For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಅಪ್ಪನ ಹುಟ್ಟುಹಬ್ಬಕ್ಕೆ ಸ್ವೀಟಿ ಅನುಷ್ಕಾ ಭಾವುಕ ಸಂದೇಶ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ತಂದೆ ವಿಠಲ್ ಶೆಟ್ಟಿ ಅವರಿಗೆ ಹುಟ್ಟುಹಬ್ಬ ಸಂಭ್ರಮ. ನಟಿ ಅನುಷ್ಕಾ ಅಪ್ಪನ ಜನ್ಮದಿನಕ್ಕೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಸಂದೇಶ ರವಾನಿಸುವ ಅನುಷ್ಕಾ ಈ ಬಾರಿ ಪ್ರೀತಿಯ ಅಪ್ಪನಿಗೆ ಶುಭಾಶಯ ತಿಳಿಸಿದ್ದಾರೆ.

  ಕನ್ನಡತಿ ಅನುಷ್ಕಾ ಆಗಾಗ ಕನ್ನಡದಲ್ಲಿಯೆ ವಿಶ್ ಮಾಡಿ ಕನ್ನಡತನ ಮೆರೆಯುತ್ತಿರುತ್ತಾರೆ. ಆದರೆ ಈ ಬಾರಿ ಅಪ್ಪನಿಗೆ ಇಂಗ್ಲಿಷ್ ನಲ್ಲಿ ಶುಭಕೋರಿದ್ದಾರೆ. ಈ ಹಿಂದೆ ತಾಯಿ ಪ್ರಫುಲ್ಲಾ ಶೆಟ್ಟಿಗೆ ಕನ್ನಡದಲ್ಲಿಯೆ ವಿಶ್ ಮಾಡಿ ಕನ್ನಡಿಗರ ಮನಗೆದ್ದಿದ್ದರು. ಸದ್ಯ ಅಪ್ಪ ವಿಠಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭ ಕೋರಿ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರುವ ಅನುಷ್ಕಾ "ಅತೀ ಹೆಚ್ಚು ಪ್ರೀತಿಸುವ, ಹೆಚ್ಚು ಕಾಳಜಿ ವಹಿಸುವ, ಹೆಚ್ಚು ಪ್ರೋತ್ಸಹಿಸುವ ಅಪ್ಪ ನೀವು. ನೀವು ನಮಗಾಗಿ ಉತ್ತಮ ಕೆಲಸಗಳನ್ನು ಮಾಡಿದ್ದೀರಿ. ಇವತ್ತು ನಿಮ್ಮ ದಿನ. ಯಾವಾಗಲು ನಗುತ್ತಾ ಇರಿ. ನಿಮ್ಮ ನಗುವೆ ನಮ್ಮ ಖುಷಿಗೆ ಕಾರಣ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಅಪ್ಪ" ಎಂದು ಭಾವುಕ ಪದಗಳ ಮೂಲಕ ವಿಶ್ ಮಾಡಿದ್ದಾರೆ.

  ಅನುಷ್ಕಾ ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗದಲ್ಲಿ ಖ್ಯಾತಿಗಳಿಸಿದ್ರು, ಕನ್ನಡಿಗರ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಹಬ್ಬ ಮತ್ತು ಹುಟ್ಟುಹಬ್ಬದ ಸಂದರ್ಭಗಳಲ್ಲಿ ಕನ್ನಡದಲ್ಲಿ ಶುಭಕೋರಿ ಕನ್ನಡದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

  ಅನುಷ್ಕಾ ಶೆಟ್ಟಿ ಸದ್ಯ ನಿಶಬ್ದಂ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ನಂತರ ಅನುಷ್ಕಾ ಯಾವುದೆ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈಗಾಗಲೆ ಅಂದುಕೊಂಡಂತೆ ಆಗಿದ್ದರೆ ನಿಶಬ್ದಂ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಆನ್ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  English summary
  Actress Anushka Shetty birthday wishes to her father.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X