»   » ರಮ್ಯಾ 'Whatsapp' ನಲ್ಲಿಲ್ಲ ಯಾಕೆ ನಿಮ್ಗೊತ್ತಾ?

ರಮ್ಯಾ 'Whatsapp' ನಲ್ಲಿಲ್ಲ ಯಾಕೆ ನಿಮ್ಗೊತ್ತಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್...ಮೋಹಕ ತಾರೆ...ಮಾಜಿ ಸಂಸದೆ ರಮ್ಯಾ ಮೇಡಂ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಖತ್ ಪಾಪ್ಯುಲರ್. (ರಮ್ಯಾ ಫೇಸ್ ಬುಕ್ ಫಾಲೋವರ್ಸ್ ಸಂಖ್ಯೆ - 12,55,861. ರಮ್ಯಾ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ - 387K)

ಪ್ರಧಾನಿ ಮೋದಿ ಬಗ್ಗೆ ಹಾಗೂ ಬಿಜೆಪಿ ಆಡಳಿತದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇರ್ತಾರೆ. ಹಾಗೇ, ತಮ್ಮ ಅಭಿಮಾನಿಗಳ ಜೊತೆ ಟಚ್ ನಲ್ಲಿದ್ದಾರೆ. ಅದಕ್ಕೆ ಮೊನ್ನೆಯಷ್ಟೆ ತಮ್ಮ ಹುಟ್ಟುಹಬ್ಬದಂದು ನಡೆದ 'ಪ್ರಶ್ನೋತ್ತರ' ಸೆಷನ್ ಸಾಕ್ಷಿ. [ಬರ್ತ್ ಡೇ ಸ್ಪೆಷಲ್: ಫೇಸ್ ಬುಕ್ಕಿನಲ್ಲಿ ಅಭಿಮಾನಿಗಳೊಂದಿಗೆ ಹರಟಿದ ರಮ್ಯಾ]

ramya

ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೊಂದು ಸಕ್ರಿಯರಾಗಿರುವ ರಮ್ಯಾ 'Whatsapp' ನಲ್ಲೂ ಇದ್ದಾರಾ ಅಂದ್ರೆ ಉತ್ತರ 'ಇಲ್ಲ'.! ಯಾಕಂದ್ರೆ, ರಮ್ಯಾಗೆ 'Whatsapp' ಗ್ರೂಪ್ ಗಳಿಂದಾಗುವ ಕಿರಿಕಿರಿ ಇಷ್ಟವಿಲ್ಲ.

ಮೊದಲು 'Whatsapp' ನಲ್ಲಿದ್ದಾಗ ರಮ್ಯಾ ಸ್ಕೂಲ್ ಗ್ರೂಪ್ ನಲ್ಲಿ ಪ್ರತಿನಿತ್ಯ ಚಾಟಿಂಗ್ ನಡೆಯುತ್ತಿತ್ತಂತೆ. ನಿರಂತರ ಮೆಸೇಜ್ ಟೋನ್ ಕೇಳಿ ಕೇಳಿ ರಮ್ಯಾ 'Whatsapp'ನೇ Uninstall ಮಾಡ್ಬಿಟ್ಟರಂತೆ. ಅಂದಿನಿಂದ ಇಂದಿನವರೆಗೂ ಮತ್ತೆ 'Whatsapp' ಕಡೆ ರಮ್ಯಾ ಮುಖ ಮಾಡಿಲ್ಲ.

ಏಕಾಂತವಾಗಿರುವುದಕ್ಕೆ ಇಷ್ಟ ಪಡುವ ರಮ್ಯಾ 'Whatsapp' ಗೊಡವೆ ಬೇಡ ಅಂತ ಸುಮ್ಮನಿದ್ದಾರಂತೆ. ರಮ್ಯಾಗೆ ಆದಂತೆ ಅದೆಷ್ಟು ಜನಕ್ಕೆ 'Whatsapp' ಗ್ರೂಪ್ ಗಳಿಂದ ಕಿರಿಕಿರಿ ಆಗಿದ್ಯೋ....

English summary
Kannada Actress, Congress Politician, EX MP Ramya is not using Whatsapp. Dou you know the reason? Read the article.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X