For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ನಟಿ ಭಾವನಾ ಸಂದರ್ಶನ

  By ಗಿರೀಶ್ ಕವಚೂರ್
  |

  ವಿಧಾನಸಭೆ ಚುನಾವಣೆ ಇನ್ನು ಕೇವಲ ಒಂದು ತಿಂಗಳು ಉಳಿದಿರುವಂತೆ, ಟಿಕೆಟ್ ಹಂಚಿಕೆ ಜಟಿಲಗೊಳ್ಳುವುದರ ಜೊತೆಗೆ ತೀವ್ರಗೊಳ್ಳುತ್ತಿದೆ. ಟಿಕೆಟ್ ಸಿಕ್ಕಕೂಡಲೆ ಪ್ರಚಾರಕ್ಕೆ ತೆರಳಲು ಆಕಾಂಕ್ಷಿಗಳು ಕುದುರೆಯಂತೆ ಕೆನೆದಾಡುತ್ತಿದ್ದಾರೆ. ಟಿಕೆಟ್ ಸಿಕ್ಕಿರುವುದು ಖಾತ್ರಿಯಾಗುತ್ತಿದ್ದಂತೆ ಪ್ರಚಾರದ ಭರಾಟೆ ವೇಗ ಪಡೆದುಕೊಳ್ಳಲಿದೆ. ಈ ನಡುವೆ, ಎಲ್ಲ ಪಕ್ಷಗಳು ಸಿನೆಮಾ ತಾರೆಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಏ.5ರಂದು ಪಟ್ಟಿ ಪ್ರಕಟಿಸಲಿರುವ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ.

  ಚುನಾವಣೆಗೆ ಕಾಂಗ್ರೆಸ್ ನಾಲ್ವರು ಸ್ಟಾರ್ ಕ್ಯಾಂಪೇನರ್ ಗಳಿಂದ ಪ್ರಚಾರ ನಡೆಸಲಿದೆ. ಸಿನಿ ತಾರೆಯರಾದ ಅಂಬರೀಷ್, ದರ್ಶನ್, ರಮ್ಯಾ ಹಾಗೂ 'ಭಾಗೀರತಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಭಾವನಾ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸ್ತಾರೆ.

  ಅಂದ ಹಾಗೆ, ಭಾವನಾ ಸಕ್ರಿಯ ರಾಜಕೀಯಕ್ಕೆ ಈಗಲೇ ಬರಲು ಅಷ್ಟೊಂದು ತಲೆಕೆಡಿಸಿಕೊಂಡಿಲ್ವಂತೆ. ಪಕ್ಷದ ಪರವಾಗಿ ಪ್ರಚಾರಕ್ಕೆ ಮಾತ್ರ ತಮ್ಮನ್ನ ತಾವು ಸೀಮಿತಗೊಳಿಸಿಕೊಂಡಿದ್ದಾರೆ. ಇಂಥವರು ಸಿಗುವುದು ಬಲು ಅಪರೂಪ! ಕಾಂಗ್ರೆಸ್ ಪ್ರಚಾರ ಸಮಿತಿಯ ಸದಸ್ಯರು ಆಗಿರುವ ಭಾವನಾ ಏನ್ ಹೇಳ್ತಾರೆ ಇಲ್ಲಿದೆ ನೋಡಿ.

  ಕಾಂಗ್ರೆಸ್ ಪಕ್ಷವನ್ನ ನೀವು ಹೇಗೆ ಸ್ವೀಕರಿಸ್ತೀರಾ?

  ಕಾಂಗ್ರೆಸ್ ಪಕ್ಷವನ್ನ ನೀವು ಹೇಗೆ ಸ್ವೀಕರಿಸ್ತೀರಾ?

  ನಾನು ಕಾಂಗ್ರೆಸ್ ಸ್ವೀಕರಿಸೋದಕ್ಕಿಂತ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ನನ್ನನ್ನ ಸ್ವೀಕರಿಸಿದ್ದು ನನಗೆ ಖುಷಿ ಕೊಟ್ಟಿದೆ. ಒಂದು ದೊಡ್ಡ ಪಕ್ಷದಲ್ಲಿ ನನ್ನನ್ನು ಪ್ರಚಾರಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿಯಲ್ಲಿ ನಾನು ಒರ್ವ ಸದಸ್ಯೆ ಆಗಿದ್ದೇನೆ. ಪಕ್ಷ ಹೇಗೆ ಬಳಸಿಕೊಳ್ಳುತ್ತದೆಯೋ ಹಾಗೆ ಕೆಲಸ ಮಾಡ್ತೆನೆ.

  ಅಭ್ಯರ್ಥಿ ಆಗದೇ ಬರೀ ಪ್ರಚಾರಕ್ಕೆ ಸೀಮಿತರಾಗಿದ್ದೀರಾ?

  ಅಭ್ಯರ್ಥಿ ಆಗದೇ ಬರೀ ಪ್ರಚಾರಕ್ಕೆ ಸೀಮಿತರಾಗಿದ್ದೀರಾ?

  ಹೌದು. ನಾನು ಇನ್ನೂ ಅಭ್ಯರ್ಥಿ ಆಗುವಷ್ಟು ಪಕ್ಷದಲ್ಲಿ ಬೆಳೆದಿಲ್ಲ. ಆದ್ರೆ ಅಭ್ಯರ್ಥಿಗಳಿಗೆ ನನ್ನ ಸಪೋರ್ಟ್ ಬೇಕು. ಪಕ್ಷ ನನ್ನನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಚುನಾವಣೆ ಸಂದರ್ಭದಲ್ಲಿ ನನಗೆ ಈ ಅವಕಾಶ ಹೊಸ ಅನುಭವವನ್ನ ನೀಡುತ್ತೆ. ನಾನು ಕಳೆದ ಬಾರಿಯ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಈಗ ಮತ್ತೆ ಪಕ್ಷಕ್ಕೆ ಈ ಮೂಲಕ ನಾನು ಸೇವೆ ಸಲ್ಲಿಸಲು ಸಾಧ್ಯವಾಗ್ತಿದೆ.

  ಸಿನಿಮಾ ನಟಿಯಿಂದ ರಾಜಕಾರಣಿ ಆಗ್ತಿದ್ದೀರಾ.

  ಸಿನಿಮಾ ನಟಿಯಿಂದ ರಾಜಕಾರಣಿ ಆಗ್ತಿದ್ದೀರಾ.

  ರಾಜಕಾರಣಿ ಆಗೋದು ತುಂಬಾನೆ ಕಷ್ಟ. ಮುಂದೊಂದು ದಿನ ಅಭ್ಯರ್ಥಿ ಆಗೋ ಅವಕಾಶ ಸಿಗಬಹುದು ಅನ್ನೋ ಸಾಮಾನ್ಯ ನಿರೀಕ್ಷೆಯಲ್ಲಿದ್ದೇನೆ. ಅದೊಂಥರ ನನಗೆ ಅವಾರ್ಡ್ ಬಂದಹಾಗೆ. ನಾನು ನಿರೀಕ್ಷೆ ಮಾಡದೆ ನನ್ನ ನನ್ನ ನಟನೆಗೆ ಒಮ್ಮೊಮ್ಮೆ ಅವಾರ್ಡ್ ಬಂದಾಗ ನನಗೆ ಖುಷಿ ಆಗುತ್ತಲ್ಲ ಹಾಗೆ. ರಾಜಕಾರಣಿ ಆಗಬೇಕು ಅನ್ನೋ ಆಸೆ ನನಗಿಲ್ಲ. ನಾನು ಒರ್ವ ಜನಪ್ರತಿನಿಧಿಯಾಗಿ ಇರಲು ಇಷ್ಟಪಡ್ತೇನೆ.

  224 ಕ್ಷೇತ್ರದಲ್ಲೂ ತಿರುಗಾಡ್ತೀರಾ?

  224 ಕ್ಷೇತ್ರದಲ್ಲೂ ತಿರುಗಾಡ್ತೀರಾ?

  ಆಗಲ್ಲ. ಇದು ಸಹಜ ಕೂಡಾ. ಯಾವ ಯಾವ ಕ್ಷೇತ್ರಗಳಲ್ಲಿ ಅಲ್ಲಿಯ ಜನರ ಭಾವನೆ, ಜನ ಯಾರನ್ನ ಬಯಸ್ತಾರೆ ಅಲ್ಲಿಯ ಸ್ಥಳೀಯ ಮುಖಂಡರ ಅಭಿಪ್ರಾಯದ ಮೇರೆಗೆ ಪ್ರಚಾರಕರನ್ನ ಪಕ್ಷ ಬಳಸಿಕೊಳ್ಳುತ್ತೆ. ನನಗೆ ಪಕ್ಷ ಎಲ್ಲಿ ಪ್ರಚಾರ ಮಾಡಲು ಹೇಳುತ್ತೋ ಅಲ್ಲಿ ಶ್ರದ್ಧೆಯಿಂದ ಕೆಲಸ ಮಾಡ್ತೇನೆ.

  ನಿಮಗೆ ಯಾವ ಕ್ಷೇತ್ರ ಇಷ್ಟ?

  ನಿಮಗೆ ಯಾವ ಕ್ಷೇತ್ರ ಇಷ್ಟ?

  ಹಾಗೇನಿಲ್ಲ. ನನಗೆ ಎಲ್ಲಿ ಆದ್ರೂ ಸರಿ. ಇಡೀ ಕರ್ನಾಟಕವೇ ನನ್ನ ಮನೆ.

  ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

  English summary
  Karnataka assembly election : Kannada movie Chandramukhi Pranasakhi fame actress Bhavana has joined the bandwagon as Congress star campaigner. Bhavana just want to be campaigner rather than contesting in election. She shares her join in the interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X