»   » ಕನ್ನಡಕ್ಕೆ ಬೆಂಗಳೂರು ಬುಲ್ ಬುಲ್ ಅನುಷ್ಕಾ ಶೆಟ್ಟಿ

ಕನ್ನಡಕ್ಕೆ ಬೆಂಗಳೂರು ಬುಲ್ ಬುಲ್ ಅನುಷ್ಕಾ ಶೆಟ್ಟಿ

Posted By:
Subscribe to Filmibeat Kannada
ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಬೆಂಗಳೂರು ಬುಲ್ ಬುಲ್ ಅನುಷ್ಕಾ ಶೆಟ್ಟಿ ಕಡೆಗೂ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಕನ್ನಡದ ಭಕ್ತಿಪ್ರಧಾನ ಚಿತ್ರದಲ್ಲಿ ಅನುಷ್ಕಾ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಅಭಿನಯಿಸಲು ಆಕೆ ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು.

ಅನುಷ್ಕಾ ಹುಟ್ಟಿ, ಬೆಳೆದದ್ದು ಕರ್ನಾಟಕದಲ್ಲೇ ಆದರೂ ಬೆಳ್ಳಿತೆರೆಗೆ ಪ್ರವೇಶಿಸಿದ್ದು ಮಾತ್ರ ತೆಲುಗು ಚಿತ್ರದ ಮೂಲಕ. ತೆಲುಗಿನಲ್ಲಿ ಈಕೆಯ ಚಿತ್ರಗಳು ಹಿಟ್ ಮೇಲೆ ಹಿಟ್ ದಾಖಲಿಸಿದ್ದೇ ತಡ ಈಕೆಯ ಕೆರಿಯರ್ ಗ್ರಾಫು ಹಾಗೆಯೇ ಆಕಾಶಕ್ಕೆ ಜಿಗಿಯಿತು. ಆಕೆಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ.

ಎನ್ ಎಂ ಸುರೇಶ್ ನಿರ್ಮಿಸುತ್ತಿರುವ 'ದೇವಿ ತುಳಜಾ ಭವಾನಿ' ಚಿತ್ರದಲ್ಲಿ ಅನುಷಾ ಭಕ್ತಿ ಪ್ರಧಾನ ಪಾತ್ರವನ್ನು ಪೋಷಿಸಲಿದ್ದಾರೆ. ಈಗಾಗಲೆ ಈ ಚಿತ್ರಕ್ಕೆ ಒಂದು ಹಾಡಿನ ರೀರೆಕಾರ್ಡಿಂಗ್ ನಡೆದಿದೆ. ನಾಗೇಂದ್ರ ಮಾಗಡಿ ಪಾಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. (ಏಜೆನ್ಸೀಸ್)

English summary
Popular Telugu and Tamil actress Anushka Shetty debuts in Kannada. Nagendra Magadi directing movie is titled as Devi Tulaja Bhavani. This film is produced by NM Suresh. More details about the movie are awaited.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada