»   » ಕಾಕ್ಸ್ ಟೌನ್ ಸ್ಮಶಾನದಲ್ಲಿ ಭಾವನಾ ಐಟಂ ನಂಬರ್

ಕಾಕ್ಸ್ ಟೌನ್ ಸ್ಮಶಾನದಲ್ಲಿ ಭಾವನಾ ಐಟಂ ನಂಬರ್

Posted By:
Subscribe to Filmibeat Kannada

ಒಂದು ಐಟಂ ಸಾಂಗನ್ನು ಎಲ್ಲೆಲ್ಲೋ ತೆಗೆದ ಉದಾಹರಣೆಗಳಿವೆ. ಬಾರು, ಪಾರ್ಕು, ಕ್ಲಬ್ಬು, ಪಬ್ಬು, ಬಯಲು...ಹೀಗೆ. ಆದರೆ ಸ್ಮಶಾನದಲ್ಲಿ ಐಟಂ ಸಾಂಗ್ ತೆಗೆದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನಲು ದಾಖಲೆಗಳಿಲ್ಲ. ಅಲ್ಲೆಲ್ಲಾ ತೆಗೆದಿರುವುದು "ತಂಗಾಳಿಯಲ್ಲಿ ನಾನು ತೇಲಿ ಬಂದೆ..ಓ ಇನಿಯಾ" ಎಂಬ ದೆವ್ವ, ಪಿಶಾಚಿಯೊಂದಿಗಿನ ಹಾಡುಗಳು.

ಈಗ ಡೈಮಂಡ್ ಸ್ಟಾರ್ ಶ್ರೀನಗರಕಿಟ್ಟಿ ಮುಖ್ಯಭೂಮಿಕೆಯಲ್ಲಿರುವ 'ಬಹುಪರಾಕ್' ಚಿತ್ರಕ್ಕಾಗಿ ಭಾವನಾ ರಾವ್ ಸೊಂಟ ಬಳುಕಿಸಿದ್ದಾರೆ. ಈ ಮೂಲಕ ಐಟಂ ಹಾಡಿಗೆ ಭಾವನಾ ರಾವ್ ಹೊಸ ಸೇರ್ಪಡೆ. ಈ ಹಾಡನ್ನು ಕಾಕ್ಸ್ ಟೌನ್ ಬಳಿ ಇರುವ ಸ್ಮಶಾನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. [ನಾಯಕಿ ಎದೆಗೇ ಕೈಹಾಕಿದ 'ಬಹುಪರಾಕ್' ನಾಯಕ]

ಐಟಂ ಹಾಡಿನ ಸಾಹಿತ್ಯವನ್ನು ಬರೆದವರು ಚಿತ್ರದ ನಿರ್ದೇಶಕರು ಸುನಿ. "ಸಾಂಗ್ ಬೇಕಾ ಐಟಂ ಸಾಂಗ್..." ಎಂದು ಸಾಗುವ ಹಾಡಿಗೆ ಭಾವನಾ ತಮ್ಮ ಮೈಮಾಟ ತೋರಿಸಿದ್ದಾರೆ. ಗಾಳಿಪಟ, ವಾರೆವ್ಹಾ ಚಿತ್ರಗಳಲ್ಲಿ ಅಭಿನಯಿಸಿದ್ದ ಭಾವನಾ ರಾವ್ ಇದೀಗ ಐಟಂ ಲೋಕಕ್ಕೆ ಲಗ್ಗೆ ಹಾಕಿದ್ದಾರೆ. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು...

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ತಂಡ ಪ್ರಯೋಗ

ಇನ್ನು ಬಹುಪರಾಕ್ ಚಿತ್ರದ ವಿಚಾರಕ್ಕೆ ಬಂದರೆ, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರತಂಡದ ಮತ್ತೊಂದು ಪ್ರಯೋಗ. ಇಲ್ಲೂ ಡೈಲಾಗ್ ಗಳೇ ಚಿತ್ರದ ಪ್ರಮುಖ ಆಕರ್ಷಣೆ. 'ಸಿಂಪಾಲ್ಲಾಗ್ ಒಂದ್ ಲವ್ ಸ್ಟೋರಿ'ಯ ಹೀರೋ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ.

ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರದು ಅತಿಥಿ ಪಾತ್ರ

ಈಗಾಗಲೆ ಬಹುಪರಾಕ್ ಚಿತ್ರೀಕರಣ ಭರದಿಂದ ಸಾಗಿದೆ. ವಿಶೇಷ ಎಂದರೆ ಸಿಂಪಲ್ಲಾಗ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಇಲ್ಲಿ ರಕ್ಷಿತ್ ಅವರದು ಅತಿಥಿ ಪಾತ್ರ. ಭರತ್ ಬಿಜೆ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ 'ಬಹುಪರಾಕ್' ಚಿತ್ರಕ್ಕಿದೆ.

ಕಥನ, ರಚನ, ವಚನ, ಗೀತರಚನ, ನಿರ್ದೇಶನ ಸುನಿ

'ಬಹುಪರಾಕ್' ಚಿತ್ರದ ನಾಯಕಿ ಮೇಘನಾ ರಾಜ್. ಈ ಚಿತ್ರಕ್ಕೆ 'ಕನ್ನಡ ಪ್ರಭ' ಸಿನಿಮಾ ಪತ್ರಕರ್ತ ಹರಿ ಅವರ ಸಂಭಾಷಣೆ ಇದೆ. ಹೇಮಂತ್ ಹಾಗೂ ಸುರೇಶ್ ಬೈರಸಂದ್ರ ಚಿತ್ರದ ನಿರ್ಮಾಪಕರು. ಕಥನ, ರಚನ, ವಚನ, ಗೀತರಚನ, ನಿರ್ದೇಶನ ಸುನಿ.

ತಿರುವೂ ಇಲ್ಲ ಮರುವೂ ಇಲ್ಲ

'ಗಾಳಿಪಟ' ಚಿತ್ರದಲ್ಲಿ ರಾಜೇಶ್ ಕೃಷ್ಣನ್ ರನ್ನು ಸಾಕಷ್ಟು ಗೋಳುಹೊಯ್ದುಕೊಳ್ಳುವ ಪಾತ್ರವನ್ನು ಭಾವನಾ ರಾವ್ ಪೋಷಿಸಿದ್ದರು. ಆ ಬಳಿಕ ಅವರ ಯಾವುದೇ ಚಿತ್ರಗಳು ಸದ್ದು ಮಾಡಲಿಲ್ಲ. ಸವಾಲಿನ ಪಾತ್ರಗಳು ಸಿಗಲಿಲ್ಲ, ಮಾಡಿದ ಚಿತ್ರಗಳೂ ತಿರುವು, ಮರುವು ನೀಡಲಿಲ್ಲ.

ಇನ್ನಾದರೂ ಭಾವನಾ ವೃತ್ತಿ ಗ್ರಾಫ್ ಮೇಲೇಳುತ್ತಾ?

ಒಂದಷ್ಟು ದಿನ ತಮಿಳು ಚಿತ್ರಗಳಲ್ಲಿ ಅಭಿನಯಿಸಿದರೂ ಲಾಭವಾಗಲಿಲ್ಲ. ಈಗ ಕಡೆಗೆ ಐಟಂ ಸಾಂಗ್ ಗೂ ತಮ್ಮ ಸೊಂಟ ಕೊಟ್ಟಿದ್ದಾರೆ. ಇನ್ನಾದರೂ ಭಾವನಾ ವೃತ್ತಿ ಗ್ರಾಫ್ ಮೇಲೇಳಲಿದೆ.

English summary
Kannada actress Bhavana Rao finally steps into item number in Srinagara Kitty lead movie Bahuparak. The song shot in cox town Cremation ground. Diamond Star Srinaga Kitty forthcoming movie Bahuparak directed by Simple aag Ondu Love Story famed director, Suni.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada