»   » 'ಅನಾಮಿಕ' ನಯನತಾರಾ ಗರ್ಭಿಣಿ ಅಲ್ಲವಂತಪ್ಪೋ

'ಅನಾಮಿಕ' ನಯನತಾರಾ ಗರ್ಭಿಣಿ ಅಲ್ಲವಂತಪ್ಪೋ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ನಟಿ ನಯನತಾರಾ ಅವರಿಗೆ ಮದುವೆನೇ ಆಗಿಲ್ಲ, ಇನ್ನು ಗರ್ಭಿಣಿ ಮಾತು ಎಲ್ಲಿಂದ ಬಂತು. ಮದುವೆ ಆಗದೆನೂ ಗರ್ಭಿಣಿ ಆಗಬಹುದಲ್ಲವೆ? ಬಾಡಿಗೆ ತಾಯಿ ಅವತಾರ ಏನಾದರೂ ಎತ್ತಿದರೆ? ಛೇ ಛೇ ಆ ರೀತಿಯ ಎಲ್ಲಾ ಊಹಾಪೋಹಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಿ.

ಬಾಲಿವುಡ್ ನಲ್ಲಿ ವಿದ್ಯಾಬಾಲನ್ ಅಭಿನಯದ ಕಹಾನಿ ಚಿತ್ರ ಗೊತ್ತಲ್ಲ. ಆ ಚಿತ್ರದಲ್ಲಿ ಗರ್ಭಿಣಿಯಾಗಿ ವಿದ್ಯಾ ತನ್ನ ಕಳೆದುಹೋದ ಗಂಡನಿಗಾಗಿ ಹುಡುಕಾಟ ನಡೆಸುತ್ತಾರೆ. 'ಕಹಾನಿ' ಚಿತ್ರ ಬಾಲಿವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಆಯಿತು.


ಈಗ ಅದೇ ಕಹಾನಿಯನ್ನು ತೆಲುಗು, ತಮಿಳಿಗೆ ರೀಮೇಕ್ ಮಾಡಲಾಗುತ್ತಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ಅನಾಮಿಕ ಎಂದು ಹೆಸರಿಡಲಾಗಿದೆ. ಕಹಾನಿ ಚಿತ್ರದಲ್ಲಿ ಒಂದು ಹಂತದವರೆಗೂ ವಿದ್ಯಾ ಬಾಲನ್ ಗರ್ಭಿಣಿಯಾಗಿ ಕಾಣಿಸುತ್ತಾರೆ. ಆದರೆ 'ಅನಾಮಿಕ' ಚಿತ್ರದಲ್ಲಿ ನಯನತಾರಾ ಗರ್ಭಿಣಿ ಅಲ್ಲವಂತೆ.

ದಕ್ಷಿಣದ ತೆಲುಗು, ತಮಿಳು ಭಾಷೆಗಳಿಗೆ ಹೊಂದುವಂತೆ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ತೆರೆಗೆ ತರಲಾಗುತ್ತಿದೆ. ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಎಂಡಮೋಲ್ ಇಂಡಿಯಾ, ಲಾಗ್ ಲೈನ್ ಪ್ರೊಡಕ್ಷನ್ಸ್, ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ ಸಂಸ್ಥೆಗಳು ಚಿತ್ರವನ್ನು ಜಂಟಿಯಾ ನಿರ್ಮಿಸುತ್ತಿವೆ.

ಕಹಾನಿ ಚಿತ್ರ ಕೋಲ್ಕತ್ತಾ ಹಿನ್ನೆಲೆಯಲ್ಲಿ ಸಾಗುತ್ತದೆ. ಆದರೆ ಅನಾಮಿಕ ಚಿತ್ರಕ್ಕೆ ಹೈದರಾಬಾದ್ ಓಲ್ಡ್ ಸಿಟಿಯನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರಕ್ಕೆ ತೆಲುಗು ಕಾದಂಬರಿಕಾರ, ವ್ಯಕ್ತಿತ್ವ ವಿಕಸನ ಕೃತಿಗಳ ಕರ್ತೃ ಯಂಡಮೂರಿ ವೀರೇಂದ್ರನಾಥ್ ಅವರು ಸಹಾಯಕ ರಚನೆಕಾರರಾಗಿ ಕೆಲಸ ಮಾಡುತ್ತಿದ್ದಾರೆ.

English summary
We had already reported that Nayantara is acting in the remake of Bollywood film ‘Kahaani’. The movie is being simultaneously made as a bilingual in Tamil and Telugu. The movie is titled as ‘Anamika’ and it is directed by Sekhar Kammula.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada