For Quick Alerts
  ALLOW NOTIFICATIONS  
  For Daily Alerts

  ಕಾಮುಕ ನಿರ್ದೇಶಕನ ಕಿರುಕುಳದಿಂದ ಬೇಸತ್ತ ನಟಿ ಆತ್ಮಹತ್ಯೆಗೆ ಯತ್ನ

  By Sony
  |

  ಸಿನಿಮಾದಲ್ಲಿ ನಾಯಕಿ ಆಗಬೇಕು ಅಂತ ಕನಸು ಕಾಣುತ್ತಾ ಬರುವ ಸಂಪ್ರದಾಯಸ್ಥ ಹೆಣ್ಣುಮಕ್ಕಳಿಗೆ, ಚಿತ್ರರಂಗ ರಣರಂಗ ಆಗುತ್ತೆ. ಕಲರ್ ಫುಲ್ ದುನಿಯಾ ಚಿತ್ರರಂಗ ಕ್ಷೇತ್ರದಲ್ಲಿ ಏನುಂಟು, ಏನಿಲ್ಲ?. ಕ್ಯಾಸ್ಟಿಂಗ್ ಕೌಚ್, ವಿವಾದ ಅಂತ ಹಾಳು-ಮೂಳು ಎಲ್ಲವೂ ಇದೆ.

  ಈ ರಂಗ್-ರಂಗೀನ್ ಪ್ರಪಂಚದಲ್ಲಿ ನಾಯಕಿಯರು ಬದುಕೋದು ಕೊಂಚ ಕಷ್ಟ. ಸ್ವಲ್ಪ ಯಾಮಾರಿದ್ರೂ ಆಪತ್ತು ಗ್ಯಾರೆಂಟಿ. 'ಬಟ್ಟೆ ಮುಳ್ಳಿಗೆ ಬಿದ್ರೂ, ಮುಳ್ಳು ಬಟ್ಟೆಗೆ ಬಿದ್ರೂ ಹಾಳಾಗೋದು ಬಟ್ಟೆನೇ' ಅನ್ನೋ ಹಾಗೆ, ಈ ಚಿತ್ರರಂಗ ಕ್ಷೇತ್ರದಲ್ಲಿ ಸ್ವಲ್ಪ ಎಡವಿದ್ರೂ ಸಮಸ್ಯೆ ಬರೋದು ಹೆಣ್ಣು ಮಕ್ಕಳಿಗೆ.[ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ]

  casting couch (ಲೈಂಗಿಕ ಕಿರುಕುಳ) ಅಂತ ಏನಿದೆಯೋ ಅದರ ಬಗ್ಗೆ ಈಗಾಗಲೇ ಹಲವು ನಟಿಯರು ಮನದಾಳ ಬಿಚ್ಚಿಟ್ಟು ತಮ್ಮ-ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತರದ ಸನ್ನಿವೇಶ ಎದುರಾದಾಗ ಕೆಲವು ಗಟ್ಟಿಗಿತ್ತಿ ನಟಿಯರು, ಕಾಂಪ್ರೊಮೈಸ್ ಆಗಿ ಎಂದವರ ಗ್ರಹಚಾರ ಬಿಡಿಸಿ ಮುಂದುವರೆದರೆ, ಇನ್ನೂ ಕೆಲವರು ತಮ್ಮ ಅಮೂಲ್ಯ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ.

  ಇದೀಗ ಇದೇ ಕೆಲಸವನ್ನು ತಮಿಳು ನಟಿಯೊಬ್ಬರು ಮಾಡಿಕೊಂಡಿದ್ದಾರೆ. ನಿರ್ದೇಶಕನ ಅಸಹ್ಯತನದಿಂದ ಬೇಸತ್ತ ನಟಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾರೆ. ಕೇರಳ ಮೂಲದ ಮುಗ್ದ ನಟಿಗೆ ನಿರ್ದೇಶಕನೊಬ್ಬ, ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಆಕೆ ತನ್ನ ಜೀವನವನ್ನೇ ಕೊನೆಗಾಣಿಸಲು ಪ್ರಯತ್ನಪಟ್ಟಿದ್ದರು. ಮುಂದೆ ಓದಿ...

  ಆತ್ಮಹತ್ಯೆಗೆ ಪ್ರಯತ್ನಿಸಿದ ತಮಿಳು ನಟಿ

  ಆತ್ಮಹತ್ಯೆಗೆ ಪ್ರಯತ್ನಿಸಿದ ತಮಿಳು ನಟಿ

  'ನೆಡುನಾಲ್ ವಾಡೈ' ಎಂಬ ತಮಿಳು ಚಿತ್ರವೊಂದು ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ನಟಿಯಾಗಿ ಮಲಯಾಳಂ ಕಿರುತೆರೆ ನಟಿ ಅತಿಥಿ ಅಲಿಯಾಸ್ ಅತಿರಾ ಸಂತೋಷ್ ಅವರು ನಟಿಸಲಿದ್ದರು. ಆದರೆ ಅದೇ ಚಿತ್ರದ ನಿರ್ದೇಶಕ ಸೆಲ್ವ ಕಣ್ಣನ್ ಅವರ ಅಸಹ್ಯ ಮನೋಭಾವದಿಂದ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ.[ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿ ಸುರ್ವಿನ್]

  ಲೈಂಗಿಕ ಕಿರುಕುಳ ನೀಡಿದ ಕಾಮುಕ ನಿರ್ದೇಶಕ

  ಲೈಂಗಿಕ ಕಿರುಕುಳ ನೀಡಿದ ಕಾಮುಕ ನಿರ್ದೇಶಕ

  ಚೊಚ್ಚಲ ನಿರ್ದೇಶಕ ಸೆಲ್ವ ಕಣ್ಣನ್ ಅವರು ಮುಗ್ದ ಹುಡುಗಿ ಅತಿರಾ ಸಂತೋಷ್ ಅವರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಅತಿರಾ ಅವರು ತಮಗಾದ ನೋವು-ದೌರ್ಜನ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರದೆ, ಆತ್ಮಹತ್ಯೆಗೆ ಪ್ರಯತ್ನಪಟ್ಟು ತಮ್ಮ ಜೀವದ ಮೇಲೆ ಕುತ್ತು ತಂದುಕೊಂಡಿದ್ದಾರೆ.['ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ]

  ಚೇತರಿಸಿಕೊಳ್ಳುತ್ತಿರುವ ನಟಿ

  ಚೇತರಿಸಿಕೊಳ್ಳುತ್ತಿರುವ ನಟಿ

  ಕಳೆದ ಕೆಲವು ದಿನಗಳ ಹಿಂದೆ ನಟಿ ಅತಿರಾ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರು. ತಕ್ಷಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಟಿಯನ್ನು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.[ನಿರ್ದೇಶಕನ ಅಸಹ್ಯತನ ಬಯಲು ಮಾಡಿದ ನಟಿ ಸುರ್ವಿನ್]

  ಮಲಯಾಳಂ ಕಿರುತೆರೆ ನಟಿ

  ಮಲಯಾಳಂ ಕಿರುತೆರೆ ನಟಿ

  ಕೇರಳ ಮೂಲದ ಖ್ಯಾತ ಕಿರುತೆರೆ ನಟಿ ಅತಿರಾ ಸಂತೋಷ್ ಅವರು Mazhavil Manorama ಎಂಬ ಮಲಯಾಳಂ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ದತ್ತುಪುತ್ರಿ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಮಾತ್ರವಲ್ಲದೇ ಇವರು ಖ್ಯಾತ ನೃತ್ಯಗಾತಿ ಕೂಡ ಹೌದು. ಈ ಧಾರಾವಾಹಿ ಮೂಲಕ ಎಲ್ಲೆಡೆ ಖ್ಯಾತಿಯಾಗಿದ್ದರು.

  English summary
  Actress Athithi from Kerala, also known as Athira Santosh, recently attempted suicide by consuming poison. She has alleged that she took the extreme step because of the sexual harassment she faced at the hands of director Selva Kannan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X