»   » ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ

ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಯಾಂಡಲ್ ವುಡ್ ನ ಮಂದಿಗೆ ಇದು ಶಾಕಿಂಗ್ ನ್ಯೂಸ್.! ಯಾಕಂತೀರಾ? ಯಾಕೆಂದರೆ ನಟ ಕಮ್ ಮಾಡೆಲ್ ರಘು ಮುಖರ್ಜಿ ಮತ್ತು ನಟಿ ಅನು ಪ್ರಭಾಕರ್ ಅವರು ಇಂದು (ಏಪ್ರಿಲ್ 25) ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸದ್ದಿಲ್ಲದೇ ಸಪ್ತಪದಿ ತುಳಿಯುತ್ತಿದ್ದಾರೆ.

  ಇಲ್ಲಿಯವರೆಗೆ ಯಾರಿಗೂ ಯಾವುದೇ ರೀತಿಯ ಮಾಹಿತಿ ಬಿಟ್ಟುಕೊಡದ ನಟಿ ಅನು ಪ್ರಭಾಕರ್ ಮತ್ತು ನಟ ರಘುಮುಖರ್ಜಿ ಅವರು ಎರಡನೇ ಮದುವೆಗೆ ಸಜ್ಜಾಗುವ ಮೂಲಕ ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.[ಅನು ಪ್ರಭಾಕರ್ ವಿಚ್ಛೇದನದ ಬಗ್ಗೆ ಜಯಂತಿ ಮೌನ]

  ನಟಿ ಅನು ಪ್ರಭಾಕರ್ ಅವರಿಗೆ ಇದು ಎರಡನೇ ಮದುವೆಯಾದರೆ, ನಟ ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆ. ಮೊದಲ ಮದುವೆ ಅಧೀಕೃತವಾಗಿಲ್ಲ. ಇಂಟೀರಿಯರ್ ಡಿಸೈನರ್ ಭಾವನ ಅವರನ್ನು ಎರಡನೇ ಮದುವೆಯಾಗಿದ್ದು, ತಮ್ಮ ಎರಡನೇ ಪತ್ನಿಗೆ ವಿಚ್ಛೇದನ ನೀಡಿದ್ದಾರೆ.[ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

  ಅಂದಹಾಗೆ ಇವರಿಬ್ಬರ ನಡುವೆ ಸ್ನೇಹ-ಸಂಬಂಧ ಇದೆ ಅನ್ನೋ ಅನುಮಾನ ಕಾಡಲು ಕಾರಣ, ಇತ್ತೀಚೆಗೆ ಅನು ಪ್ರಭಾಕರ್ ಅವರು 'ರಘು ಮುಖರ್ಜಿ ಅವರಿಗೆ ಸಪೋರ್ಟ್ ಮಾಡಿ' ಅಂತ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರಿಂದ ಇವರಿಬ್ಬರ ಸಂಬಂಧದ ರಹಸ್ಯ ಬಯಲಾಗಿತ್ತು. ಟ್ವೀಟ್ ಇಲ್ಲಿದೆ ನೋಡಿ...

  ಹೆಚ್ಚಿನ ಮಾಹಿತಿಗಳನ್ನು ಓದಿ ಕೆಳಗಿನ ಸ್ಲೈಡುಗಳಲ್ಲಿ..

  ಎರಡು ವರ್ಷಗಳ ಲವ್ ಕಹಾನಿ

  ಸುಮಾರು ಎರಡು ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿದ್ದ ನಟಿ ಅನುಪ್ರಭಾಕರ್ ಮತ್ತು ನಟ ಕಮ್ ಮಾಡೆಲ್ ರಘು ಮುಖರ್ಜಿ ಅವರು ಇಂದು ಮದುವೆಯಾಗುವ ಮೂಲಕ ತಮ್ಮ ದೀರ್ಘಕಾಲದ ಸಂಬಂಧಕ್ಕೆ ನಾಂದಿ ಹಾಡಿದ್ದಾರೆ.

  ಬೆಂಗಳೂರಿನಲ್ಲಿ ಮದುವೆ

  ಬೆಂಗಳೂರಿನ ಯಲಹಂಕದಲ್ಲಿರುವ ಕ್ಲಬ್ ಹೌಸ್ ಒಂದರಲ್ಲಿ 11.30ರ ಶುಭ ಮುಹೂರ್ತದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರ ಸಮ್ಮುಖದಲ್ಲಿ ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಅವರು ಸುದ್ದಿ-ಸದ್ದು ಮಾಡದೇ ಎರಡನೇ ಮದುವೆಯಾಗುತ್ತಿದ್ದಾರೆ.

  ಜಯಂತಿ ಅವರ ಮಗನಿಗೆ ಡೈವೋರ್ಸ್

  ಈ ಮೊದಲು ಹಿರಿಯ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವರಿಸಿದ್ದ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಅನುಪ್ರಭಾಕರ್ ಅವರು ತದನಂತರ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದರು.[ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ]

  ಬರೀ ಕುಟುಂಬದವರ ಸಮ್ಮುಖದಲ್ಲಿ ಮದುವೆ

  ಇಲ್ಲಿಯವರೆಗೆ ಗುಟ್ಟಾಗಿದ್ದ ಇವರಿಬ್ಬರ ಸಂಬಂಧದ ಬಗ್ಗೆ ಸ್ಯಾಂಡಲ್ ವುಡ್ ಮಂದಿಗೆ ಯಾರಿಗೂ ಗೊತ್ತಿಲ್ಲ, ಸದ್ಯಕ್ಕೆ ಅನುಪ್ರಭಾಕರ್ ಮತ್ತು ರಘುಮುಖರ್ಜಿ ಅವರ ಫ್ಯಾಮಿಲಿ ಮಂದಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ

  ನಿನ್ನೆಯೇ ಮದುವೆ ಮುಂಚಿನ ಎಲ್ಲಾ ಕಾರ್ಯಗಳು ನಡೆದಿವೆ. ಬೆಂಗಳೂರಿನಲ್ಲಿ ಖಾಸಗಿಯಾಗಿ ಮದುವೆ ನೆರವೇರುತ್ತಿದ್ದು, ಈ ಎರಡನೇ ಮದುವೆಗೆ ಎರಡೂ ಕುಟುಂಬದವರ ಪೂರ್ಣ ಸಮ್ಮತಿ ಇದೆ. ಆದ್ದರಿಂದ ಬರೀ ಎರಡು ಕಡೆಯ ಕುಟುಂಬ ಸದಸ್ಯರು ಮಾತ್ರ ಪಾಲ್ಗೊಳ್ಳಲಿದ್ದಾರೆ.

  ಸದ್ಯಕ್ಕೆ ಅನು ಯಾವುದೇ ಪ್ರಾಜೆಕ್ಟ್ ನಲ್ಲಿ ಇಲ್ಲ

  ನಟಿ ಅನುಪ್ರಭಾಕರ್ ಅವರು 'ಆಟಗಾರ' ಚಿತ್ರದ ನಂತರ ಸದ್ಯಕ್ಕೆ ಯಾವುದೇ ರೀತಿಯ ಸಿನಿಮಾದಲ್ಲಿ ಹಾಗೂ ಯಾವುದೇ ರೀತಿಯ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

  ರಿಯಾಲಿಟಿ ಶೋ ನಲ್ಲಿ ರಘು

  ನಟ ರಘು ಮುಖರ್ಜಿ ಅವರು 'ಜೆಸ್ಸಿ' ಚಿತ್ರದ ಯಶಸ್ಸಿನ ನಂತರ ಇದೀಗ ಖಾಸಗಿ ಚಾನೆಲ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಕ್ಷನ್ ಸ್ಟಾರ್' ಎಂಬ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡುತ್ತಿದ್ದಾರೆ.[ಕನ್ನಡ ಕಿರುತೆರೆಗೆ ಕಾಲಿಟ್ಟ ಹ್ಯಾಂಡ್ಸಮ್ ಹೀರೋ ರಘು ಮುಖರ್ಜಿ]

  ಖಚಿತ ಪಡಿಸಿರುವ ಅನುಪ್ರಭಾಕರ್ ಅಮ್ಮ

  ಅಂದಹಾಗೆ ಇವರಿಬ್ಬರ ಮದುವೆ ಇಂದು ಬೆಂಗಳೂರಿನಲ್ಲಿ ಖಾಸಗಿಯಾಗಿ ನಡೆಯುತ್ತಿರುವ ವಿಚಾರವನ್ನು ಖುದ್ದು ನಟಿ ಅನುಪ್ರಭಾಕರ್ ಅವರ ಅಮ್ಮ ಗಾಯತ್ರಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

  ಯಾರೆಲ್ಲಾ ಬಂದಿದ್ದಾರೆ

  ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಅವರ ಎರಡನೇ ಕಲ್ಯಾಣ ಮಹೋತ್ಸವದಲ್ಲಿ ನಟ ಕಮ್ ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್, ಜೇಕಬ್ ವರ್ಗೀಸ್ ಮತ್ತು ನಿರ್ದೇಶಕ ಪವನ್ ಒಡೆಯರ್ ಮುಂತಾದವರು ಭಾಗವಹಿಸಿದ್ದಾರೆ.

  English summary
  Kannada Actress Anu Prabhakar and Raghu Mukherjee are getting married today (April 25th). That the Sandalwood stars were a pair was one of the best kept secrets in film circles. After their respective divorces a couple of years ago, the personal lives of both these actors were off limits for their fans. But the news of their marriage comes as a real surprise.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more