For Quick Alerts
  ALLOW NOTIFICATIONS  
  For Daily Alerts

  ''ಕನ್ನಡ ಸಿನಿಮಾ ಅಂದ್ರೆ ಯಾರಿಗೂ ಗೊತ್ತಿಲ್ಲ'' : ಡಬ್ಬಿಂಗ್ ಬಗ್ಗೆ ಹೀಗಂತಾರೆ ನಟಿ ಲಕ್ಷ್ಮಿ ರೈ!

  By Naveen
  |

  Recommended Video

  ಕನ್ನಡ ಸಿನಿಮಾ ಅಂದ್ರೆ ಯಾರಿಗೂ ಗೊತ್ತಿಲ್ವಾ..? | Filmibeat Kannada

  ಕನ್ನಡ ಚಿತ್ರರಂಗದ ಪಾಲಿಗೆ 'ಡಬ್ಬಿಂಗ್' ಎನ್ನುವುದು ಯಾವಾಗಲೂ ಹಾಟ್ ಟಾಪಿಕ್. ಈಗ ಈ ವಿಷಯದ ಬಗ್ಗೆ ಖ್ಯಾತ ನಟಿ, ಗ್ಲಾಮರ್ ಗೊಂಬೆ ಲಕ್ಷ್ಮಿ ರೈ ಮಾತನಾಡಿದ್ದಾರೆ. ಪಂಚ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ರೈ ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳು ಬರಬೇಕು ಎಂಬ ಕೂಗು ದಿನೇ ದಿನೇ ಹೆಚ್ಚಾಗುತ್ತಿದೆ. ಕಾನೂನಿನಲ್ಲಿ ಡಬ್ಬಿಂಗ್ ಗೆ ಅವಕಾಶ ಇದ್ದರೂ ಸದ್ಯದ ವರೆಗೆ ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ಸಿನಿಮಾಗಳು ಬಿಡುಗಡೆಯಾಗಿಲ್ಲ. ಅಲ್ಲೊಂದು ಇಲ್ಲೊಂದು ಡಬ್ಬಿಂಗ್ ಚಿತ್ರಗಳು ಹೀಗೆ ಬಂದು ಹಾಗೆ ಹೋಗುತ್ತಿವೆ.

  ಡಬ್ಬಿಂಗ್ ಗೆ ಬೆಂಬಲ ಸೂಚಿಸಿದ ರಾಜಕೀಯ ಗಣ್ಯರು ಡಬ್ಬಿಂಗ್ ಗೆ ಬೆಂಬಲ ಸೂಚಿಸಿದ ರಾಜಕೀಯ ಗಣ್ಯರು

  ಒಂದು ಕಡೆ ಡಬ್ಬಿಂಗ್ ಬೇಕು ಅಂದರೆ, ಇನ್ನೊಂದು ಕಡೆ ಡಬ್ಬಿಂಗ್ ಕನ್ನಡಕ್ಕೆ ಕಾಲಿಡಬಾರದು ಎಂಬ ವರ್ಗ ಕೂಡ ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗದಂತೆ ಹೋರಾಟ ನಡೆಸುತ್ತಿದೆ.

  'ಡಬ್ಬಿಂಗ್ ಬೇಕು' ಚಳುವಳಿ ಮತ್ತೆ ಶುರು: ಏನೇ ಆಗಲಿ 'ಮೋಗ್ಲಿ' ಕನ್ನಡಕ್ಕೆ ಬರಲಿ!'ಡಬ್ಬಿಂಗ್ ಬೇಕು' ಚಳುವಳಿ ಮತ್ತೆ ಶುರು: ಏನೇ ಆಗಲಿ 'ಮೋಗ್ಲಿ' ಕನ್ನಡಕ್ಕೆ ಬರಲಿ!

  ಇದೀಗ 'ಝಾನ್ಸಿ' ಸಿನಿಮಾದ ಮೂಲಕ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿರುವ ಲಕ್ಷ್ಮಿ ರೈ ಕನ್ನಡದಲ್ಲಿಯೂ ಡಬ್ಬಿಂಗ್ ಬರಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

  ಕನ್ನಡದಲ್ಲಿ ಡಬ್ಬಿಂಗ್ ಬರಬೇಕು

  ಕನ್ನಡದಲ್ಲಿ ಡಬ್ಬಿಂಗ್ ಬರಬೇಕು

  ''ಕನ್ನಡದಲ್ಲಿ ಡಬ್ಬಿಂಗ್ ಬರಬೇಕು. ಇಲ್ಲಿ ಯಾವ ಕಾರಣಕ್ಕೆ ಡಬ್ಬಿಂಗ್ ನಿಷೇಧ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾವೆಲ್ಲರೂ ಕೂಡ ಇಂಡಿಯನ್ ಸಿನಿಮಾದವರು. ಹೀಗಿದ್ದು, ನಮ್ಮಲ್ಲೇ ನಾವು ಬೇರೆ ಬೇರೆ ಚಿತ್ರರಂಗದವರು ಎಂದು ವಿಭಜನೆ ಮಾಡಿಕೊಂಡಿದ್ದೇವೆ. ಈ ರೀತಿ ಆಗದೆ ನಮ್ಮ ಸಿನಿಮಾಗಳು ಕೂಡ ತುಂಬ ಜನರಿಗೆ ತಲುಪಬೇಕಿದೆ.'' ಎಂದಿರುವ ಲಕ್ಷ್ಮಿ ರೈ ಡಬ್ಬಿಂಗ್ ನಿಂದ ಆಗುವ ಅನುಕೂಲವನ್ನು ಹೇಳಿದ್ದಾರೆ.

  ನಮ್ಮ ಚಿತ್ರಗಳಿಗೆ ಹೊರದೇಶಗಳಲ್ಲಿ ಕೂಡ ಒಳ್ಳೆಯ ಮಾತಿದೆ

  ನಮ್ಮ ಚಿತ್ರಗಳಿಗೆ ಹೊರದೇಶಗಳಲ್ಲಿ ಕೂಡ ಒಳ್ಳೆಯ ಮಾತಿದೆ

  ''ನಮ್ಮ ಸಿನಿಮಾಗಳಿಗೆ ಹೊರದೇಶಗಳಲ್ಲಿ, ಅಲ್ಲಿ ನಡೆಯುವ ಚಿತ್ರೋತ್ಸವಗಳಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡು ಬಗೆಯ ಚಿತ್ರವನ್ನು ಅಲ್ಲಿಯೂ ಹೊಗಳುತ್ತಾರೆ. ಅಂತಹ ಸಿನಿಮಾಗಳಿಗೆ ದೊಡ್ಡ ದೊಡ್ಡ ಪ್ರಶಸ್ತಿಗಳು ಕೂಡ ಬರುತ್ತಿವೆ. ಹೀಗಿರುವಾಗ, ಅದನ್ನು ಇನ್ನು ಹೆಚ್ಚು ಮಾಡುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ.'' - ಲಕ್ಷ್ಮಿ ರೈ, ನಟಿ

  'ಝಾನ್ಸಿ'ಯಾಗಿ ಕನ್ನಡಕ್ಕೆ ವಾಪಸ್ ಬಂದ ಲಕ್ಷ್ಮಿ ರೈ 'ಝಾನ್ಸಿ'ಯಾಗಿ ಕನ್ನಡಕ್ಕೆ ವಾಪಸ್ ಬಂದ ಲಕ್ಷ್ಮಿ ರೈ

  ಕನ್ನಡ ಸಿನಿಮಾ ಅಂದರೆ ಯಾರಿಗೂ ಗೊತ್ತಿಲ್ಲ

  ಕನ್ನಡ ಸಿನಿಮಾ ಅಂದರೆ ಯಾರಿಗೂ ಗೊತ್ತಿಲ್ಲ

  ''ಕನ್ನಡ ಸಿನಿಮಾಗಳು ತನ್ನ ಗಡಿ ಬಿಟ್ಟು ಹೊರಗೆ ಹೋಗಬೇಕು. ವಿದೇಶದ ಪ್ರೇಕ್ಷಕರು ಸಹ ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಬೇಕು. ಇಲ್ಲಿ ಡಬ್ ಮಾಡಲು ಬಿಟ್ಟಿಲ್ಲ. ಆದರೆ, ಎಲ್ಲರಿಗೂ ಕನ್ನಡ ಸಿನಿಮಾ ಅಂದರೆ ಏನು ಅಂತ ಗೊತ್ತಾಗಬೇಕು. ಇವತ್ತು ಕನ್ನಡ ಸಿನಿಮಾ ಅಂದರೆ ಯಾರಿಗೂ ಗೊತ್ತಿಲ್ಲ. ಎಲ್ಲರೂ ತಮಿಳು, ತೆಲುಗು ಸಿನಿಮಾ ಬಗ್ಗೆ ಮಾತನಾಡುತ್ತಾರೆ.'' - ಲಕ್ಷ್ಮಿ ರೈ, ನಟಿ

  ಕನ್ನಡಿಗರು ಗ್ರೇಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ

  ಕನ್ನಡಿಗರು ಗ್ರೇಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ

  ''ತಮಿಳು, ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗುತ್ತದೆ. ಅಲ್ಲಿನ ಸಿನಿಮಾಗಳು ಈ ಭಾಷೆಗಳಿಗೆ ಡಬ್ ಆಗುತ್ತದೆ. ಕನ್ನಡದಲ್ಲಿಯೂ ಈ ರೀತಿ ಆಗಬೇಕು. ಕನ್ನಡಿಗರು ಒಳ್ಳೆ ಒಳ್ಳೆಯ ಗ್ರೇಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜನರು ಒಳ್ಳೆಯ ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಸಿನಿಮಾಗೆ ಭಾಷೆಯ ಗಡಿ ಇಲ್ಲ. ಜನರಿಗೆ ಒಳ್ಳೆಯ ವಿಷಯ ಇರುವ ಸಿನಿಮಾ ಮಾತ್ರ ಬೇಕು. ಜನರು ಡಿಫರೆಂಟ್ ಸಿನಿಮಾಗಳನ್ನು ನೋಡಲು ಬಯಸುತ್ತಾರೆ.''

  'ಝಾನ್ಸಿ' ಸಿನಿಮಾದ ಮೂಲಕ ಕಮ್ ಬ್ಯಾಕ್

  'ಝಾನ್ಸಿ' ಸಿನಿಮಾದ ಮೂಲಕ ಕಮ್ ಬ್ಯಾಕ್

  ಅಂದಹಾಗೆ, ನಟಿ ಲಕ್ಷ್ಮಿ ರೈ ಡಬ್ಬಿಂಗ್ ಬಗ್ಗೆ ಮಾತನಾಡಿರುವ 'ಝಾನ್ಸಿ' ಸಿನಿಮಾದ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ. 'ಝಾನ್ಸಿ' ಲಕ್ಷ್ಮಿ ರೈ ಅವರ ಹೊಸ ಕನ್ನಡ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಅವರು ಮರಳಿದ್ದಾರೆ. ಈ ಹಿಂದೆ 'ಸ್ನೇಹನಾ ಪ್ರೀತಿನಾ', 'ಕಲ್ಪನಾ' ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ಲಕ್ಷ್ಮಿ ನಟಿಸಿದ್ದರು.

  English summary
  Actress Lakshmi Rai spoke about dubbing in 'Jhansi' kannada movie press meet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X