ಡ್ರಗ್ಸ್ ಮಾಫಿಯಾ ವಿಚಾರಣೆಗೆ ಮುಂಚೆಯೇ ಹೈ ಕೋರ್ಟ್ ಮೆಟ್ಟಿಲೇರಿದೆ ನಟಿ ಚಾರ್ಮಿ
ಟಾಲಿವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ಚಾರ್ಮಿ ಕೌರ್ ಹೆಸರು ಕೇಳಿ ಬಂದಿದ್ದು, ಜುಲೈ 26ರಂದು ವಿಚಾರಣೆ ಎದುರಿಸಬೇಕಾಗಿದೆ. ಆದ್ರೆ, ಅಷ್ಟರೊಳಗೆ ಚಾರ್ಮಿ ಕೌರ್ ಹೈ ಕೋರ್ಟ್ ಮೆಟ್ಟಿಲೇರಿದ್ದು, ವಿಶೇಷ ತನಿಖಾ ತಂಡದ (Special Investigation Team) ವಿಚಾರಣ ಶೈಲಿಯನ್ನ ಖಂಡಿಸಿದ್ದಾರೆ
ತನಿಖಾ ಅಧಿಕಾರಿಗಳ ವಿಚಾರಣೆ ರೀತಿ ಸರಿ ಇಲ್ಲ. ಅಧಿಕಾರಿಗಳ ವಿಚಾರಣೆ ಬಗ್ಗೆ ತಮಗೆ ಹಲವು ಅನುಮಾನಗಳಿವೆ. ವಿಚಾರಣೆಗೆ ಹಾಜರಾಗುವವರ ಕೂದಲು, ಉಗುರು, ರಕ್ತವನ್ನು ಬಲವಂತವಾಗಿ ಸಂಗ್ರಹಿಸಲಾಗುತ್ತಿದೆ. ಇದು ಸಂವಿಧಾನ ಬಾಹಿರ ಎಂದು ಚಾರ್ಮಿ ಪಿಟಿಷನ್ ಸಲ್ಲಿಸಿದ್ದಾರೆ.

ಅಷ್ಟೆ ಅಲ್ಲದೇ, ವಿಚಾರಣೆ ವೇಳೆ ಕುಟುಂಬದವರು ಜೊತೆಗಿರಲು ಅವಕಾಶವಿಲ್ಲ. ಆದ್ದರಿಂದ ತಮ್ಮೊಂದಿಗೆ ತಮ್ಮ ವಕೀಲರು ಇರಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಆದೇಶ ಮಾಡಬೇಕು ಎಂದು ಚಾರ್ಮಿ ಮನವಿ ಮಾಡಿದ್ದಾರೆ.
ಈ ಮಧ್ಯೆ ಚಾರ್ಮಿ ಮಹಿಳೆ ಎನ್ನುವ ಕಾರಣಕ್ಕೆ SIT (Special Investigation Team) ಕಚೇರಿಗೆ ಬರುವ ಅವಶ್ಯಕತೆಯಿಲ್ಲ. ಚಾರ್ಮಿ ಸೂಚಿಸಿದ ಸ್ಥಳದಲ್ಲಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧ ಎಂದಿದ್ದಾರೆ. ಆದರೆ ಚಾರ್ಮಿ SIT (Special Investigation Team) ಕಚೇರಿಗೆ ಬರುವುದಾಗಿ ತಿಳಿಸಿದ್ದಾರಂತೆ.


Click it and Unblock the Notifications











