For Quick Alerts
  ALLOW NOTIFICATIONS  
  For Daily Alerts

  ನಯನತಾರಾಗೆ ಬೆವರಿಳಿಸಿದ ಕಸ್ಟಮ್ ಅಧಿಕಾರಿಗಳು

  By Rajendra
  |

  ನಟಿ ನಯನತಾರಾಗೆ ಕಸ್ಟಮ್ ಅಧಿಕಾರಿಗಳು ಬೆವರಿಳಿಸಿದ ಘಟನೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಆಕೆಗೆ ಬೆವರಲು ಚೆನ್ನೈ ತಾಪಮಾನ (36° C) ಸುತಾರಾಂ ಕಾರಣವಲ್ಲ ಎನ್ನಲಾಗಿದೆ. ಬ್ಯಾಂಕಾಕ್‌ನಿಂದ ನಟಿ ನಯನತಾರಾ ತಮ್ಮ ಮ್ಯಾನೇಜರ್ ಹಾಗೂ ಮೇಕಪ್ ಮ್ಯಾನ್ ಜೊತೆ ಚೆನ್ನೈಗೆ ಹಿಂತಿರುಗುತ್ತಿದ್ದರು.

  ಇವರು ಮೂವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿ ಬಳಿಕ ಮನೆಗೆ ಕಳುಹಿಸಿದ್ದಾರೆ. ನಯನತಾರಾ ಅವರನ್ನು ಕಸ್ಟಮ್ ಅಧಿಕಾರಿಗಳಿಗೆ 45 ನಿಮಿಷಗಳಿಗೂ ಅಧಿಕ ಕಾಲ ವಿಚಾರಣೆ ಮಾಡಿದ್ದಾರೆ. ಆದರೆ ಅವರಿಗೆ ತೆರಿಗೆ ಕಟ್ಟದೆ ಇರುವಂತಹ ವಸ್ತುಗಳೇನು ಸಿಕ್ಕಿಲ್ಲ. ಅದೆಲ್ಲಾ ಸರಿ ಇಷ್ಟಕ್ಕೂ ನಯನತಾರಾ ಬ್ಯಾಂಕಾಂಕ್‌ಗೆ ಹೋಗಲು ಕಾರಣ ಏನು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

  ಮೂಲಗಳ ಪ್ರಕಾರ ನಯನತಾರಾ ತಮ್ಮ ಮಾಜಿ ಪ್ರಿಯತಮ ಪ್ರಭುದೇವ ಅವರ ಹಚ್ಚೆಯನ್ನು ಕೈಮೇಲೆ ಹಾಕಿಸಿಕೊಂಡಿದ್ದರು. ಅದನ್ನು ತೆಗೆಸುವ ಸಲುವಾಗಿ ಅವರು ಬ್ಯಾಂಕಾಕ್‌ಗೆ ಹೋಗಿದ್ದರು ಎನ್ನಲಾಗಿದೆ. ಬ್ಯಾಂಕಾಕ್‌ನಿಂದ ಮರಳುತ್ತಿರುವ ನಯನತಾರಾ ಬಗ್ಗೆ ಯಾರೋ ರಾಂಗ್ ಇನ್ಫರ್ಮೇಷನ್ ಕೊಟ್ಟಿದ್ದಾಗಿಯೂ ಸುದ್ದಿ ಇದೆ. (ಏಜೆನ್ಸೀಸ್)

  English summary
  South beauty Nayantara has been detained at Chennai airport by customs officials. The actress was returning from Bangkok to Chennai. After undergoing 45 minutes of grilling, Nayanthara came out profusely sweating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X