»   » ಸಾವಿನ ಸುದ್ದಿಯಿಂದ ಬದುಕಿಬಂದ ನಟಿ ಮನೋರಮಾ

ಸಾವಿನ ಸುದ್ದಿಯಿಂದ ಬದುಕಿಬಂದ ನಟಿ ಮನೋರಮಾ

By: ಶಂಕರ್, ಚೆನ್ನೈ
Subscribe to Filmibeat Kannada

ತಮಿಳು ಚಿತ್ರರಂಗದ ಹೆಸರಾಂತ ಪೋಷಕ ನಟಿ ಮನೋರಮಾ ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಕೋಲಿವುಡ್ ನಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ಈ ಬಗ್ಗೆ ಕೂಡಲೆ ಪ್ರತಿಕ್ರಿಯಿಸಿರುವ ಮನೋರಮಾ ಅವರು ತಾವು ಸತ್ತಿಲ್ಲ ಇನ್ನೂ ಬದುಕಿಯೇ ಇದ್ದೇನೆ ಎಂದು ಉತ್ತರಿಸಿ ಗಾಳಿಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

"ನಾನು ಆರೋಗ್ಯವಾಗಿದ್ದು ಇನ್ನೂ ಗುಂಡುಕಲ್ಲಿನಂತಿದ್ದೇನೆ. ದಯವಿಟ್ಟು ನನ್ನ ಸಾವಿನ ಬಗೆಗಿನ ಗಾಳಿಸುದ್ದಿಗಳನ್ನು ನಂಬಬೇಡಿ. ಈಗಷ್ಟೇ ಚೇತರಿಸಿಕೊಂಡು ಮೂರು ಚಿತ್ರಗಳಿಗೆ ಸಹಿ ಹಾಕಿದ್ದೇನೆ. ಶೀಘ್ರದಲ್ಲೇ ಶೂಟಿಂಗ್ ನಲ್ಲೂ ಭಾಗಿಯಾಗಲಿದ್ದೇನೆ" ಎಂದಿದ್ದಾರೆ ಕೋಲಿವುಡ್ ಪಂಡರಿಬಾಯಿ.

Actress Manorama rubbishing her death rumours

ಅಭಿಮಾನಿಗಳಿಂದ ಪ್ರೀತಿಯಿಂದ 'ಆಚಿ' ಎಂದು ಕರೆಸಿಕೊಂಡಿರುವ ಮನೋರಮಾ ಅವರಿಗೆ ಇತ್ತೀಚೆಗೆ ಆರೋಗ್ಯ ಸ್ವಲ್ಪ ಕೈಕೊಟ್ಟಿತ್ತು. ಸದ್ಯಕ್ಕೆ ಅವರ ವಯಸ್ಸು 75 ವರ್ಷಗಳಾಗಿದ್ದರೂ ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದಾರೆ.

ಕಳೆದ ಐದು ದಶಕಗಳಿಂದ ಬಣ್ಣ ಹಚ್ಚಿರುವ ಮನೋರಮಾ ಅವರು 750ಕ್ಕೂ ಹೆಚ್ಚು ತಮಿಳು ಸಿನಿಮಾಗಳು ಸೇರಿದಂತೆ ಒಟ್ಟು 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಸಾವಿನ ವದಂತಿಯನ್ನು ಕಿಡಿಗೇಡಿಗಳು ಹಬ್ಬಿಸಿದ್ದಾರೆ ಅಷ್ಟೇ.

English summary
Veteran Tamil actress Manorama, rubbishing her death rumours, said she's absolutely alright now and has also agreed to act in three new films. The actress was unwell a few months ago.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada