Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಗು ನಗುತ್ತಿರುವ ಮೇಘಾ ಶೆಟ್ಟಿ ನೋವಿನ ಸಂಗತಿ ನಿಮಗೆ ಗೊತ್ತಿದ್ಯಾ?
ಜೊತೆ ಜೊತೆಯಲಿ ಕನ್ನಡ ಕಿರುತೆರೆಯಲ್ಲಿ ಹೊಸ ಭಾಷ್ಯ ಬರೆದ ಧಾರಾವಾಹಿ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಹಾಗೂ ಹೊಸ ಪ್ರತಿಭೆ ಮೇಘಾ ಶೆಟ್ಟಿ ಮುಖ್ಯಪಾತ್ರಗಳಲ್ಲಿ ನಟಿಸಿರುವ ಧಾರಾವಾಹಿ ಜೊತೆ ಜೊತೆಯಲಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಆರೂರು ಜಗದೀಶ್ ಅವರು ನಿರ್ದೇಶಿಸುತ್ತಿದ್ದಾರೆ.
ವಿಭಿನ್ನವಾದ ಕಥಾಹಂದರ ಹೊಂದಿರುವ ಜೊತೆ ಜೊತೆಯಲಿ ಬಹಳ ಬೇಗ ವೀಕ್ಷಕರ ಮನಸೆಳೆಯಿತು. ಜೊತೆ ಜೊತೆಯಲಿ ಇಂದ ಅನಿರುದ್ಧ್ ಅವರ ಜನಪ್ರಿಯತೆ ದುಪ್ಪಟ್ಟಾಯಿತು. ಅನಿರುದ್‌ರ ಮಾಗಿದ ನಟನೆ ಹಾಗೂ ಮೇಘಾ ಶೆಟ್ಟಿಯ ಮುಗ್ಧ ನಟನೆ ಕಿರುತೆರೆ ಅಭಿಮಾನಿಗಳ ಮನಸೂರೆಗೊಂಡಿದೆ. ಇತ್ತೀಚೆಗೆ ಧಾರವಾಹಿಯಲ್ಲಿ ಅನು ಆರ್ಯನ ಮದುವೆ ನಡೆದಿದೆ. ಇದೀಗ ರಾಜನಂದಿನಿ ನೆನಪು ಅನುಗೆ ಕಾಡುತ್ತಿದೆ, ಈಗ ಇನ್ನು ಕುತೂಹಲ ಘಟ್ಟ ತಲುಪಿದೆ. ಇದನ್ನು ಹೊರತುಪಡಿಸಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಒಳ್ಳೆಯ ಅವಕಾಶ ಅವರನ್ನು ಅರಸಿ ಬರುತ್ತಿವೆ.
ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ಮೇಘಾ ಶೆಟ್ಟಿ ಅವರ ಜೀವನದಲ್ಲಿ ಒಂದು ನೋವಿದೆ. ಆ ನೋವು ಇಂದಿಗೂ ಅವರನ್ನು ಕಾಡುತ್ತಿದೆ. ಅದುವೇ ಅಣ್ಣನ ಮರಣ. ಮೇಘಾ ಶೆಟ್ಟಿ ಅವರ ತಂದೆ ತಾಯಿಗೆ 4 ಜನ ಮಕ್ಕಳು. ಒಬ್ಬ ಗಂಡು ಮಗ ಮತ್ತು ಮೂವರು ಹೆಣ್ಣು ಮಕ್ಳಳು. ಮೇಘಾ ಶೆಟ್ಟಿ ಅವರ ಅಣ್ಣನ ಹೆಸರು ಯಶವಂತ್. ಇವರು ನಿಧನರಾಗಿ ಹಲವು 15 ವರ್ಷ ಕಳೆದಿದೆ. ಬಹಳ ಚಿಕ್ಕ ವಯಸ್ಸಿನಲ್ಲೇ ಯಶವಂತ್ ನಿಧನರಾದರು. ಈ ನೋವು ಈಗಲೂ ಮೇಘಾ ಶೆಟ್ಟಿ ಅವರ ಕುಟುಂಬದಲ್ಲಿದೆ.
ಮೇಘಾ ಶೆಟ್ಟಿ, ಅಣ್ಣನಿಗೆ ಈ ರೀತಿ ಆಗಿದ್ದು ಬಹಳ ನೋವಿನ ಕಥೆ. ಮೇಘಾ ಅವರ ಅಣ್ಣ ಯಶವಂತ್ ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದರು. 2006 ಏಪ್ರಿಲ್ 12ರಂದು ಅಣ್ಣಾವ್ರು ಇಲ್ಲವಾದ ದಿನ ಯಶವಂತ್ ಅವರು ಅಣ್ಣಾವ್ರನ್ನು ಕೊನೆಯ ಬಾರಿ ನೋಡಲೇಬೇಕು ಎಂದು ಹೊರಟರು. ಆ ದಿನ ಲಕ್ಷಾಂತರ ಜನ ಸೇರಿದ್ದರು. ಜನರನ್ನು ಕಂಟ್ರೋಲ್ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಅಣ್ಣಾವ್ರ ಕಾರ್ಯಗಳನ್ನು ಸಹ ಜನರೇ ಮಾಡುವ ಹಾಗೆ ಪರಿಸ್ಥಿತಿ ಕೈತಪ್ಪಿತ್ತು. ಅಂದು ಪೊಲೀಸರು ಜನರ ಮೇಲೆ ಕ್ರಮ ಕೈಗೊಳ್ಳಲೇಬೇಕಿತ್ತು.

ಆ ದಿನ ನಡೆದ ಅನಾಹುತದಲ್ಲಿ ಅಣ್ಣಾವ್ರ ಜೊತೆ 8 ಜನ ತಮ್ಮ ಜೀವನದ ಪಯಣವನ್ನು ಮುಗಿಸಿದ್ದರು. ಅದರಲ್ಲಿ ಒಬ್ಬರು ಮೇಘಾ ಶೆಟ್ಟಿ ಅವರ ಅಣ್ಣ ಯಶವಂತ್. ಬದುಕಿ ಬಾಳಬೇಕಿದ್ದ ಹುಡುಗನ ಜೀವನ ಈ ರೀತಿ ಆಗಿದ್ದು ಆ ಕುಟುಂಬಕ್ಕೆ ನುಂಗಲಾರದ ತುತ್ತಾಗಿತ್ತು. ಮೇಘಾ ಶೆಟ್ಟಿ ಅವರಿಗೆ ಆಗ 3.5 ವರ್ಷ ಆಗಿತ್ತು. ಆಗಷ್ಟೇ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದನ್ನು ಶುರು ಮಾಡಿದ್ದ ಮಗುವಿಗೆ ನಡೆದಿದ್ದೇನು ಎನ್ನುವುದನ್ನು ಸಹ ಅರ್ಥ ಮಾಡಿಕೊಳ್ಳಲು ಆಗಿರಲಿಲ್ಲ. ಈ ವಿಚಾರವನ್ನು ಸ್ವತಃ ಮೇಘಾ ಶೆಟ್ಟಿ ಅವರೆ ಜೀ ಕನ್ನಡ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.