»   » 'ಕನ್ನಡಕ್ಕೆ ನಾನು ಹೊಸಬಳು ಅನ್ನೋ ಭಾವನೆ ಮೂಡಲಿಲ್ಲ': ದೀಕ್ಷಾ

'ಕನ್ನಡಕ್ಕೆ ನಾನು ಹೊಸಬಳು ಅನ್ನೋ ಭಾವನೆ ಮೂಡಲಿಲ್ಲ': ದೀಕ್ಷಾ

Posted By:
Subscribe to Filmibeat Kannada

ದರ್ಶನ್ ಅವರ 'ಜಗ್ಗುದಾದಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ 'ಮಿರಪಕಾಯ್', 'ರೆಬೆಲ್' ಖ್ಯಾತಿಯ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರಿಗೆ ಕನ್ನಡ ಭಾಷೆ ತೊಡಕು ಅಂತ ಅನಿಸಲೇ ಇಲ್ವಂತೆ.

ಬಹಳ ಆತ್ಮವಿಶ್ವಾಸದಿಂದ ನಟಿಸಿರುವ ನಟಿ ದೀಕ್ಷಾ ಸೇಠ್ ಅವರು ತಮ್ಮ ಚೊಚ್ಚಲ ಕನ್ನಡ ಚಿತ್ರದ ಬಗ್ಗೆ ಬಹಳ ಕುತೂಹಲ ಇಟ್ಟುಕೊಂಡಿದ್ದಾರೆ.['ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?]


Actress Deeksha Seth speaks about her kannada debut 'Jaggu Dada'

'ಜಗ್ಗುದಾದಾ' ಚಿತ್ರಕ್ಕೂ ಮೊದಲು ನನಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಲು ಅವಕಾಶ ಒದಗಿ ಬಂದಿತ್ತು. ಆದರೆ ಅವುಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ಈ ಸಿನಿಮಾದಲ್ಲಿ ನನಗೆ ನಟಿಸಲು ಕೇಳಿಕೊಂಡಾಗ ಒಪ್ಪಿಕೊಂಡೆ. ಯಾಕೆಂದರೆ ಇದು ಪಕ್ಕಾ ಕೌಟುಂಬಿಕ ಜೊತೆಗೆ ಕೊಂಚ ಮಾಸ್ ಟಚ್ ಇರೋ ಸಿನಿಮಾ'. ಎನ್ನುತ್ತಾರೆ ನಟಿ ದೀಕ್ಷಾ ಅವರು.[ಟ್ರೈಲರ್: ಸಿಂಹದಂತೆ ಘರ್ಜಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್]


Actress Deeksha Seth speaks about her kannada debut 'Jaggu Dada'

'ನಟ ದರ್ಶನ್ ಅವರ ಜೊತೆ ಕೂಡ ತುಂಬಾ ಹೊಂದಾಣಿಕೆ ಮಾಡಿಕೊಂಡು ನಟಿಸಲು ನನಗೆ ಸಾಧ್ಯ ಆಯಿತು. ಶೂಟಿಂಗ್ ಸೆಟ್ ನಲ್ಲಿ ನನಗೆ ದರ್ಶನ್ ಅವರು ತುಂಬಾನೇ ಸಹಾಯ ಮಾಡಿದರು' ಎಂದು ದೀಕ್ಷಾ ಸೇಠ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.[ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!]


ಇದೇ ತಿಂಗಳು 'ಜಗ್ಗುದಾದಾ' ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣಲಿದ್ದು, ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಖಳನಟ ರವಿಶಂಕರ್, ನಟ ಸೃಜನ್ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಮಂದಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

English summary
South Indian actress Deeksha Seth is making with her first debut Kannada movie 'Jaggu Dada'. Actress Deeksha Seth says she is confident about her pick after having seen the final product. Kannada Actor Darshan in the lead role. The movie is directed by Raghavendra Hegde.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X