For Quick Alerts
  ALLOW NOTIFICATIONS  
  For Daily Alerts

  ಹಸೆಮಣೆ ಏರಿದ ಖ್ಯಾತ ನಟಿ 'ಜಾಕಿ' ಭಾವನಾ

  By Pavithra
  |
  ಹಸೆಮಣೆ ಏರಿದ ಖ್ಯಾತ ನಟಿ 'ಜಾಕಿ' ಭಾವನಾ ! | Filmibeat Kannada

  ಮಲೆಯಾಳಂ ಹಾಗೂ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಭಾವನಾ ಇಂದು ನಿರ್ಮಾಪಕ ನವೀನ್ ಜೊತೆಯಲ್ಲಿ ಸಪ್ತಪದಿ ತುಳಿದಿದ್ದಾರೆ. ಗಣೇಶ್ ಅಭಿನಯದ ರೋಮಿಯೋ ಸಿನಿಮಾದಲ್ಲಿ ಭಾವನಾ ಅಭಿನಯಿಸಿದ್ದರು. ಆ ಸಮಯದಲ್ಲಿ ನವೀನ್ ಅವರ ಪರಿಚಯವಾಗಿತ್ತು. ಸುಮಾರು ಆರು ವರ್ಷಗಳಿಂದ ಪ್ರೇಮಿಗಳಾಗಿದ್ದ ನವೀನ್ ಹಾಗೂ ಭಾವನಾ ಇಂದು(ಜ.22) ಗೃಹಸ್ಥಾಶ್ರಮಕ್ಕೆ ಕಾಲಿಟಿದ್ದಾರೆ.

  ಭಾವನಾ ಕೇರಳ ಮೂಲದವರು ಆಗಿರುವುದರಿಂದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ನಡೆದಿದೆ. ಸರಳವಾಗಿ ವಿವಾಹವನ್ನು ಮಾಡಿಕೊಂಡಿರುವ ಈ ಜೋಡಿ ಮಲೆಯಾಳಂ ಚಿತ್ರೋದ್ಯಮದ ಸ್ನೇಹಿತರಿಗೆ ಮತ್ತು ಗಣ್ಯರಿಗಾಗಿ ಆರತಕ್ಷತೆಯನ್ನೂ ಆಯೋಜನೆ ಮಾಡಿದ್ದಾರೆ.

  ಮದುವೆಯ ಮೆಹೆಂದಿ ಸಂಭ್ರಮದಲ್ಲಿ ನಟಿ ಜಾಕಿ ಭಾವನಾ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾವನಾ ಮದುವೆಗಾಗಿ ಹೇಗೆ ಸಿಂಗಾರ ಮಾಡಿಕೊಂಡಿದ್ದರು? ಖ್ಯಾತ ನಟಿಯ ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು? ಸಂಪೂರ್ಣ ಮಾಗಿತಿ ಇಲ್ಲಿದೆ. ಮುಂದೆ ಓದಿ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಾಕಿ ಭಾವನಾ

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಾಕಿ ಭಾವನಾ

  ಕನ್ನಡ ಸಿನಿಮಾರಂಗದಲ್ಲಿ ಜಾಕಿ, ಬಚ್ಚನ್, ರೋಮಿಯೋ, ವಿಷ್ಣುವರ್ಧನ ಸಿನಿಮಾ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸಿಗೆ ಹತ್ತಿರವಾಗಿದ್ದ ನಟಿ ಭಾವನಾ ಅವರ ಮದುವೆ ಇಂದು ಕೇರಳದಲ್ಲಿ ನಡೆದಿದೆ. ಬೆಳ್ಳಿಗ್ಗೆ 9 ಗಂಟೆಯಲ್ಲಿ ನವೀನ್ ಹಾಗೂ ಭಾವನಾ ಸಪ್ತಪದಿ ತುಳಿದಿದ್ದಾರೆ.

  ಶ್ರೀಕೃಷ್ಣನ ಸನ್ನಿಧಾನದಲ್ಲಿ ಸರಳ ವಿವಾಹ

  ಶ್ರೀಕೃಷ್ಣನ ಸನ್ನಿಧಾನದಲ್ಲಿ ಸರಳ ವಿವಾಹ

  ಕೇರಳದ ತಿರುವಂಬಾಡಿ ಶ್ರೀಕೃಷ್ಣನ ದೇವಾಲಯದಲ್ಲಿ ಭಾವನಾ ಮತ್ತು ನವೀನ್ ಮದುವೆ ನಡೆದಿದೆ. ಇಬ್ಬರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಸರಳ ವಿವಾಹವಾಗಿ ತಮ್ಮ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.

  ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಭಾವನಾ

  ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಭಾವನಾ

  ಮದುವೆಯ ಮಹೂರ್ತದಲ್ಲಿ ನಟಿ ಭಾವನಾ ರೇಷ್ಮೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೃಷ್ಣನ ಎಂಬ್ರಾಯಿಡರಿ ಇರುವ ಸೀರೆಯಲ್ಲಿ ಭಾವನಾ ಮಿಂಚಿದ್ರೆ ನವೀನ್ ಬಿಳಿ ಪಂಚೆ ಶಲ್ಯ ಹಾಕಿ ಮದುಮಗನಾಗಿದ್ದರು.

  ಭಾವನಾ-ನವೀನ್ ಕುಟುಂಬಸ್ಥರಿಗೆ ಆಹ್ವಾನ

  ಭಾವನಾ-ನವೀನ್ ಕುಟುಂಬಸ್ಥರಿಗೆ ಆಹ್ವಾನ

  ಭಾವನಾ ಹಾಗೂ ನವೀನ್ ಮದುವೆಯಲ್ಲಿ ಕೇವಲ ಸಂಬಂಧಿಕರು ಮಾತ್ರ ಭಾಗಿಯಾಗಿದ್ದಾರೆ. ಸಿನಿಮಾರಂಗದಲ್ಲಿ ತುಂಬಾ ಆಪ್ತರನ್ನ ಮದುವೆ ಮಹೂರ್ತಕ್ಕೆ ಆಹ್ವಾನ ಮಾಡಲಾಗಿದೆ. ಅಭಿಮಾನಿಗಳಿಗೆ ಮತ್ತು ಚಿತ್ರರಂದ ಗಣ್ಯರಿಗಾಗಿ ಫೆಬ್ರವರಿ 4ರಂದು ಅದ್ಧೂರಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ ನವೀನ್ ಮತ್ತು ಭಾವನಾ.

  English summary
  Kannada and Malayalam Actress Bhavana got married today (Jan 22nd) to her longtime friend, Producer Naveen at Sri Krishna Temple in Kerala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X