For Quick Alerts
  ALLOW NOTIFICATIONS  
  For Daily Alerts

  'ಆಕೆ' ಟ್ರೈಲರ್ ನೋಡಿ ಕಾಮೆಂಟ್ ಮಾಡಿದ ನಟಿ ರಮ್ಯಾ

  By Bharath Kumar
  |

  ಹಾಲಿವುಡ್ ಮಟ್ಟದಲ್ಲಿ ತಯಾರಾಗಿರುವ ಕನ್ನಡ ಚಿತ್ರ 'ಆಕೆ' ಟ್ರೈಲರ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ. 'ಆಕೆ' ಟ್ರೈಲರ್ ಕಂಡು ಕನ್ನಡ ಪ್ರೇಕ್ಷಕರು ಮಾತ್ರವಲ್ಲ, ಸ್ಯಾಂಡಲ್ ವುಡ್ ತಾರೆಯರು ಕೂಡ ಭಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಆಕೆ' ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಮೋಹಕ ತಾರೆ ರಮ್ಯಾ 'ಆಕೆ' ಟ್ರೈಲರ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

  ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

  'ಆಕೆ' ಚಿತ್ರದ ಟ್ರೈಲರ್ ನೋಡಿರುವ ರಮ್ಯಾ ತಮ್ಮ ಫೇಸ್ ಬುಕ್ ನಲ್ಲಿ ಟ್ರೈಲರ್ ಶೇರ್ ಮಾಡಿದ್ದಲ್ಲದೇ, ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದಿರುವ ರಮ್ಯಾ ನಿರ್ದೇಶಕ ಕೆ.ಎಂ ಚೈತನ್ಯ ಅವರ ಕೆಲಸಕ್ಕೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, 'ಆಕೆ' ತಮಿಳಿನ 'ಮಾಯಾ' ಚಿತ್ರದ ರೀಮೇಕ್ ಆಗಿದ್ದು, 'ಇರೋಸ್ ಇಂಟರ್ ನ್ಯಾಷನಲ್' ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಿದೆ. ಯೋಗೀಶ್ ದ್ವಾರಕೀಶ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದು, ಗುರುಕಿರಣ್ ಅವರ ಸಂಗೀತ, ರೋಹಿತ್ ಪದಕಿ ಅವರ ಸಂಭಾಷಣೆಯಿದೆ.

  ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಹೆಚ್ಚು ಕೆಲಸ ಮಾಡಿದ್ದಾರೆ. ಕಾರ್ಲ್ ಆಸ್ಟಿನ್ ಎಂಬುವವರು ಚೈತನ್ಯ ಜೊತೆಗೆ ಚಿತ್ರಕಥೆ ಬರೆದಿದ್ದಾರಂತೆ. ಪಾಲ್ ಬನ್ರ್ಸ್ ಎನ್ನುವವರು ಪ್ರೊಡಕ್ಷನ್ ಡಿಸೈನರ್ ಆಗಿದ್ದಾರಂತೆ. ಹ್ಯಾರಿ ಪಾಟರ್' ಚಿತ್ರಕ್ಕೆ ಕ್ಯಾಮರಾಮ್ಯಾನ್ ಆಗಿದ್ದ ಇಯಾನ್ ಹೌಸ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

  ಬೆಚ್ಚಿಬೀಳಿಸಲು 'ಆಕೆ' ಬರ್ತಿದ್ದಾಳೆ ಹುಷಾರ್!

  ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಲ್ಲಿ ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಸ್ನೇಹಾ ಆಚಾರ್ಯ, ಅಮನ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳನ್ನ ಒಳಗೊಂಡಿರುವ 'ಆಕೆ' ಜೂನ್ 30 ರಂದು ಬಿಡುಗಡೆಯಾಗುತ್ತಿದೆ.

  English summary
  Kannada Actress and Politician Ramya has taken his Facebook Account to Appreciate 'Aake' movie Trailer. The Movie is all set to release on June 30th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X