»   » ನಟಿ ಅಂಬಿಕಾ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ.!

ನಟಿ ಅಂಬಿಕಾ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ.!

Posted By:
Subscribe to Filmibeat Kannada

ದಕ್ಷಿಣ ಭಾರತದ ಯಶಸ್ವಿ ನಾಯಕಿಯರ ಪಟ್ಟಿಯಲ್ಲಿ ನಟಿ ಅಂಬಿಕಾ ಕೂಡ ಒಬ್ಬರು. 16ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಈಕೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 80-90 ದಶಕದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗವನ್ನ ಆಳಿದ ಹೆಗ್ಗಳಿಕೆ ಕೂಡ ಈ ನಟಿಗಿದೆ.

ಈಗ ಅಂಬಿಕಾ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಅಂಬಿಕಾ ಅವರ ಪುತ್ರ ರಾಮ್ ಕೇಶವ್ ಆದಷ್ಟೂ ಬೇಗ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರಂತೆ. ಈ ಸುದ್ದಿಯನ್ನ ಸ್ವತಃ ಅಂಬಿಕಾ ಅವರೇ ಬಹಿರಂಗ ಪಡಿಸಿದ್ದಾರೆ.

Actress Ambika’s son to Make his Film Debut Soon

ಇತ್ತೀಚೆಗಷ್ಟೇ ನಡೆದ 64ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅಂಬಿಕಾ, ''ಇತ್ತೀಚಿನ ನಟ-ನಟಿಯರಿಗೆ ಅವರದ್ದೇ ಆದ ಸ್ಟೈಲ್ ಇದೆ, ಏನು ಮಾಡ್ಬೇಕು ಎನ್ನುವ ಜ್ಞಾನವಿದೆ. ಅದೇ ರೀತಿ ನನ್ನ ಮಗನೂ ಆದಷ್ಟೂ ಬೇಗ ಸಿನಿಮಾ ಪ್ರಪಂಚಕ್ಕೆ ಪರಿಚಯವಾಗ್ತಿದ್ದಾನೆ'' ಎಂದು ಹೇಳಿದರು.

ಅಂಬಿಕಾ ಅವರ ಮಗ ರಾಮ್ ಕೇಶವ್ ಈಗಾಗಲೇ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೇ, ತಮಿಳು ಅಥವಾ ಮಲಯಾಳಂನಲ್ಲಿ ಅಂಬಿಕಾ ಅವರ ಪುತ್ರನ ಎಂಟ್ರಿಯಾಗಲಿದೆಯಂತೆ.

English summary
South Actress Ambika’s son Ram Keshav to Make his Film Debut Soon in Tamil or Malayalam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada