»   » ತ್ರಿಷಾ ಕೃಷ್ಣನ್ ಮದುವೆಯಲ್ಲಿ ಪಡುವಾರಳ್ಳಿ ಪಾಂಚಾಲಿ

ತ್ರಿಷಾ ಕೃಷ್ಣನ್ ಮದುವೆಯಲ್ಲಿ ಪಡುವಾರಳ್ಳಿ ಪಾಂಚಾಲಿ

Posted By:
Subscribe to Filmibeat Kannada

ನಟಿ ತ್ರಿಷಾ ಕೃಷ್ಣನ್ ಮದುವೆ ದಿನಾಂಕ ಇನ್ನೂ ನಿಗದಿಯಾಗದಿದ್ದರೂ ವಿವಾಹ ಪೂರ್ವದ ಸಿದ್ಧತೆಗಳಂತೂ ಜೋರಾಗಿ ನಡೆಯುತ್ತಿವೆ. ಜನವರಿ 23ರಂದು ಉದ್ಯಮಿ ವರುಣ್ ಮಣಿಯನ್ ಜೊತೆ ಅವರ ನಿಶ್ಚಿತಾರ್ಥ ನೆರವೇರಿದ್ದು ಇದೀಗ ಮದುವೆ ತಯಾರಿ ಭರದಿಂದ ಸಾಗಿವೆ.

ಇದರ ಮೊದಲ ಭಾಗವೇ ಪಡುವಾರಳ್ಳಿ ಪಾಂಚಾಲಿ ಡಾನ್ಸ್ ಶೋ. ಯಾರಿದು ಪಡುವಾರಳ್ಳಿ ಪಾಂಚಾಲಿ ಅಂತಿದ್ದೀರಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಯಾರೇ ಕೂಗಾಡಲಿ' ಚಿತ್ರದಲ್ಲಿ "ನಾನು ಪಡುವಾರಳ್ಳಿ ಪಾಂಚಾಲಿ..." ಎಂದು ಸೊಂಟ ಕುಣಿಸಿದ್ದ ಚಾರ್ಮಿ ಕೌರ್ ಸ್ಟೆಪ್ ಹಾಕಲಿದ್ದಾರೆ ತ್ರಿಷಾ ಮದುವೆಯಲ್ಲಿ. [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]


Actress Charmi Kaur to perform in Trisha Marriage

ತ್ರಿಷಾ ಕೃಷ್ಣನ್ ಹಾಗೂ ಚಾರ್ಮಿ ಕೌರ್ ಆತ್ಮೀಯ ಸ್ನೇಹಿತರು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತ್ರಿಷಾ ಆಹ್ವಾನಿಸಿದ್ದ ಕೆಲವೇ ಕೆಲವು ಆತ್ಮೀಯರಲ್ಲಿ ಚಾರ್ಮಿ ಕೌರ್ ಸಹ ಇದ್ದರು. ಮದುವೆಯಲ್ಲೂ ಚಾರ್ಮಿ ಕೌರ್ ಭಾಗಿಯಾಗಲಿದ್ದು ಭರ್ಜರಿ ಮನರಂಜನೆ ನೀಡಲಿದ್ದಾರೆ ಎನ್ನುತ್ತವೆ ಮೂಲಗಳು.


ಶೀಘ್ರದಲ್ಲೇ ತ್ರಿಷಾ ಅವರು ತಮ್ಮ ಮದುವೆ ದಿನಾಂಕವನ್ನು ಪ್ರಕಟಿಸಲಿದ್ದಾರಂತೆ. ಇನ್ನು ಚಾರ್ಮಿ ಕೌರ್ ಸಹ ಅಷ್ಟೇ ಮದುವೆ ಮನೆಯಲ್ಲಿ ಕುಣಿಯಲು ಈಗಾಗಲೆ ತಾಲೀಮು ಶುರುಹಚ್ಚಿಕೊಂಡಿದ್ದಾರಂತೆ.


ಚಾರ್ಮಿ ಕೌರ್ ಹೇಳಿಕೇಳಿ ಡಾನ್ಸಿಂಗ್ ಸ್ಟಾರ್. ಕನ್ನಡದ ಲವಕುಶ, ದೇವ್ ಸನ್ ಆಫ್ ಮುದ್ದೇಗೌಡ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತ್ರಿಷಾ ನಿಶ್ಚಿತಾರ್ಥ ಸರಳ ಸುಂದರವಾಗಿ ನಡೆದಿದ್ದರೂ ಮದುವೆ ಮಾತ್ರ ಅದ್ದೂರಿಯಾಗಿ ನಡೆಯಲಿದೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
The latest buzz is that Charmi Kaur is going to dance in Trisha Krishna's marriage event. Trisha got engaged with Varun Mainan recently and the marriage date is not yet fixed, soon Trisha is going announce officially about her wedding date.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada