»   » ಪ್ರೇಮಿಗಳ ದಿನಕ್ಕೆ 'ಹುಲಿರಾಯ'ನ ಹುಡುಗಿ ದಿವ್ಯ ಕೊಡ್ತಾರೆ ಗಿಫ್ಟ್

ಪ್ರೇಮಿಗಳ ದಿನಕ್ಕೆ 'ಹುಲಿರಾಯ'ನ ಹುಡುಗಿ ದಿವ್ಯ ಕೊಡ್ತಾರೆ ಗಿಫ್ಟ್

Posted By:
Subscribe to Filmibeat Kannada

'ಹುಲಿರಾಯ' ಸಿನಿಮಾದಲ್ಲಿ ನಟಿಸಿದ್ದ ದಿವ್ಯ ಉರುಡುಗ ಈಗ ಸಿಕ್ಕಾಪಟ್ಟೆ ಬಿಜಿ ಆಗಿದ್ದಾರೆ. 'ಧ್ವಜ', 'ಫೇಸ್ ಟು ಫೇಸ್' ಸಿನಿಮಾದಲ್ಲಿ ನಟಿಸುತ್ತಿರುವ ದಿವ್ಯಗೆ ಮತ್ತೊಂದು ಸಿನಿಮಾ ಅವಕಾಶ ಸಿಕ್ಕಿದೆ. ಸದ್ಯ 'ಜೋರು' ಎಂಬ ಹೊಸ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

'ಜೋರು' ಪೊದಲಿ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾವಾಗಿದೆ. ಅನಿಲ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಧನುಷ್ ಸಿನಿಮಾದ ನಾಯಕನಾಗಿದ್ದಾರೆ. ಈ ಸಿನಿಮಾದ ನಾಯಕಿಯಾಗಿ ದಿವ್ಯ ಆಯ್ಕೆ ಆಗಿದ್ದು, ಪಕ್ಕದ ಮನೆ ಹುಡುಗಿ ರೀತಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

Actress Divya Uruduga next movie titeld as Joru

ಈಗಾಗಲೇ ಸಿನಿಮಾದ ಟೀಸರ್ ಶೂಟಿಂಗ್ ಮುಗಿದಿದೆ. ಅಲ್ಲದೆ ಚಿತ್ರದ ಟೀಸರ್ ಅನ್ನು ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆ ಮಾಡುವ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ. ಸೋ, ಅಭಿಮಾನಿಗಳಿಗೆ ದಿವ್ಯ ಕಡೆಯಿಂದ ಪ್ರೇಮಿಗಳ ದಿನಕ್ಕೆ ಒಂದು ಉಡುಗೊರೆ ಸಿಗಲಿದೆ. ಚಿತ್ರದ ಪೋಸ್ಟರ್ ಅನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ದಿವ್ಯ ಹಂಚಿಕೊಂಡಿದ್ದು, ಅನೇಕರು ತಮ್ಮ ಶುಭಾಶಯ ಕೋರಿದ್ದಾರೆ.

English summary
Kannada actress 'Huliraaya' fame Divya Uruduga next movie titeld as Joru. The movie will be directed by Anil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada