»   » ಮೋಹಕ ಪ್ರಿಯೆಯ 'ಸಂಹಾರ' ನೋಟ

ಮೋಹಕ ಪ್ರಿಯೆಯ 'ಸಂಹಾರ' ನೋಟ

Posted By:
Subscribe to Filmibeat Kannada

ಕನ್ನಡದ ಮೋಹಕ ನಟಿ ಹರಿಪ್ರಿಯಾ ಸಖತ್ ಹಾಟ್ ಅಂಡ್ ಬೋಲ್ಡ್. ಅದರಲ್ಲೂ 'ನಿರ್ದೋಸೆ' ಸಿನಿಮಾ ಮಾಡಿದ ಮೇಲಂತೂ ಹರಿಪ್ರಿಯಾ ಅವರ ಹವಾ ಮತ್ತಷ್ಟು ಹೆಚ್ಚಾಯಿತು. ಹೀಗಿರುವಾಗ, ಈ ಅಂದದ ಚೆಲುವೆಯ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಸಖತ್ ಹಾಟ್ ಆಗಿ ಎಲ್ಲರ ಹೃದಯ ಬಡಿತ ಹೆಚ್ಚುಸುತ್ತಿದ್ದ ಹರಿಪ್ರಿಯಾ, ಈ ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಸೀರೆಯುಟ್ಟು ಸಂಪ್ರದಾಯಸ್ಥ ಹೆಣ್ಣು ಮಗಳಾಗಿ ಯುವ ಪ್ರೇಕ್ಷಕರ ಮನಸ್ಸನ್ನ ತಲ್ಲಣಗೊಳಿಸುತ್ತಿದ್ದಾರೆ. ಹೌದು, ಹರಿಪ್ರಿಯಾ ಅವರಂತೆ ಈ ಲುಕ್, ಗೆಟಪ್ ಕೂಡ ಅಷ್ಟೇ ಮೋಹಕವಾಗಿದೆ.

'ರುದ್ರತಾಂಡವ'ವಾಡಿದ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಬಂದ್ರು.!

Actress Haripriya's First Look in Samhara Movie

ಅಂದ್ಹಾಗೆ, ಹರಿಪ್ರಿಯಾ ಅವರ ಈ ಫಸ್ಟ್ ಲುಕ್ 'ಸಂಹಾರ' ಚಿತ್ರದ್ದು. ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಚಿತ್ರವಿದು. ಗುರುದೇಶಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

'ಸಂಹಾರ' ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಹರಿಪ್ರಿಯಾ, ಮತ್ತೊಬ್ಬರು ಕಾವ್ಯಶೆಟ್ಟಿ. ಸದ್ಯ, ಹರಿಪ್ರಿಯಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಹರಿಪ್ರಿಯಾ ಜೊತೆ ಚಿರು ಸರ್ಜಾ ಕೂಡ ಹ್ಯಾಂಡ್ ಸಮ್ ಲುಕ್ ನಲ್ಲಿ ಮೋಡಿ ಮಾಡಿದ್ದಾರೆ.

ಚಿಕ್ಕಣ್ಣ ಹುಟ್ಟುಹಬ್ಬಕ್ಕೆ 'ಸಂಹಾರ' ಚಿತ್ರತಂಡ ನೀಡಿದೆ ವಿಶೇಷ ಗಿಫ್ಟ್!

Actress Haripriya's First Look in Samhara Movie

ಗುರುದೇಶಪಾಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಚಿಕ್ಕಣ್ಣ ವಿಶೇಷ ಪಾತ್ರವನ್ನ ನಿರ್ವಹಿಸಿದ್ದಾರೆ. ಇನ್ನುಳಿದಂತೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. 'ಉಗ್ರಂ' ಖ್ಯಾತಿಯ ರವಿ ಬಸ್ರೂರ್ ಸಂಗೀತ ಒದಗಿಸುತ್ತಿದ್ದಾರೆ. ಜೆ.ಎಸ್.ವಾಲಿ ಕ್ಯಾಮೆರಾ ಕೈಚಳಕ ಸಂಹಾರ ಚಿತ್ರಕ್ಕಿದೆ.

English summary
Kannada Actress Haripriya's First Look Released in Samhara Movie. The Movie Directed By Gurudeshapande and Features Chiranjeevi Sarja in Lead Role

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada