»   » ಮಾಲಾಶ್ರೀ ಹಳೆ ಹೊಸ ಇಮೇಜ್ ನ ಸಂಗಮ 'ಗಂಗಾ'

ಮಾಲಾಶ್ರೀ ಹಳೆ ಹೊಸ ಇಮೇಜ್ ನ ಸಂಗಮ 'ಗಂಗಾ'

Posted By:
Subscribe to Filmibeat Kannada

1990ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೆಸರಾಗಿದ್ದವರು ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್. ಈಗ 19 ವರ್ಷಗಳ ನಂತರ ಇವರಿಬ್ಬರೂ ಜೊತೆಯಾಗಿ ಸೇರಿದ್ದಾರೆ. ಇದರ ಫಲವೆಂಬಂತೆ 'ಗಂಗಾ' ಸಿನಿಮಾ ಸಂಪೂರ್ಣಗೊಂಡಿದ್ದು ಶೀಘ್ರದಲ್ಲೇ ತೆರೆಗೆ ಬರಲು ತಯಾರಾಗಿದೆ.

ಹೆಸರಾಂತ ನಿರ್ಮಾಪಕ ರಾಮು ನಿರ್ಮಿಸಿರುವ 'ಗಂಗಾ' ಸಿನಿಮಾ 7.1 ಡಿಜಿಟಲ್ ಸರೌಂಡ್ ಸೌಂಡ್ ತಂತ್ರಜ್ಞಾನದ ಲೇಪನದೊಂದಿಗೆ ಹಾಜರಾಗಲಿದೆ. ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಸಮ್ಮಿಲನದ ಈ ಚಿತ್ರದಲ್ಲಿ ಸಾಹಸ ಮತ್ತು ಸೆಂಟಿಮೆಂಟ್ ಸೇರಿದಂತೆ ಹಲವು ವಿಶೇಷಗಳನ್ನು ಒಳಗೊಂಡಿದೆ. [ನಟಿ ಮಾಲಾಶ್ರೀ ಮೇಲೆ ಆಸಿಡ್ ದಾಳಿ ಬೆದರಿಕೆ]

Actress Malashri's Ganga in new sound technology

ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ, ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ.

ಪೋಷಕ ಪಾತ್ರಗಳಲ್ಲಿ ಶ್ರೀನಿವಾಸಮೂರ್ತಿ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧು ಕೋಕಿಲ, ಎಂ ಎನ್ ಲಕ್ಷ್ಮೀದೇವಿ, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮಾ ಚೌಧರಿ ಹಾಗೂ ಇತರರು ಇದ್ದಾರೆ. ವಿನೋದ್ ಮನೋಹರ್ ಅವರ ಸಂಕಲನ, ಕೆ ಕಲ್ಯಾಣ್ ಅವರ ಸಾಹಿತ್ಯ, ಫಳನಿ ರಾಜ್ ಅವರ ಸಾಹಸ, ಬಾಬು ಖಾನ್ ಅವರ ಕಲಾ ನಿರ್ದೇಶನ 'ಗಂಗಾ' ಚಿತ್ರಕ್ಕಿದೆ. (ಫಿಲ್ಮಿಬೀಟ್ ಕನ್ನಡ)

Actress Malashri's Ganga in new sound technology
English summary
Action Queen Malashri's upcoming movie 'Ganga' is releasing in new 7.1 surround sound system. The movie is a blend of Malashri's old and new image. The film directed by Sai Prakash and produced by Ramu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada