»   » ಕಿರುತೆರೆ ನಟಿಗೆ ಕಾಟ ಕೊಡುತ್ತಿದ್ದಾರಂತೆ ಕಾರುಣ್ಯ ರಾಮ್! ಏನಿದು ವಿವಾದ..?

ಕಿರುತೆರೆ ನಟಿಗೆ ಕಾಟ ಕೊಡುತ್ತಿದ್ದಾರಂತೆ ಕಾರುಣ್ಯ ರಾಮ್! ಏನಿದು ವಿವಾದ..?

Posted By:
Subscribe to Filmibeat Kannada
ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮಾದಾರ ಜೊತೆ ಕಾರುಣ್ಯಾ ರಾಮ್ ಕಿರಿಕ್ | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟಿಯಾಗಿ ಗುರುತಿಸಿಕೊಂಡಿರುವ ಕಾರುಣ್ಯ ರಾಮ್ ಒಬ್ಬ ಕಿರುತೆರೆ ನಟಿಗೆ ಕಾಟ ಕೊಡುತ್ತಿದ್ದಾಎಂತೆ ಎನ್ನುವ ಸುದ್ದಿಗಳು ಹರಿದಾಡಿದೆ. 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕುಮುದ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಅನಿಖ ಸಿಂಧ್ಯಾರಿಗೆ ದೂರಾವಣಿ ಮೂಲಕ ಹಿಂಸೆ ನೀಡುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ.

Actress Anika decided to file a complaint against Karanya

ಕಳೆದ ಹನ್ನೋಂದು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಅನಿಖ ಜೊತೆ ಸಚಿನ್ ಎಂಬ ಉದ್ಯಮಿಯ ನಿಶ್ಚಿತಾರ್ಥ ಆಗಿತ್ತು. ಆಗ ಅವರ ಎಂಗೇಜ್ ಮೆಂಟ್ ಫೋಟೋಗಳು ಫೇಸ್ ಬುಕ್ ನಲ್ಲಿ ಹಾಕಿದನ್ನು ನೋಡಿರುವ ನಟಿ ಕಾರುಣ್ಯ, ಅನಿಖ ಹಾಗೂ ಸಚಿನ್ ಕುಟುಂಬಸ್ಥರಿಗೆ ಕರೆ ಮಾಡಿ ನಾನು ಮತ್ತು ಸಚಿನ್ ಪ್ರೇಮಿಗಳು ಎಂದೆಲ್ಲಾ ಹೇಳಿ ತೊಂದರೆ ನೀಡಿದ್ದಾರಂತೆ. ಅಷ್ಟೇ ಅಲ್ಲದೆ ಸಚಿನ್ ತಾಯಿಯನ್ನು ಮಾತನಾಡಬೇಕೆಂದು ಕರೆಸಿಕೊಂಡು ಸಚಿನ್ ರನ್ನು ಮದುವೆ ಮಾಡಿಕೊಡಿ, ನಾನು ಸಚಿನರನ್ನು ಮದುವೆಯಾಗುತ್ತೇನೆ ಎಂದು ತಿಳಿಸಿದ್ದಾರಂತೆ.

Actress Anika decided to file a complaint against Karanya

ಆದರೆ ನಟಿ ಕಾರುಣ್ಯ ರಾಮ್ ''ಈ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನನಗೆ ಅನಿಖ ಪರಿಚಯವೇ ಇಲ್ಲ. ಅನಿಖರನ್ನ ನಾನು ಭೇಟಿ ಮಾಡಿಲ್ಲ ಸಚಿನ್ ರನ್ನು ಒಮ್ಮೆ ಮಾತ್ರ ಪಾರ್ಟಿಯಲ್ಲಿ ನೋಡಿದ್ದೀನಿ '' ಎಂದಿದ್ದಾರಂತೆ. ಸದ್ಯ ''ನನಗೂ ಹಾಗೂ ನಮ್ಮ ಮನೆಯವರಿಗೂ ಕಾರುಣ್ಯ ತೊಂದರೆ ನೀಡುತ್ತಿದ್ದಾರೆ'' ಎಂದು ಅನಿಖ, ಅವರ ವಿರುದ್ದ ದೂರ ನೀಡಲು ಮುಂದಾಗಿದ್ದಾರಂತೆ.

English summary
Television actress Anika decided to file a complaint for alleging harassment against kannada actress Karunya Ram

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada