For Quick Alerts
  ALLOW NOTIFICATIONS  
  For Daily Alerts

  ತಾಯಿಯಾದ ಸಂಭ್ರಮದಲ್ಲಿ ಚಂದನವನದ ನಟಿ ಮಯೂರಿ

  |

  ಚಂದನವನದ ನಟಿ ಮಯೂರಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಮಯೂರಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಮಗುವಿನ ಮುದ್ದಾದ ಕೈ ಫೋಟೋವನ್ನು ಹಂಚಿಕೊಂಡಿರುವ ಮಯೂರಿ, 'ಈ ಸುಂದರ ಅನುಭವವನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಮತ್ತೊಂದು ಸುಂದರವಾದ ಪಯಣ ಪ್ರಾರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  ಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನಟಿ ಮಯೂರಿಸೀಮಂತ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನಟಿ ಮಯೂರಿ

  ಇತ್ತೀಚಿಗಷ್ಟೆ ನಟಿ ಮಯೂರಿ ಗರ್ಭಿಣಿ ಫೋಟೋಶೂಟ್ ಮತ್ತು ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಯೂರಿ ಸುಂದರ ಫೋಟೋಗಳಿಗೆ ಅಭಿಮಾನಿಗಳು ಮತ್ತು ಆಪ್ತರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

  ಅಂದಹಾಗೆ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ 2020 ಜೂನ್ ನಲ್ಲಿ ಹಸೆಮಣೆ ಏರಿದ್ದರು. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ಸರಳವಾಗಿ ಮದುವೆಯಾಗಿದ್ದರು. ನಟ ಜೆಕೆ ಅವರ ತಂದೆ-ತಾಯಿ ಮಯೂರಿಯವರಿಗೆ ಧಾರೆ ಎರೆದು, ಕನ್ಯಾದಾನ ಮಾಡಿದ್ದರು.

  ಯಥರ್ವನ ಮಾತಿನ‌ ಶಕ್ತಿಯ ಬಗ್ಗೆ ರಾಧಿಕಾ ಪಂಡಿತ್ ಏನ್ ಹೇಳಿದ್ದಾರೆ? | Filmibeat Kannada

  ಮಯೂರಿ ಮತ್ತು ಅರುಣ್ ಇಬ್ಬರು ಅನೇಕ ವರ್ಷದ ಸ್ನೇಹಿತರು. ಹತ್ತು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಪುಟ್ಟ ಕಂದಮ್ಮನನ್ನು ಸ್ವಾಗತಿಸಿದ್ದಾರೆ.

  English summary
  Sandalwood Actress Mayuri gave birth to baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X