»   » ಕನಸಿನ ರಾಣಿ ಮಾಲಾಶ್ರೀ ಮತ್ತೆ ಸೀರೆಗೆ ಶರಣು

ಕನಸಿನ ರಾಣಿ ಮಾಲಾಶ್ರೀ ಮತ್ತೆ ಸೀರೆಗೆ ಶರಣು

Posted By:
Subscribe to Filmibeat Kannada

ತೆರೆಯ ಮೇಲೆ ಸೀರೆ ಮಾಡುವ ಮೋಡಿಯೇ ಬೇರೆ. ಅದು ಬಾಲಿವುಡ್ ಇರಲಿ, ಸ್ಯಾಂಡಲ್ ವುಡ್ ಇರಲಿ ಸೀರೆ ಮಾಡುವ ಮ್ಯಾಜಿಕ್ ಗೆ ಪ್ರೇಕ್ಷಕರು ಫಿದಾ ಆಗಲೇಬೇಕು. ಕಾಲ ಎಷ್ಟೇ ಬದಲಾದರೂ ಸೀರೆಯ ವಿಚಾರದಲ್ಲಿ ಪ್ರೇಕ್ಷಕರ ಅಭಿರುಚಿ ಮಾತ್ರ ಬದಲಾಗಿಲ್ಲ. ಒಂದು ಕಾಲದಲ್ಲಿ ಸೀರೆಯಲ್ಲೇ ಮೋಡಿ ಮಾಡಿದ ತಾರೆ ಮಾಲಾಶ್ರೀ.

ಇತ್ತೀಚಿನ ದಿನಗಳಲ್ಲಿ ಖಾಕಿ, ಟೈಟ್ ಜೀನ್ಸ್ ಪ್ಯಾಂಟ್ ಗಳಲ್ಲೇ ಮಿಂಚುತ್ತಿರುವ 'ಕನಸಿನ ರಾಣಿ' ಮಾಲಾಶ್ರೀ ಈಗ ಮತ್ತೆ ಸೀರೆಯಲ್ಲಿ ಕಂಗೊಳಿಸಲು ಅಣಿಯಾಗುತ್ತಿದ್ದಾರೆ. 1990ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೇಳಲಾದ ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು 19 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. [ವಯಸ್ಕರಿಗೆ ಮಾತ್ರ: ಸೀರೆಯಲಿ ತಾರೆಗಳ ಸೆಕ್ಸಿ ಲುಕ್]


ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಕಾಂಬಿನೇಷನ್ ಚಿತ್ರಕ್ಕೆ 'ಗಂಗಾ' ಎಂದು ಹೆಸರಿಡಲಾಗಿದೆ. ಈ ಚಿತ್ರವು ಲವ್ ಹಾಗೂ ಆಕ್ಷನ್ ಗಳ ಸಂಗಮ. ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಸಮ್ಮಿಲನ ಇದಾಗಿದೆ. ಈ ಚಿತ್ರವು ರಾಮು ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾಗುಗುತ್ತಿದೆ.

ಇದೆ ತಿಂಗಳ ಜೂನ್ 6 ರಂದು ಚಿತ್ರೀಕರಣ ಮುಹೂರ್ತ ನಿಗದಿಯಾಗಿದೆ. ರಾಮು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬರುತ್ತಿರುವ 36ನೇ ಚಿತ್ರವಾಗಿದೆ. ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ಶ್ರೀನಿವಾಸಮೂರ್ತಿ, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮ ಚೌಧರಿ ಇತರರು ಇದ್ದಾರೆ.

ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅಭಿನಯದಲ್ಲಿ ಜನಪ್ರಿಯ ಚಿತ್ರಗಳಾದ ಪೊಲೀಸನ ಹೆಂಡತಿ, ಸೋಲಿಲ್ಲದ ಸರದಾರ, ಕಿತ್ತೂರಿನ ಹುಲಿ, ಗೃಹಪ್ರವೇಶ, ರೆಡಿಮೆಡ್ ಗಂಡ, ತವರುಮನೆ ಉಡುಗೊರೆ, ಮಾಲಾಶ್ರೀ ಮಾಮಾಶ್ರೀ, ನಗರದಲ್ಲಿ ನಾಯಕರು, ಗಡಿಬಿಡಿ ಅಳಿಯ ಸಿನಿಮಾಗಳು ಬಂದಿವೆ.

ಅಂದಹಾಗೆ ಮಾಲಾಶ್ರೀ ಅವರು ಸೀರೆ ಉಟ್ಟು ಈ 'ಗಂಗಾ' ಸಿನಿಮಾದಲ್ಲಿ ಕಂಗೊಳಿಸಲಿದ್ದಾರೆ. ಸಾಹಸ ಚಿತ್ರಗಳಲ್ಲಿ ಮಾಲಾಶ್ರೀ ಅವರು ಅಭಿನಯಿಸಲು ಪ್ರಾರಂಭಿಸಿದ ಮೇಲೆ ಸೀರೆ ಉಟ್ಟ ಪಾತ್ರಗಳು ಅವರ ಪಾಲಿಗೆ ವಿರಳವಾಗಿದ್ದವು.

ಅರ್ಜುನ್ ಜನ್ಯ ಅವರ ಐದು ಹಾಡುಗಳಿಗೆ ರಾಗ ಸಂಯೋಜನೆ ಇರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಲಾಗುವುದು. ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Malashree again back to saree clad look in upcoming movie 'Ganga'. After 19 years director Om Sai Prakash and Malashree teaming up in this movie, which will go floors on 6th June.
Please Wait while comments are loading...