»   » ಡೇಟಿಂಗ್ ಆಪ್ ನಿಂದಾಗಿ ನಟಿ ಮೇಘನಾಗೆ ತೊಂದರೆ

ಡೇಟಿಂಗ್ ಆಪ್ ನಿಂದಾಗಿ ನಟಿ ಮೇಘನಾಗೆ ತೊಂದರೆ

Posted By:
Subscribe to Filmibeat Kannada

ನಮ್ ಏರಿಯಾದಲ್ಲಿ ಒಂದ್ ದಿನ, ಚಾರ್ ಮಿನಾರ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಮೇಘನಾ ಗಾಂವ್ಕರ್ ಅವರಿಗೆ ಡೇಟಿಂಗ್ ಆಪ್ ನಿಂದ ಸಮಸ್ಯೆ ಆಗಿದೆ. ಈ ಬಗ್ಗೆ ನಟಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.ನಟಿ ಮೇಘನಾ ಗಾಂವ್ಕರ್ ಇತ್ತೀಚಿಗಷ್ಟೆ ಫೇಸ್ ಬುಕ್ ಗೆ ಗುಡ್ ಬಾಯ್ ಹೇಳಿ ಇನ್ನು ಮುಂದೆ ಟ್ವಿಟ್ಟರ್ ನಲ್ಲಿ ಮಾತ್ರ ಲಭ್ಯವಾಗಿರುತ್ತೇನೆ ಎಂದು ತಿಳಿಸಿದ್ದರು. ಅದರಂತಯೇ ಡೇಟಿಂಗ್ ಆಪ್ ಸಮಸ್ಯೆ ಬಗ್ಗೆಯೂ ಟ್ವಿಟ್ಟರ್ ಮೂಲಕವೇ ತಿಳಿಸಿದ್ದಾರೆ.

ಟಿಂಡರ್ ಆಪ್ ನಲ್ಲಿ ನಾನು ನಿಮ್ಮ ಬಳಿ ಮಾತನಾಡಿದ್ದೇನೆ. ನಾನು ನಿಮ್ಮ ಜೊತೆ ಡೇಟ್ ಮಾಡಬಹುದಾ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಮೇಘನಾ ಅವರಿಗೆ ಇ ಮೇಲ್ ಮಾಡಿದ್ದಾರೆ. ಇದನ್ನ ನೋಡಿದ ನಂತರ ಮೇಘನಾ ತಮ್ಮ ಟ್ವಿಟ್ಟರ್ ಮೂಲಕ ಆ ವ್ಯಕ್ತಿಗೆ ಉತ್ತರಿಸಿದ್ದಾರೆ.

 actress Meghana Gaonkar has made clear she is not using Tinder App.

ಫೇಸ್ ಬುಕ್ ಗೆ ಗುಡ್ ಬೈ ಹೇಳಿದ ಚಾರ್‌ಮಿನಾರ್ ನಟಿ 

"ನಾನು ಟಿಂಡರ್ ಆಪ್ ನಲ್ಲಿ ಇಲ್ಲ, ಹಿಂದೆಯೂ ಇರಲಿಲ್ಲ. ಮುಂದಕ್ಕೂ ಟಿಂಡರ್ ನಲ್ಲಿ ನಾನು ಇರಲು ಖಂಡಿತಾ ಸಾಧ್ಯವಿಲ್ಲ. ನನ್ನ ಫೋಟೋ ಬಳಕೆ ಆಗಿ ಯಾವುದಾದರೂ ಅಕೌಂಟ್ ಇದ್ದರೆ ದಯವಿಟ್ಟು ರಿಪೋರ್ಟ್ ಮಾಡಿ"

ಆದರೆ ಜನ ಸಾಮಾನ್ಯರು ಕೇಳುತ್ತಿರುವ ಪ್ರಶ್ನೆ ಎಂದರೆ ಮೇಘನಾ ಅವರ ಇ ಮೇಲ್ ಐಡಿ ಅಪರಿಚಿತರಿಗೆ ಹೇಗೆ ಲಭ್ಯ ಆಯಿತು ಎನ್ನುವುದು. ಕೆಲವೊಮ್ಮೆ ಪರಿಚಯ ಇರುವ ವ್ಯಕ್ತಿಗಳಿಂದಲೇ ಈ ರೀತಿಯ ಸಮಸ್ಯೆಗಳು ಉಂಟಾಗುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆ.

English summary
Kannada actress meghana gaonkar has made clear that she is not using the Tinder App. unknown person was sent to email an Meghana "I had spoken to you by Tinder App", So Meghana says on Twitter does not have a tinder account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X