»   » ನಟಿ ಕಾಜಲ್ ಅಗರವಾಲ್ ಬೆವರಿಳಿಸುವ ವಿಡಿಯೋ!

ನಟಿ ಕಾಜಲ್ ಅಗರವಾಲ್ ಬೆವರಿಳಿಸುವ ವಿಡಿಯೋ!

By: ಉದಯರವಿ
Subscribe to Filmibeat Kannada

ದಕ್ಷಿಣದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯುಳ್ಳ ತಾರೆಗಳಲ್ಲಿ ಕಾಜಲ್ ಅಗರವಾಲ್ ಸಹ ಒಬ್ಬರು. ತಮ್ಮ ಮೈಮಾಟಕ್ಕೆ ಬಹಳ ಪ್ರಾಮುಖ್ಯತೆ ಕೊಡುವ ತಾರೆಗಳಲ್ಲಿ ಪ್ರಮುಖ ತಾರೆ ಎನ್ನಬಹುದು. ಈ ವಿಡಿಯೋ ನೋಡಿದರೆ ನಿಮಗೇ ಅರ್ಥವಾಗುತ್ತದೆ, ಅವರ ಸೌಂದರ್ಯ ಸಾಬೂನು ಲಕ್ಸ್ ಅಲ್ಲವೇ ಅಲ್ಲ. ಜಿಮ್ ನಲ್ಲಿ ಮಾಡುವ ಕಸರತ್ತೇ ಅವರ ಸೌಂದರ್ಯ ಸ್ವತ್ತು ಎಂಬುದು.

ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಎತ್ತರಕ್ಕೇರಿದ ಬೆಡಗಿ ಕಾಜಲ್. ಆದರೆ ಯಾಕೋ ಏನೋ ಇತ್ತಿತ್ತಲಾಗಿ ಅವಕಾಶಗಳು ಮಾತ್ರ ಕಡಿಮೆಯಾಗುತ್ತಿವೆ. ತೀರಾ ಇತ್ತೀಚೆಗೆ ತೆರೆಕಂಡ ಜೂನಿಯರ್ ಎನ್ಟಿಆರ್ ಜೊತೆಗಿನ 'ಟೆಂಪರ್' ಚಿತ್ರದಲ್ಲಿ ಗ್ಲಾಮರ್ ಗೆ ಅವಕಾಶವಿದ್ದರೂ ಚಿತ್ರ ಮಾತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. [ಕಾಜಲ್ ಅಗರವಾಲ್ ಕಾಂಡೋಮ್ ಜಾಹೀರಾತು]

Actress Kajal Aggarwal workout Gym video

ಟಾಲಿವುಡ್ ನಲ್ಲಿ ಅವಕಾಶಗಳು ಕಡಿಮೆಯಾದರೂ ತಮಿಳಿನಲ್ಲಿ ಮಾತ್ರ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಕಾಜಲ್ ಅಗರವಾಲ್ ಅವರಿಗೆ. ಧನುಷ್ ಹಾಗು ವಿಶಾಲ್ ಜೊತೆಗೂ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ವಿಕ್ರಮ್ ಜೊತೆ ಅಭಿನಯಿಸುವ ಅವಕಾಶವೂ ಸಿಕ್ಕಿದೆ.

ವಿಕ್ರಮ್ ಜೊತೆಗಿನ ಚಿತ್ರದ ಬಗ್ಗೆ ಮಾತನಾಡಿರುವ ಕಾಜಲ್, "ವಿಕ್ರಮ್ ಜೊತೆಗೆ ಅಭಿನಯಿಸಬೇಕು ಎಂಬುದು ನನ್ನ ಬಹಳ ದಿನಗಳ ಕನಸು. ಕಡೆಗೂ ಆ ಕನಸು ನನಸಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ಹಾಗೂ ಚಿತ್ರಕಥೆ ಭಿನ್ನವಾಗಿರುತ್ತದೆ" ಎಂದಿದ್ದಾರೆ.

ಈ ಚಿತ್ರದ ಬಳಿಕ ಕಾಜಲ್ ಅಗರವಾಲ್ ಅವರು ಸ್ಪೆಷಲ್ ಹಾಡುಗಳಲ್ಲಿ ತೊಡಗಿಕೊಳ್ಳಲಿದ್ದಾರಂತೆ. ಅದು ಐಟಂ ಸಾಂಗ್ ಆಗಿರಬಹುದು, ಅಥವಾ ವಿಶೇಷ ಹಾಡುಗಳಿರಬಹುದು. ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಮಾಡಬಹುದು ಎಂಬ ಐಡಿಯಾ ಕಾಜಲ್ ಅವರದು.

English summary
Kajal Agarwal is working hard to shape up well in the gym. She is sweating out in the gym in order to face the tough competition from her co-stars in the industry. Currently Kajal Agarwal is busy shooting for couple of films in Tamil and Telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada