಲಿ ಇವರಿಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. [ವಿಜಯ್ ಜೊತೆ ನಟಿ ಅಮಲಾ ಪೌಲ್ ಜೂಟಾಟ]

ಇದಕ್ಕೆ ಸಂಬಂಧಿಸಿದಂತೆ ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಕ್ರೈಸ್ತ ಧರ್ಮಕ್ಕೆ ಸೇರಿದ ಅಮಲಾ ಪೌಲ್ ಹಾಗೂ ಹಿಂದೂ ಧರ್ಮಕ್ಕೆ ಸೇರಿರುವ ವಿಜಯ್ ಯಾರ ಮನಸ್ಸಿಗೂ ನೋವಾಗದಂತೆ ನಿಶ್ವಿತಾರ್ಥವನ್ನು ಕ್ರೈಸ್ತ ಸಂಪ್ರದಾಯದಂತೆ ಹಾಗೂ ಮದುವೆಯನ್ನು ಹಿಂದೂ ಸಂಪ್ರದಾಯಂತೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತನ್ನ ಭಾವಿ ಪತಿಯ ಬಗ್ಗೆ ಮಾತನಾಡಿರುವ ಅಮಲಾ ಪೌಲ್, ವಿಜಯ್ ಬಗ್ಗೆ ನನಗೆ ಮಾತ್ರ ಗೊತ್ತಿರುವ ಸಂಗತಿ ಎಂದರೆ ಅವರಷ್ಟು ರೊಮ್ಯಾಂಟಿಕ್ ಮನುಷ್ಯ ಇನ್ಯಾರು ಯಾರೂ ಇಲ್ಲ ಎನ್ನುತ್ತಾರೆ. ಅವರದು ಬಹಳ ಅಪರೂಪದ ಬ್ಲಡ್ ಗ್ರೂಪ್. ತನ್ನ ಬ್ಲಡ್ ಗ್ರೂಪ್ ಯಾರೇ ಆಗಲಿ ಆಪತ್ತಿನಲ್ಲಿದ್ದಾರೆ ಎಂದರೆ ರಕ್ತದಾನ ಮಾಡುತ್ತಾರೆ ಎಂದು ತನ್ನ ಭಾವಿ ಪತಿಯನ್ನು ಕೊಂಡಾಡಿದ್ದಾರೆ.

ವಿಜಯ್ ಅಷ್ಟು ರೋಮ್ಯಾಂಟಿಕ್ ಯಾರೂ ಇಲ್ಲ!

ತನ್ನ ಭಾವಿ ಪತಿಯ ಬಗ್ಗೆ ಮಾತನಾಡಿರುವ ಅಮಲಾ ಪೌಲ್, ವಿಜಯ್ ಬಗ್ಗೆ ನನಗೆ ಮಾತ್ರ ಗೊತ್ತಿರುವ ಸಂಗತಿ ಎಂದರೆ ಅವರಷ್ಟು ರೊಮ್ಯಾಂಟಿಕ್ ಮನುಷ್ಯ ಇನ್ಯಾರು ಯಾರೂ ಇಲ್ಲ ಎನ್ನುತ್ತಾರೆ. ಅವರದು ಬಹಳ ಅಪರೂಪದ ಬ್ಲಡ್ ಗ್ರೂಪ್. ತನ್ನ ಬ್ಲಡ್ ಗ್ರೂಪ್ ಯಾರೇ ಆಗಲಿ ಆಪತ್ತಿನಲ್ಲಿದ್ದಾರೆ ಎಂದರೆ ರಕ್ತದಾನ ಮಾಡುತ್ತಾರೆ ಎಂದು ತನ್ನ ಭಾವಿ ಪತಿಯನ್ನು ಕೊಂಡಾಡಿದ್ದಾರೆ.

ವಿಜಯ್ ಅಂದ್ರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ

ಇನ್ನು ನಮ್ಮ ತಂದೆತಾಯಿಗೆ ವಿಜಯ್ ಬಗ್ಗೆ ಚೆನ್ನಾಗಿ ಗೊತ್ತು. ಒಬ್ಬ ಮಗನಾಗಿ, ಅಳಿಯ, ಸೋದರನಾಗಿ ಅವರಿಗೆ ವಿಜಯ್ ರೋಲ್ ಮಾಡೆಲ್ ಎಂದು ಹೇಳಬಹುದು. ವಿಜಯ್ ಅವರನ್ನು ಕೇಳದೆ ನನ್ನ ತಂದೆತಾಯಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ. ಜವಾಬ್ದಾರಿಗಳ ವಿಷಯದಲ್ಲಿ ವಿಜಯ್ ತರಹ ಇರಬೇಕು ಎಂದು ತನ್ನ ತಮ್ಮನನ್ನು ಗೋಳುಹೊಯ್ದುಕೊಳ್ಳುತ್ತಿರುತ್ತಾರೆ ಎನ್ನುತ್ತಾರೆ ಅಮಲಾ.

ವಿಜಯ್, ಕುಟುಂಬಕ್ಕೆ ನನ್ನ ಮೊದಲ ಪ್ರಾಧಾನ್ಯತೆ

ಮದುವೆಯಾದ ಬಳಿಕ ನಾನು ಚಿತ್ರರಂಗದಲ್ಲಿ ಮುಂದುವರೆಯಬೇಕೆ, ಬೇಡವೆ ಎಂಬುದನ್ನು ನನಗೆ ಬಿಟ್ಟಿದ್ದಾರೆ ವಿಜಯ್. ನನ್ನ ಪ್ರಕಾರ ವಿಜಯ್, ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ. ಆ ಬಳಿಕವಷ್ಟೇ ಮುಂದಿನ ವಿಷಯಗಳು.

ಕೇರಳದಲ್ಲೇ ಸಂಗೀತ್ ಕಾರ್ಯಕ್ರಮ

ಕೇರಳದಲ್ಲಿ ನಿಶ್ವಿತಾರ್ಥ ನಡೆದಿದೆ, ಸಂಗೀತ ಕಾರ್ಯಕ್ರಮಗಳೂ ಅಲ್ಲೇ ನಡೆಯಲಿವೆ. ಲೈವ್ ಬ್ಯಾಂಡ್, ಕುದುರೆ ಮೇಲೆ ಬರುವಂತಹ ಕೆಲಸಗಳು ಇದರಲ್ಲಿ ಪ್ರಮುಖವಾದವು. ನಿಶ್ಚಿತಾರ್ಥದಲ್ಲಿ ತಾನು ಧರಿಸಿದ್ದ ಗೌನ್ ಡಿಸೈನ್ ಮಾಡಿದವರು ದೆಹಲಿಯ ಹಿಮಂಗಿ. ಸಂಗೀತ್ ಸಂಭ್ರಮದ ವಸ್ತ್ರಗಳನ್ನು ಅನಿತಾ ಡೋಗ್ರೆ ವಿನ್ಯಾಸ ಮಾಡುತ್ತಾರೆ.

ಹಿಂದೂ ಸಂಪ್ರದಾಯದಂತೆ ಮದುವೆ

ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಮದುವೆಗೆ ಕಾಂಚಿಪುರಂ ಸೀರೆ ಉಡುತ್ತಿದ್ದೇನೆ. ಬಳಿಕ ವಿಜಯ್ ಸವ್ಯಸಾಚಿ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸುತ್ತೇನೆ ಎಂದಿದ್ದಾರೆ ಅಮಲಾ ಪೌಲ್.

English summary
Amala Paul and director Vijay's marriage proceedings have begun with the engagement. The couple has exchanged the rings earlier June 7 as per the Christian customs. The engagement was held in Aluva in Kochi, Kerala. Amala Paul remained the prime attraction among guest by sporting custom-made white wedding gown.
Please Wait while comments are loading...