For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥ ಮಾಡಿಕೊಂಡ 'ನೂರೊಂದು ನೆನಪು' ಸಿನಿಮಾ ನಟಿ

  By Pavithra
  |
  ಮೆನೆದೇವ್ರು ಜಾನಕಿಗೆ ಕೂಡಿ ಬಂದ ಕಂಕಣ ಭಾಗ್ಯ..! | Filmibeat Kannada

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದ 'ಮನೆದೇವ್ರು' ಸೀರಿಯಲ್ ನಟಿ ಜಾನಕಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆಕೆಯ ಮುಗ್ದ ಅಭಿನಯಕ್ಕೆ ಕನ್ನಡದ ಸಾಕಷ್ಟು ಮಹಿಳೆಯರು ಫಿದಾ ಆಗಿದ್ದರು.

  ಜಾನಕಿ ಅಲಿಯಾಸ್ ಅರ್ಚನಾ ಲಕ್ಷ್ಮೀನಾಯರಣ ಸ್ವಾಮಿ ಇತ್ತೀಚಿಗೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾಗಳಲ್ಲಿಯೂ ಅರ್ಚನಾ ಅವರ ಸುದ್ದಿ ಇಲ್ಲ.. ಹಾಗಾದ್ರೆ ಎಲ್ಲಿ ಹೋದರು ಅಂತ ಹುಡುಕುತ್ತಾ ಹೊರಟರೇ ಅರ್ಚನಾ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ದತೆಯಲ್ಲಿದ್ದಾರೆ.

  ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.!ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.!

  ಹೌದು ನಟಿ ಅರ್ಚನಾ ಅವರ ನಿಶ್ಚಿತಾರ್ಥ ಕೆಲವು ದಿನಗಳ ಹಿಂದೆಯಷ್ಟೇ ನಡೆದಿದೆ. ಮನೆಯವರೆಲ್ಲರ ಸಮ್ಮುಖದಲ್ಲಿ ಸಂಪ್ರದಾಯಬದ್ದವಾಗಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ. ಹಾಗಾದರೆ ಅರ್ಚನಾ ಮದುವೆ ಆಗುತ್ತಿರುವ ಹುಡುಗ ಯಾರು? ಹೇಗಿತ್ತು ನಿಶ್ಚಿತಾರ್ಥ? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ಮನೆದೇವ್ರು ನಟಿಗೆ ಕಂಕಣ ಭಾಗ್ಯ

  ಮನೆದೇವ್ರು ನಟಿಗೆ ಕಂಕಣ ಭಾಗ್ಯ

  'ಮಧುಬಾಲ'. 'ಮನೆದೇವ್ರು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಅರ್ಚನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಘ್ನೇಶ್ ಶರ್ಮಾ ಎನ್ನುವವರ ಜೊತೆ ಅರ್ಚನಾ ನಿಶ್ಚಿತಾರ್ಥ ನಡೆದಿದೆ.

  ವಿವಾಹಕ್ಕೆ ಸಜ್ಜಾದ ಜೋಡಿ

  ವಿವಾಹಕ್ಕೆ ಸಜ್ಜಾದ ಜೋಡಿ

  ಸದ್ಯ ವಿಘ್ನೇಶ್ ಶರ್ಮಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಅರ್ಚನಾ ಆದಷ್ಟು ಬೇಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಘ್ನೇಶ್ ಬೆಂಗಳೂರಿನವರೇ ಆಗಿದ್ದು ನ್ಯೂಯಾರ್ಕ್ ನಲ್ಲಿ ವಾಸವಿದ್ದಾರೆ.

  ಮಿಸ್ ಕರ್ನಾಟಕ ಪಡೆದಿದ್ದ ಅರ್ಚನಾ

  ಮಿಸ್ ಕರ್ನಾಟಕ ಪಡೆದಿದ್ದ ಅರ್ಚನಾ

  ಮೈಸೂರು ಮೂಲದ ಅರ್ಚನಾ 2013ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಪಡೆದುಕೊಂಡಿದ್ದರು. ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶಗಳು ಹುಡುಕಿಕೊಂಡು ಬಂದಿತ್ತು.

  ಚೇತನ್ ಜೊತೆ ಅಭಿನಯ

  ಚೇತನ್ ಜೊತೆ ಅಭಿನಯ

  'ಮನೆದೇವ್ರು' ಧಾರಾವಾಹಿಯ ಅಭಿನಯವನ್ನು ನೋಡಿ ಅರ್ಚನಾ ಅವರನ್ನು 'ನೂರೊಂದು ನೆನಪು' ಸಿನಿಮಾದಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಮೂಲಕ ಅರ್ಚನಾ ಕನ್ನಡ ಸಿನಿಮಾರಂಗದಲ್ಲಿಯೂ ಕಾಣಿಸಿಕೊಂಡಿದ್ದರು.

  English summary
  Madhubala and Manedevru serial fame kannada actress Archana's engagement is happening recently. Archana's marriage will be held soon with Vignesh Sharma

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X