»   » ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ 'ಪ್ರೇಮಲೋಕ'ದ ಸುಂದರಿ.!

ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ 'ಪ್ರೇಮಲೋಕ'ದ ಸುಂದರಿ.!

Posted By:
Subscribe to Filmibeat Kannada

'ಪ್ರೇಮಲೋಕ'ದ ಸುಂದರಿ, ನಿಂಬೆ ಹಣ್ಣಿನಂತ ಹುಡುಗಿ ಜೂಹಿ ಚಾವ್ಲಾ ಮತ್ತೊಮ್ಮೆ ಕನ್ನಡಕ್ಕೆ ಬರ್ತಿದ್ದಾರೆ. ರವಿಚಂದ್ರನ್ ಅವರ 'ಪ್ರೇಮಲೋಕ', 'ಕಿಂದರಿ ಜೋಗಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚಿ ಸ್ಯಾಂಡಲ್ ವುಡ್ ನಿಂದ ಮರೆಯಾಗಿದ್ದ ಕ್ರೇಜಿಸ್ಟಾರ್ ನಾಯಕಿ ಮತ್ತೊಂದು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದ್ಹಾಗೆ, ಈ ಚಿತ್ರದಲ್ಲಿ ನಟನೆಯ ಜೊತೆ ಗಾಯಕಿಯಾಗಿಯೂ ಜೂಹಿ ಮೋಡಿ ಮಾಡಲಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಜೂಹಿ ಚಾವ್ಲಾ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ, ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿಂಗಿಂಗ್ ಟ್ಯಾಲೆಂಟ್ ತೋರಿಸಲು ರೆಡಿಯಾಗಿದ್ದಾರೆ.[ವಿಡಿಯೋ: 'ಪುಷ್ಪಕ ವಿಮಾನ'ದಲ್ಲಿ 'ಜಿಲ್ಕಾ ಜಿಲ್ಕಾ' ಜೂಹಿ ಚಾವ್ಲಾ]

ಅಷ್ಟಕ್ಕೂ, ಜೂಹಿ ಚಾವ್ಲಾ ಕನ್ನಡದಲ್ಲಿ ಮತ್ತೆ ಅಭಿನಯಿಸುತ್ತಿರುವ ಚಿತ್ರ ಯಾವುದು? ಯಾವ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬುದನ್ನ ಮುಂದೆ ನೋಡಿ. ಮುಂದೆ ಓದಿ.....

ಯಾವ ಚಿತ್ರದಲ್ಲಿ?

ಯಶವಂತ್ ಸರ್‍ದೇಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ವೆರಿ ಗುಡ್ 10/10' ಚಿತ್ರದಲ್ಲಿ ಬಾಲಿವುಡ್ ಸುಂದರಿ ಜೂಹಿ ಚಾವ್ಲಾ ಕಾಣಿಸಿಕೊಳ್ಳಲಿದ್ದಾರೆ.

ಸಂಗೀತ ಶಿಕ್ಷಕಿ ಆಗಿ ಜೂಹಿ

ಈ ಚಿತ್ರದಲ್ಲಿ ಜೂಹಿ ಅವರದ್ದು ಅತಿಥಿ ಪಾತ್ರವಾಗಿದ್ದು, ಸಂಗೀತ ಶಿಕ್ಷಕಿಯ ಪಾತ್ರ ಮಾಡ್ತಿದ್ದಾರಂತೆ. ಇನ್ನು ನಟನೆಯ ಜೊತೆ ಕೆಲವು ಹಾಡುಗಳನ್ನ ಕೂಡ ಜೂಹಿ ಚಾವ್ಲಾ ಹಾಡಲಿದ್ದಾರೆ.

ಸಂಗೀತ ಕಲಿತಿದ್ದಾರೆ ಜೂಹಿ

ಅಂದ್ಹಾಗೆ, ಜೂಹಿ ಚಾವ್ಲಾ ವೈಯಕ್ತಿಕವಾಗಿ ಸಂಗೀತಾಭ್ಯಾಸ ಮಾಡಿದ್ದಾರೆ. ಲಂಡನ್ ಭಾರತೀಯ ವಿದ್ಯಾ ಭವನದಲ್ಲಿ ಪಂಡಿತ್ ವಿಶ್ವ ಪ್ರಕಾಶ್ ಅವರ ಬಳಿ ಜೂಹಿ ಸಂಗೀತಾಭ್ಯಾಸ ಮಾಡಿದ್ದಾರೆ. ಅದರ ಜೊತೆಗೆ ನಟಿ ಪದ್ಮಿನಿ ಕೊಲ್ಹಾಪುರಿ ಅವರ ತಂದೆಯ ಮಾರ್ಗದರ್ಶನದಲ್ಲೂ ಸಂಗೀತ ಕಲಿತಿದ್ದಾರಂತೆ.

'ವೆರಿ ಗುಡ್ 10/10' ಚಿತ್ರದ ಬಗ್ಗೆ....

'ವೆರಿ ಗುಡ್ 10/10' ಇದು ಇದು ಮಕ್ಕಳ ಚಿತ್ರವಾಗಿದ್ದು, ಈ ಚಿತ್ರವನ್ನ ಯಶವಂತ್ ಸರ್‍ದೇಶ್ ಪಾಂಡೆ ನಿರ್ದೇಶನ ಮಾಡ್ತಿದ್ದಾರೆ. ವಿ.ಮನೋಹರ್ ಸಂಗೀತ ನೀಡಲಿದ್ದು, ಬಾಂಬೆನಲ್ಲಿ ಸಾಂಗ್ ರೆಕಾರ್ಡಿಂಗ್ ನಡೆಯಲಿದೆ. ಇನ್ನು ಧಾರವಾಡನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.

ಕನ್ನಡದಲ್ಲಿ ಕೊನೆಯ ಚಿತ್ರ

ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದಲ್ಲಿ ಜೂಹಿ ಚಾವ್ಲಾ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಕನ್ನಡ ಸಿನಿಮಾದಲ್ಲಿ ಜೂಹಿ ಅಭಿನಯಿಸುತ್ತಿರುವುದು ನಿಜಕ್ಕೂ ಕನ್ನಡ ಕಲಾಭಿಮಾನಿಗಳಿಗೆ ಖುಷಿ ಕೊಟ್ಟಿದೆ.

English summary
Bollywood actress Juhi Chawla is a trained singer and has sung for films in Hindi. With her next Kannada film, she is set to make her playback singing debut here too.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada