»   » ತೆನೆ ಹೊತ್ತ ಅಮೂಲ್ಯ : ಕುಮಾರಣ್ಣನ ಪಕ್ಷ ಸೇರಿದ ಗೋಲ್ಡನ್ ಕ್ವೀನ್

ತೆನೆ ಹೊತ್ತ ಅಮೂಲ್ಯ : ಕುಮಾರಣ್ಣನ ಪಕ್ಷ ಸೇರಿದ ಗೋಲ್ಡನ್ ಕ್ವೀನ್

Posted By:
Subscribe to Filmibeat Kannada
ನಟಿ ಅಮೂಲ್ಯ ಎಚ್ ಡಿ ದೇವೆ ಗೌಡ್ರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ | Oneindia Kannada

ನಟಿ ಅಮೂಲ್ಯ ಇದೀಗ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮೂಲ್ಯ ಮಾವ ರಾಮಚಂದ್ರ ಬಿ ಜೆ ಪಿ ಪಕ್ಷ ತೆರೆದು ಇಂದು ಜೆಡಿಎಸ್ ಪಕ್ಷ ಸೇರಿದ್ದು, ನಟಿ ಅಮೂಲ್ಯ ತೆನೆ ಹೊರಲು ಸಿದ್ಧವಾಗಿದ್ದಾರೆ.

ಅಂದಹಾಗೆ, ಇಂದು ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅಧಿಕೃತವಾಗಿ ಜೆ ಡಿ ಎಸ್ ಪಕ್ಷ ಸೇರಿಕೊಂಡರು. ಬೆಂಗಳೂರಿನ ಜೆ ಡಿ ಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿಕೊಳ್ಳಲಾಗಿದೆ. ಈ ವೇಳೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಕೂಡ ಜೆ ಡಿ ಎಸ್ ಪಕ್ಷದ ಶಾಲ್ ಹೊತ್ತು ಕುಮಾರಣ್ಣನಿಗೆ ಜೈ ಎಂದರು.

ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ

ಇನ್ನು ಮಾಜಿ ಕಾರ್ಪೋರೇಟರ್ ಆಗಿರುವ ಅಮೂಲ್ಯ ಮಾವ ರಾಮಚಂದ್ರ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ಲಾನ್ ಮಾಡಿದ್ದರು. ಜೊತೆಗೆ ಬಿ ಜೆ ಪಿ ಪಕ್ಷದಿಂದ ಆರ್ ಆರ್ ನಗರದಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಬಿ ಜೆ ಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ರಾಮಚಂದ್ರ ಈಗ ಪಕ್ಷ ಬದಲಾಯಿಸಿದ್ದಾರೆ. ಜೆ ಡಿ ಎಸ್ ಪಕ್ಷದ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯುವ ಯೋಚನೆ ಮಾಡಿದ್ದಾರೆ.

Actress Amulyas father in law and former BBMP corporator Ramachandra joins JDS

ರಾಮಚಂದ್ರ ಅವರ ಜೊತೆಗೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಹೇಮಚಂದ್ರ ಸಾಗರ್ ಮತ್ತು ಸಿ ವಿ ರಾಮನ್ ನಗರ ಟಿಕೆಟ್ ಆಕಾಂಕ್ಷಿ ರಮೇಶ್ ಸಹ ಜೆ ಡಿ ಎಸ್ ಪಕ್ಷವನ್ನು ಸೇರಿದ್ದಾರೆ. ಇನ್ನು ಚುನಾವಣೆಯ ದಿನ ಹತ್ತಿರ ಆಗುತ್ತಿದ್ದಂತೆ ಟಿಕೆಟ್ ಸಿಗದ ಮುಖಂಡರು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ.

English summary
Karnataka Election 2018 : Kannada actress Amulya's father in law and former BBMP corporator Ramachandra joins Jayathirtha Janata Dal party Today (April 17).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X