»   » ವರ್ಷಗಳ ನಂತ್ರ ಬೆಂಗಳೂರಲ್ಲಿ ಒಂದಾದ 'ರಣಧೀರ' ಜೋಡಿ

ವರ್ಷಗಳ ನಂತ್ರ ಬೆಂಗಳೂರಲ್ಲಿ ಒಂದಾದ 'ರಣಧೀರ' ಜೋಡಿ

Posted By:
Subscribe to Filmibeat Kannada

''ಪ್ರೀತಿ ಮಾಡಬಾರದು..ಮಾಡಿದರೆ ಜಗಕ್ಕೆ ಹೆದರಬಾರದು...'' ಅಂತ ''ಒಂದಾನೊಂದು ಕಾಲದಲ್ಲಿ...'' ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ನಲ್ಲಿ ಕುಣಿದು ಕುಪ್ಪಳಿಸಿದ್ದ ಜೋಡಿ ನಟ ರವಿಚಂದ್ರನ್ ಮತ್ತು ನಟಿ ಖುಷ್ಬು.

'ರಣಧೀರ', 'ಅಂಜದ ಗಂಡು', 'ಯುಗಪುರುಷ', 'ಶಾಂತಿ ಕ್ರಾಂತಿ' ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನೀಡಿದ್ದ ಈ ಜೋಡಿ ಇವತ್ತು ಮತ್ತೆ ಒಂದಾಗಿತ್ತು.

ಹಾಗಂದ ಮಾತ್ರಕ್ಕೆ ರವಿಚಂದ್ರನ್ ಮತ್ತು ಖುಷ್ಬು ಮತ್ತೆ ಒಂದಾಗಿ ಬಣ್ಣ ಹಚ್ಚುತ್ತಿದ್ದಾರೆ ಅಂತ ಲೆಕ್ಕ ಹಾಕಬೇಡಿ. ಒಂದ್ಕಾಲದ ಈ ಹಾಟ್ ಫೇವರಿಟ್ ಜೋಡಿ ಒಂದಾಗಿದ್ದು ಇಂದು ರವಿಚಂದ್ರನ್ ಮನೆಯಲ್ಲಿ.

kushboo ravichandran

ಬಿಬಿಎಂಪಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಸಲು ನಟಿ ಖುಷ್ಬು ಇವತ್ತು ಬೆಂಗಳೂರಿಗೆ ಆಗಮಿಸಿದರು. ಸಿಲಿಕಾನ್ ಸಿಟಿಯಲ್ಲಿ ಲ್ಯಾಂಡ್ ಆಗ್ತಿದ್ದ ಹಾಗೆ, ಸೀದಾ ನಟಿ ಖುಷ್ಬು ತೆರಳಿದ್ದು ನಟ ರವಿಚಂದ್ರನ್ ನಿವಾಸಕ್ಕೆ.

ಕನ್ನಡ ಚಿತ್ರರಂಗಕ್ಕೆ ನಟಿ ಖುಷ್ಬು ಅವರನ್ನ ಪರಿಚಯ ಮಾಡಿ ಅವರಿಗೆ ಬಿಗ್ ಬ್ರೇಕ್ ನೀಡಿದ್ದು ನಟ ರವಿಚಂದ್ರನ್. ಇದೇ ಕಾರಣಕ್ಕೆ ಕ್ರೇಜಿ ಸ್ಟಾರ್ ಬಗ್ಗೆ ಖುಷ್ಬುಗೆ ಅಪಾರ ಗೌರವವಿದೆ. ವರ್ಷಗಳಿಂದ ರವಿಚಂದ್ರನ್ ರವರಿಗೆ ಆಪ್ತರಾಗಿರುವ ಖುಷ್ಬು ಬೆಂಗಳೂರಿಗೆ ಬಂದಾಗೆಲ್ಲಾ ಮೊದಲು ರವಿಮಾಮನ ಮನೆಗೆ ಭೇಟಿ ಕೊಡ್ತಾರೆ. [ಕನಸುಗಾರ ರವಿಚಂದ್ರನ್ ಜೊತೆ ಒಂದು ದಿನ]

kushboo-ravichandran

ಅದರಂತೆ ಇವತ್ತು ಕೂಡ ಚುನಾವಣೆ ಪ್ರಚಾರ ಕಾರ್ಯ ಇದ್ದರೂ, ರವಿ ಮಾಮನ ನಿವಾಸಕ್ಕೆ ವಿಸಿಟ್ ಹಾಕಿದರು. ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರವಿಚಂದ್ರನ್ ಪುತ್ರ ವಿಕ್ರಮ್ ಗೆ ಶುಭ ಕೋರಿದರು. [ಜೂನಿಯರ್ ಕ್ರೇಜಿಸ್ಟಾರ್ ಗೆ ರವಿಚಂದ್ರನ್ 'ಭಾರಿ' ಉಡುಗೊರೆ]

ನಂತ್ರ ಕೆಪಿಸಿಸಿ ಕಛೇರಿಗೆ ಬಂದ ಖುಷ್ಬು ಕಾಂಗ್ರೆಸ್ ಪರ ಕೈ ಬೀಸುವುದಕ್ಕೆ ಶುರು ಮಾಡಿದರು. ''ಬಿಬಿಎಂಪಿ ಚುನಾವಣಾ ಪ್ರಚಾರಕ್ಕೆ ನಾನು ಬಂದಿದ್ದೇನೆ. ಬೆಂಗಳೂರನ ತಮಿಳು ಮತದಾರರನ್ನ ಸೆಳೆಯಲು ನನ್ನನ್ನ ಕರೆತಂದಿದ್ದಾರೆ ಅನ್ನುವ ಮಾತುಗಳಿವೆ. ಆದ್ರೆ, ನಾನು ಇಲ್ಲಿ ನನ್ನದೇ ಚಿತ್ರಾಭಿಮಾನಿಗಳನ್ನ ಹೊಂದಿದ್ದೇನೆ. ಹೀಗಾಗಿ ಪಕ್ಷದ ಪರ ಪ್ರಚಾರ ಮಾಡುತ್ತಿರುವೆ. ಯಾವುದೇ ಭಾಷಾ ವಿಚಾರವನ್ನ ಮಧ್ಯೆ ಎಳೆಯಬೇಡಿ'' ಅಂತ ಪತ್ರಿಕಾಗೋಷ್ಠಿಯಲ್ಲಿ ಖುಷ್ಬು ಹೇಳಿದರು.

kushboo

ಪತ್ರಿಕಾಗೋಷ್ಠಿಯ ಬಳಿಕ ಬೆಂಗಳೂರಿನ ಬೀದಿ ಬೀದಿಗಳಲ್ಲಿ ನಟಿ ಖುಷ್ಬು ಪ್ರಚಾರ ನಡೆಸುತ್ತಿದ್ದಾರೆ.

English summary
Multilingual Actress Kushboo came to Bengaluru today to campaign for Congress in BBMP Election. Meanwhile Kushboo visited Rajajinagar and met Kannada Actor Ravichandran.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada